ರಾಘಣ್ಣನ ಕಿರಿಯ ಪುತ್ರ ಯುವರಾಜ್ ಕುಮಾರ್ ಮದುವೆಯಾಗಿದ್ದರೂ ದೊಡ್ಡ ಮಗ ವಿನಯ್ ರಾಜಕುಮಾರ್ ಯಾಕಿನ್ನು ಮದುವೆಯಾಗಿಲ್ಲ ಗೊತ್ತಾ?

ದೊಡ್ಮನೆಯ ಕಳಶ ಅಣ್ಣಾವ್ರ ಮೂರು ಮಕ್ಕಳಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಗಂಡು ಮಕ್ಕಳಲ್ಲಿ ಮಧ್ಯದವರು. ಇನ್ನು ರಾಘಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ ದೊಡ್ಡಮಟ್ಟದ ಯಶಸ್ಸನ್ನು ಕಂಡಂತಹ ಸ್ಟಾರ್. ಇನ್ನು ಅವರ ಇಬ್ಬರು ಗಂಡು ಮಕ್ಕಳಾಗಿರುವ ವಿನಯ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಈಗಾಗಲೇ ಚಿತ್ರರಂಗದ ನಂಟನ್ನು ಹೊಂದಿದ್ದಾರೆ.

ವಿನಯ್ ರಾಜಕುಮಾರ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಕಡೆ ಯುವರಾಜ್ ಕುಮಾರ್ ಇನ್ನೇನು ಕೆಲವೇ ತಿಂಗಳಲ್ಲಿ ತಮ್ಮ ಮೊದಲನೇ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಒಟ್ಟಾರೆಯಾಗಿ ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಮನೆಯ ಮತ್ತೊಂದು ತಲೆಮಾರನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ನಿಮಗೆ ತಿಳಿದಿರಬಹುದು ವಿನಯ್ ರಾಜಕುಮಾರ್ ಅವರ ತಮ್ಮ ಆಗಿರುವ ಯುವರಾಜ್ ಕುಮಾರ್ ಅವರು ಈಗಾಗಲೇ ಮದುವೆಯಾಗಿ ಕೆಲವೊಂದು ವರ್ಷಗಳು ಕಳೆದುಹೋಗಿವೆ. ಚಿತ್ರರಂಗಕ್ಕೂ ಕಾಲಿಡುವ ಮೊದಲೇ ಯುವರಾಜ್ ಕುಮಾರ್ ಅವರು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇತ್ತ ಕಡೆ ವಯಸ್ಸು 30 ದಾಟಿದ್ದರೂ ಕೂಡ ವಿನಯ್ ರಾಜಕುಮಾರ್ ಅವರು ಇನ್ನೂ ಕೂಡ ಮದುವೆ ಆಗಿಲ್ಲ. ವಿನಯ್ ರಾಜಕುಮಾರ್ ಅವರ ಹೆಸರು ಹಲವಾರು ನಟಿಯರ ಜೊತೆಗೆ ಕೇಳಿ ಬಂದಿದ್ದರೂ ಕೂಡ ಎಲ್ಲವನ್ನು ಅವರು ತಳ್ಳಿ ಹಾಕಿದ್ದಾರೆ.

ಇನ್ನು ವಿನಯ್ ರಾಜಕುಮಾರ್ ಅವರ ತಂದೆ ರಾಘಣ್ಣ ಹೇಳುವ ಪ್ರಕಾರ ಸದ್ಯಕ್ಕೆ ಅವರ ತಾತ ರಾಜಕುಮಾರ್ ಅವರ ಕನಸನ್ನು ಪೂರೈಸುವ ಜವಾಬ್ದಾರಿ ಆತನ ಮೇಲಿದೆ ಮಾತ್ರವಲ್ಲದೆ ಇನ್ನೂ ಹಲವಾರು ಸಿನಿಮಾಗಳನ್ನು ಅರ್ಥ ಮಾಡಿ ಜನರ ಮನಸ್ಸನ್ನು ಗೆಲ್ಲಬೇಕು. ಹೀಗಾಗಿ ಸದ್ಯಕ್ಕೆ ಆತ ಮದುವೆಯಾಗುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಅವರ ಮದುವೆ ಬಗ್ಗೆ ಎದ್ದಿದ್ದಂತಹ ಎಲ್ಲಾ ಗೊಂದಲಗಳನ್ನು ಪರಿಹಾರ ಮಾಡಿದ್ದಾರೆ ಎನ್ನಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!