Yash: ರಾಧಿಕಾ ಪಂಡಿತ್ ರವರಿಗೆ ಯಶ್ ಅವರು ನೀಡಿದ ಮೊದಲ ಗಿಫ್ಟ್ ಏನಂತೆ ಗೊತ್ತಾ? ಫೋಟೋ ಸಮೇತ ಪ್ರೂಫ್ ನೀಡಿದ ರಾಧಿಕಾ ಪಂಡಿತ್!

Radhika Pandit ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್(Rocking Star Yash) ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಸದ್ಯದ ಮಟ್ಟಿಗೆ ಅತ್ಯಂತ ನೆಚ್ಚಿನ ಜೋಡಿಗಳಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಬ್ಬರೂ ಕೂಡ ಧಾರಾವಾಹಿ ಕ್ಷೇತ್ರದಲ್ಲಿ ಮೊದಲಿಗೆ ಒಟ್ಟಿಗೆ ಪಾದಾರ್ಪಣೆ ಮಾಡಿ ನಟಿಸುತ್ತಾರೆ. ನಂತರ ಸಿನಿಮಾ ರಂಗಕ್ಕೆ ಕೂಡ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಒಟ್ಟಿಗೆ ಕಾಲಿಡುತ್ತಾರೆ.

ಜೀವನದ ಪ್ರಮುಖ ಹೆಜ್ಜೆ ಇಡುವಾಗ ಇಬ್ಬರೂ ಕೂಡ ಹಲವಾರು ಬಾರಿ ಒಟ್ಟಿಗೆ ಹೆಜ್ಜೆಯನ್ನು ಇಟ್ಟಿರುವುದು ನಿಜಕ್ಕೂ ಕೂಡ ಇವರಿಬ್ಬರ ನಡುವಿನ ಬಾಂಧವ್ಯ ಮೊದಲಿನಿಂದಲೂ ಕೂಡ ಎಷ್ಟು ಸ್ಟ್ರಾಂಗ್ ಆಗಿತ್ತು ಎನ್ನುವುದನ್ನು ಸಾಬೀತುಪಡಿಸುತ್ತದೆ. ಇನ್ನು ಇವರಿಬ್ಬರೂ 2016ರಲ್ಲಿ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಮದುವೆ ಆಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇವರಿಗೆ ಇಬ್ಬರು ಪುಟಾಣಿ ಮಕ್ಕಳು ಕೂಡ ಇದ್ದು ಸುಖವಾಗಿ ಸಂಸಾರ ನಡೆಸುತ್ತಿರುವ ಸ್ಯಾಂಡಲ್ವುಡ್ ನ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ(Mr and Mrs Ramachari) ಇವರು.

ಇತ್ತೀಚಿಗಷ್ಟೇ ರಾಧಿಕಾ ಪಂಡಿತ್(Radhika Pandit) ಅವರು ತಮ್ಮ ಬರ್ತಡೆಯ ಸಲುವಾಗಿ ಅಭಿಮಾನಿಗಳ ಜೊತೆಗೆ ಇರಲು ಸಾಧ್ಯವಾಗದ ಕಾರಣದಿಂದಾಗಿ ತಮ್ಮ instagram ಖಾತೆಯಲ್ಲಿ ಪ್ರಶ್ನೋತ್ತರ ಸೆಶನ್ ಅನ್ನು ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿ ಒಬ್ಬರು ಯಶ್ ಅವರು ನಿಮಗೆ ನೀಡಿರುವಂತಹ ಮೊದಲ ಉಡುಗೊರೆ ಯಾವುದು ಎನ್ನುವುದು ಕೇಳಿದ್ದಾರೆ. ಅದಕ್ಕೆ ರಾಧಿಕಾ ಪಂಡಿತ್ ರವರು ಫೋಟೋ ಸಮೇತ ಉತ್ತರ ನೀಡಿದ್ದು ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ.

ಹೌದು ಈ ಪ್ರಶ್ನೆಗೆ ಉತ್ತರ ನೀಡುತ್ತಾ, ಫೋಟೋ ಮೂಲಕ ಉತ್ತರ ನೀಡಿರುವ ರಾಧಿಕಾ ಪಂಡಿತ್ ಅವರು ಆ ಫೋಟೋದಲ್ಲಿ ಯಶ್ ಅವರು ರಾಧಿಕಾ ಪಂಡಿತ್(Radhika Pandit) ರವರಿಗೆ ಒಂದು ಕಟ್ಟು ಕೊತ್ತಂಬರಿ ಸೊಪ್ಪು ನೀಡಿರುವುದು ಕಂಡು ಬರುತ್ತದೆ. ಇದನ್ನು ನಟಿ ರಾಧಿಕಾ ಪಂಡಿತ್ ತಮ್ಮ ಸೋಶಿಯಲ್ ಮೀಡಿಯಾದ ಸ್ಟೋರಿಯಲ್ಲಿ ತಮಾಷೆಯಾಗಿಯೇ ಹಂಚಿಕೊಂಡಿದ್ದಾರೆ. ಇವರಿಬ್ಬರ ಬಾಂಧವ್ಯ ಹೀಗೆ ಸುಖ ಸಂತೋಷಗಳಿಂದಲೇ ಮುಂದುವರೆಯಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!