Yash: ಮತ್ತೆ ಪ್ರಶಾಂತ್ ನೀಲ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರಾ ಯಶ್? ರಿವೀಲ್ ಆಯ್ತು ನೋಡಿ ಹೊಸ ಸುದ್ಧಿ.

Prashanth Neel ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಅವರ ಅಭಿಮಾನಿಗಳು ಸೇರಿದಂತೆ ಸಿನಿಮಾ ಪಂಡಿತರಲ್ಲಿ ಸಾಕಷ್ಟು ಲೆಕ್ಕಾಚಾರಗಳು ಹಾಗೂ ಚರ್ಚೆಗಳು ನಡೆಯುತ್ತಿವೆ. ಕೆಜಿಎಫ್ ಚಾಪ್ಟರ್ 2(Kgf Chapter 2) ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಒಂದು ವರ್ಷಕ್ಕೆ ಹತ್ತಿರವಾಗುತ್ತಾ ಬಂದಿದೆ. ಹೀಗಿದ್ದರೂ ಯಶ್ ಅವರ ಮುಂದಿನ ಸಿನಿಮಾ ಅಂದರೆ 19ನೇ ಸಿನಿಮಾದ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಗಳು ಕಾಣಿಸುತ್ತಿಲ್ಲ.

ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ಯಶ್(Yash) ಅವರ ಮುಂದಿನ ಸಿನಿಮಾ ಪ್ರಾರಂಭವಾಗಬಹುದು ಎನ್ನುವ ಅಲ್ಲೊಂದು ಇಲ್ಲೊಂದು ಸುದ್ದಿಗಳು ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತಿವೆ. ಹೌದು ಕೆಲವು ಸುಧಿಗಳ ಪ್ರಕಾರ ಮತ್ತೊಮ್ಮೆ ಯಶ್ ಅವರು ಪ್ರಶಾಂತ್ ನೀಲ್(Prashanth Neel) ಅವರ ಜೊತೆಗೆ ಸಿನಿಮಾ ಮಾಡಲಿದ್ದಾರಂತೆ.

ಸದ್ಯಕ್ಕೆ ಪ್ರಶಾಂತ್ ನೀಲ್ ಸಲಾರ್(Salaar) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಇನ್ಯಾವುದಪ್ಪ ಹೊಸ ಸಿನಿಮಾ ಎಂಬುದಾಗಿ ನೀವು ಭಾವಿಸಬಹುದು. ಹೌದು ನೀವು ಆಶ್ಚರ್ಯಪಟ್ಟರು ಕೂಡ ಈಗ ಕೇಳಿ ಬರುತ್ತಿರುವ ಹೊಸ ಸುದ್ದಿಯ ಪ್ರಕಾರ ಸಲಾರ್ ಸಿನಿಮಾದಲ್ಲಿಯೇ ಸದ್ಯಕ್ಕೆ ಯಶ್(Yash) ಅವರು ನಟಿಸುತ್ತಿದ್ದಾರಂತೆ. ಅಂದರೆ ಸೋಲಾರ್ ಹಾಗೂ ಕೆಜಿಎಫ್ ಸಿನಿಮಾಗಳಿಗೆ ಈ ಮೂಲಕ ಸಂಬಂಧವಿರಲಿದೆ.

ಮಾಹಿತಿಗಳ ಪ್ರಕಾರ ಸದ್ಯಕ್ಕೆ ಪ್ರಶಾಂತ ನೀಲ್(Prashanth Neel) ಇದೇ ತಿಂಗಳಲ್ಲಿ ಯಶ್ ಅವರ ಪೋರ್ಷನ್ ಅನ್ನು ಯುರೋಪ್ನಲ್ಲಿ ಚಿತ್ರಿಕರಿಸಲಿದ್ದಾರೆ. ಸಲಾರ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವಂತಹ ರಾಕಿಂಗ್ ಸ್ಟಾರ್ ಯಶ್ ಸಿನಿಮಾದಲ್ಲಿ ಏಳು ನಿಮಿಷಗಳ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಪ್ರಭಾಸ್(Prabhas) ನಟನೆಯ ಸಲಾರ್ ಸಿನಿಮಾದಲ್ಲಿ ರಾಕಿ ಭಾಯ್ ಆಗಿ ಯಶ್ ಮಿಂಚಲಿದ್ದಾರೆ.

Leave a Comment

error: Content is protected !!