ಆತ್ಮೀಯರ ಮಗುವನ್ನು ಅಪ್ಪಿ ಮುದ್ದಾಡುತ್ತಿರುವ ಯಶ್ ಮತ್ತು ರಾಧಿಕಾ ಪಂಡಿತ್!

ಒಟ್ಟಿಗೆ ತಮ್ಮ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದಂತಹ ರಾಕಿಂಗ್ ಸ್ಟಾರ್ ಯಶ್(Yash) ಮತ್ತು ಸ್ಯಾಂಡಲ್ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್(Radhika Pandit) ಅವರು ನಿಜ ಜೀವನದಲ್ಲಿಯೂ ಒಟ್ಟಿಗೆ ಇರಬೇಕೆಂದು ನಿರ್ಧರಿಸಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದು ಅನ್ಯೋನ್ಯವಾಗಿ ಜೀವನ ನಡೆಸುತ್ತಾ ಇದರರಿಗೆ ಆದರ್ಶವಾಗುವಂತೆ ಬದುಕುತ್ತಿದ್ದಾರೆ. ಪತಿಯ ಪ್ರತಿ ಹೆಜ್ಜೆಯಲ್ಲಿಯು ಪ್ರೋತ್ಸಾಹಿಸುತ್ತಾ ಅವರ ಪ್ರತಿ ಕೆಲಸಕ್ಕೂ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವಂತಹ ರಾಧಿಕಾ ಪಂಡಿತ್ ಅವರು ಆಗಾಗ ಯಶ್ ಅವರ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಹಾಗೂ ಕೆಲ ವೈಯಕ್ತಿಕ ಕ್ಷಣಗಳಲ್ಲಿ ಕಾಣಿಸಿಕೊಳ್ಳುತ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳು ತಮ್ಮ ಆತ್ಮೀಯರ ಮನೆಗೆ ಭೇಟಿ ನೀಡಿ ಮಗುವನ್ನು ಹಿಡಿದು ಮುದ್ದಾಡಿದಿದ್ದಾರೆ. ಅದರ ಕೆಲ ಫೋಟೋಗಳು ಸದ್ಯ ಅಭಿಮಾನಿಗಳ ವಲಯದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸ್ಟಾರ್ ಸೆಲೆಬ್ರಿಟಿಗಳಾದರೂ ಕೂಡ ಬಹಳ ಸರಳವಾಗಿ ತಮ್ಮ ಸಂಬಂಧಿಕರ ಮನೆಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್(Yash & Radhika Pandit) ಕಾಲ ಕಳೆದಿರುವ ಪರಿಗೆ ಫಿದಾ ಆಗಿ ಹೋಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ಮರುನ್ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಬಹಳ ರಾಯಲ್ ಆಗಿ ಕಾಣಿಸಿಕೊಂಡರೆ, ರಾಧಿಕಾ ಪಂಡಿತ್(Radhika Pandit) ಗುಲಾಬಿ ಬಣ್ಣದ ಬ್ಲೌಸ್ ಧರಿಸಿ ಕಂದು ಬಣ್ಣದ ಸೀರೆಯುಟ್ಟು ಅದಕ್ಕೆ ಮ್ಯಾಚಿಂಗ್ ಆದ ಆಭರಣಗಳನ್ನು ಹಾಕಿಕೊಂಡು ಬಹಳ ಮೋಹಕವಾಗಿ ಸೋಫಾದ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ.

ಫೋಟೋದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಮಗುವೊಂದನ್ನು ಹಿಡಿದು ಅಪ್ಪಿ, ಮುದ್ದಾಡಿದ್ದಾರೆ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತೇವೆ. ಕೆಜಿಎಫ್ ಚಾಪ್ಟರ್ 2 (KGF 2) ಬಿಡುಗಡೆಗೊಂಡು ವರ್ಷಗಳ ಉರುಳಿದರು ಕೂಡ ತಮ್ಮ ಮುಂದಿನ ಸಿನಿಮಾದ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿರದಂತಹ ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ಕೆಲ ದಿನಗಳ ಹಿಂದೆ ಸಿನಿಮಾದ ಶೀಷಿಕೆಯನ್ನು ಅನಾವರಣಗೊಳಿಸಿದ್ದು,

ಮ್ಯಾಕ್ಸ್ ಚಿತ್ರದ(Max cinema) ಶೂಟಿಂಗ್ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್(Radhika Pandit) ತಮ್ಮ ಇಬ್ಬರು ಮುದ್ದಾದ ಮಕ್ಕಳಾದ ಐರಾ ಮತ್ತು ಯಥರ್ವಾ ಅವರ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಒಂದೊಳ್ಳೆ ಚಿತ್ರಕಥೆ ಅವರನ್ನು ಅರಸಿ ಬಂದರೆ ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ ಎಂಬ ಭರವಸೆಯನ್ನು ಅಭಿಮಾನಿಗಳಿಗೆ ನೀಡಿರುವ ರಾಧಿಕಾ ಯಾವಾಗ ಮತ್ತೆ ಬಣ್ಣದ ಬದುಕಿಗೆ ಕಂಬ್ಯಾಕ್ ಮಾಡಲಿದ್ದಾರೆ? ಎಂಬುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!