Yash Radhika: ಇಡೀ ಕರ್ನಾಟಕದ ನೆಚ್ಚಿನ ಜೋಡಿ ಆಗಿರುವ ರಾಧಿಕಾ ಪಂಡಿತ್ ಹಾಗೂ ಯಶ್ ರವರ ಚಿಕ್ಕ ವಯಸ್ಸಿನ ಫೋಟೋ ನೋಡಿ ಕಳೆದೋಗ್ತೀರ!

Yash Radhika Pandit ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಕೂಡ ಕನ್ನಡ ಕಿರುತೆರೆಗೆ ಮೊದಲಿಗೆ ಒಟ್ಟಿಗೆ ಕಾಲಿಡುತ್ತಾರೆ ನಂತರ ಮೊಗ್ಗಿನ ಮನಸ್ಸು(Moggina Manassu) ಸಿನಿಮಾದ ಮೂಲಕ ನಾಯಕ ಹಾಗೂ ನಾಯಕಿಯಾಗಿ ಕೂಡ ಒಟ್ಟಿಗೆ ಕಾಲಿಡುತ್ತಾರೆ. ಜೀವನದ ಪ್ರತಿಯೊಂದು ಪ್ರಮುಖ ಘಟ್ಟಗಳಲ್ಲಿ ಇಬ್ಬರು ಕೂಡ ಜೊತೆಯಾಗಿ ನಿಂತಿದ್ದು ಇವರಿಬ್ಬರ ನಡುವಿನ ಬಾಂಧವ್ಯ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ.

ಇದಾದ ನಂತರ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದ ಆನ್ ಸ್ಕ್ರೀನ್ ಸೂಪರ್ ಹಿಟ್ ಜೋಡಿಯಾಗಿ ಕೂಡ ಈ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ನಡುವಿನ ಎರಡು ವರ್ಷ ವಯಸ್ಸಿನ ಅಂತರಾದ ನಡುವೆ ಕೂಡ ಇವರಿಬ್ಬರು ಇಡೀ ಕರ್ನಾಟಕ ಮೆಚ್ಚುವಂತೆ ಮದುವೆಯಾಗಿ ಈಗ ಎರಡು ಮಕ್ಕಳ ತಂದೆ ತಾಯಿಯಾಗಿದ್ದಾರೆ.

ನಿಜಕ್ಕೂ ಕೂಡ ಪ್ರತಿಯೊಬ್ಬರೂ ಇವರಿಬ್ಬರ ಜೀವನವನ್ನು ಜೀವನ ಪಾಠವನ್ನಾಗಿ ತೆಗೆದುಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಬ್ಬರೂ ಕೂಡ ಮಾಧ್ಯಮ ವರ್ಗದಿಂದ ಕುಟುಂಬದಿಂದ ಬಂದು ಹಿಂದೂ ಕನ್ನಡ ಚಿತ್ರರಂಗಕ್ಕೆ ಕಾಲಿಡುವಂತಹ ಪ್ರತಿಯೊಬ್ಬ ಯುವ ನಟ ನಟಿಯರಿಗು ಸ್ಪೂರ್ತಿ ಇವರು.

ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ರಾಧಿಕಾ ಪಂಡಿತ್(Radhika Pandit) ಇಬ್ಬರ ಚಿಕ್ಕ ವಯಸ್ಸಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇಬ್ಬರೂ ಕೂಡ ಆ ವಯಸ್ಸಿನಲ್ಲಿ ಯಾವ ರೀತಿಯಲ್ಲಿ ಕಾಣುತ್ತಿದ್ದರು ಎಂಬುದನ್ನು ನೀವು ಈ ಫೋಟೋಗಳನ್ನು ನೋಡುವ ಮೂಲಕ ಅರ್ಥಮಾಡಿಕೊಳ್ಳಬಹುದಾಗಿದೆ. ಇವರಿಬ್ಬರ ಈ ಕ್ಯೂಟ್ ಫೋಟೋ ನೋಡಿದ ಮೇಲೆ ನಿಮಗೆ ಏನನ್ನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!