KL Rahul: ಅಳಿಯನ ಕಳಪೆ ಫಾರ್ಮ್ ಬಗ್ಗೆ ಸುನಿಲ್ ಶೆಟ್ಟಿ ನೀಡಿದ ಸರ್ಪ್ರೈಸಿಂಗ್ ಹೇಳಿಕೆ ಏನು ಗೊತ್ತಾ?

Suniel Shetty ನಮ್ಮ ಕರ್ನಾಟಕ ಮೂಲದ ಖ್ಯಾತ ಕ್ರಿಕೆಟಿಗ ಕೆ ಎಲ್ ರಾಹುಲ್(KL Rahul) ರವರು ನಮ್ಮ ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ನಿರ್ಮಾಪಕ ಆಗಿರುವಂತಹ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ನಟಿ ಅಥಿಯಾ ಶೆಟ್ಟಿ(Athiya Shetty) ಅವರನ್ನು ಕೆಲವು ತಿಂಗಳುಗಳ ಹಿಂದಷ್ಟೇ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇನ್ನು ಮದುವೆ ಆಗುವುದಕ್ಕಿಂತ ಮುಂಚೆನೇ ಕೆಎಲ್ ರಾಹುಲ್(KL Rahul) ರವರು ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸುತ್ತಿದ್ದರು ಆದರೆ ಈಗ ಇತ್ತೀಚಿಗಂತೂ ಭಾರತೀಯ ಕ್ರಿಕೆಟ್ ತಂಡದಿಂದ ತಮ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನದ ಮೂಲಕ ಉಪನಾಯಕನ ಸ್ಥಾನವನ್ನು ಕೂಡ ಕಳೆದುಕೊಂಡಿದ್ದಾರೆ. ಇದು ಅವರ ಕರಿಯರ್ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಎಲ್ಲಕ್ಕಿಂತ ಪ್ರಮುಖವಾಗಿ ಈಗ ಐಪಿಎಲ್ ಪ್ರಾರಂಭವಾದ ಮೇಲೆ ಲಕ್ನೋ(LSG) ತಂಡದ ನಾಯಕನಾಗಿದ್ದರೂ ಕೂಡ ನಿರೀಕ್ಷಿತ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಕೆಎಲ್ ರಾಹುಲ್ ಅವರ ಅಭಿಮಾನಿಗಳಲ್ಲಿ ಕಾಡುತ್ತಿರುವಂತಹ ಪ್ರಶ್ನೆಯಾಗಿದೆ. ಇದರ ನಡುವೆ ಈ ವಿಚಾರಗಳ ಕುರಿತಂತೆ ಅವರ ಮಾವ ಹಾಗೂ ಬಾಲಿವುಡ್ ನಟ ಆಗಿರುವಂತಹ ಸುನಿಲ್ ಶೆಟ್ಟಿ(Suniel Shetty) ಖಡಕ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ವೈಫಲ್ಯವನ್ನು ಹೇಗೆ ಎದುರಿಸಬೇಕು ಎನ್ನುವಂತಹ ದಾರಿ ಕೆ ಎಲ್ ರಾಹುಲ್ ಗೆ ತಿಳಿದಿದೆ. ಹಾಗೆ ಆಡು ಹೀಗೆ ಆಡು ಎನ್ನುವುದಕ್ಕೆ ಇದೇನು ಗಲ್ಲಿ ಕ್ರಿಕೆಟ್ ಅಲ್ಲ ಎನ್ನುವುದಾಗಿ ಟೀಕಾಕಾರರಿಗೆ ಸುನಿಲ್ ಶೆಟ್ಟಿ(Suniel Shetty) ನೇರವಾಗಿ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ಇದೇ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಭಾರತದಲ್ಲಿಯೇ ಏಕದಿನ ವರ್ಲ್ಡ್ ಕಪ್ ನಡೆಯುವ ಕಾರಣದಿಂದಾಗಿ ಕೆ ಎಲ್ ರಾಹುಲ್(KL Rahul) ರವರು ಈ ಬಾರಿ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದು ಅತ್ಯವಶ್ಯಕವಾಗಿದೆ.

Leave a Comment

error: Content is protected !!