Ugadi: ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಯುಗಾದಿ ಆಚರಣೆ ಹೇಗಿತ್ತು ಗೊತ್ತಾ?

Yash Radhika ಅಂತೂ ಇಂತೂ ಹಿಂದುಗಳ ಹೊಸ ವರ್ಷವಾಗಿರುವ ಯುಗಾದಿ ಹಬ್ಬವನ್ನು ಜನಸಾಮಾನ್ಯರು ಸೇರಿದಂತೆ ಸೆಲೆಬ್ರಿಟಿಗಳು ಕೂಡ ಸಂತೋಷದಿಂದ ಆಚರಿಸಿದ್ದಾರೆ. ಬೇವು ಬೆಲ್ಲದ ಹಬ್ಬವಾಗಿರುವ ಯುಗಾದಿಯನ್ನು ಎಲ್ಲರೂ ಕೂಡ ಸಂಭ್ರಮ ಸಂತೋಷದಿಂದ ಆಚರಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ರಾಕಿಂಗ್ ಸ್ಟಾರ್ ಯಶ್(Rocking Star Yash) ದಂಪತಿಗಳ ಬಗ್ಗೆ.

ಭಾರತದ ಬೇರೆ ಸೆಲೆಬ್ರಿಟಿಗಳಿಗೆ ಹೋಲಿಸಿದರೆ ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ರಾಧಿಕಾ ಪಂಡಿತ್(Radhika Pandit) ದಂಪತಿಗಳು ಹಿಂದುಗಳ ಆಚರಣೆ ಇರುವಂತಹ ಹಬ್ಬವನ್ನು ಅತ್ಯಂತ ಕ್ರಮಬದ್ಧವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ಆಚರಿಸುವುದರಿಂದಲೇ ಎಲ್ಲರಿಗೂ ಕೂಡ ಅವರು ಇಷ್ಟವಾಗುತ್ತಾರೆ. ನಿಜಕ್ಕೂ ಕೂಡ ಉಳಿದ ಸೆಲೆಬ್ರಿಟಿ ಗಳಿಗೆ ಇವರಿಬ್ಬರು ಮಾದರಿ ಎಂದರು ಕೂಡ ತಪ್ಪಾಗಲಾರದು.

ಇನ್ನು ಈಗ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು ತಮ್ಮ ಮನೆಯಲ್ಲಿ ಯುಗಾದಿ ಹಬ್ಬವನ್ನು(Ugadi Celebration) ಆಚರಿಸಿಕೊಂಡಿರುವ ಬಗ್ಗೆ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಪ್ರತಿಯೊಬ್ಬರೂ ಕೂಡ ಈ ಕುರಿತಂತೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ರಾಧಿಕಾ ಪಂಡಿತ್ ರವರು ಹಂಚಿಕೊಂಡಿರುವಂತಹ ಈ ಫೋಟೋಗಳನ್ನು ನೋಡಬಹುದಾಗಿದೆ.

ಕೇವಲ ಯುಗಾದಿ ಹಬ್ಬ ಮಾತ್ರವಲ್ಲದೆ ಪ್ರತಿಯೊಂದು ಹಿಂದೂ ಹಬ್ಬಗಳಲ್ಲಿ ತಮ್ಮ ಸಂಪ್ರದಾಯವನ್ನು ತಮ್ಮ ಹಬ್ಬದ ಆಚರಣೆಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಬಿಂಬಿಸುವುದರ ಜೊತೆಗೆ ಯುವಜನತೆಯಲ್ಲಿ ಕೂಡ ನಮ್ಮ ಸಂಪ್ರದಾಯಗಳನ್ನು ಮರೆಯಬೇಡಿ ಎನ್ನುವ ಸಂದೇಶವನ್ನು ರಾಕಿಂಗ್ ಸ್ಟಾರ್ ಯಶ್(Yash) ರವರು ಪರೋಕ್ಷವಾಗಿಯೇ ನೀಡುತ್ತಿದ್ದಾರೆ ಎಂದರು ಕೂಡ ತಪ್ಪಾಗಲಾರದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!