Box Office Sultan: ಡಿ ಬಾಸ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಬಿರುದು ನೀಡಿದ್ದು ಯಾರು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಂದೆ ತೂಗುದೀಪ ಶ್ರೀನಿವಾಸ್(Thoogudeepa Srinivas) ರವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳ ನಾಯಕನಾಗಿ ಸಾಕಷ್ಟು ಹೆಸರನ್ನು ಸಂಪಾದಿಸಿದರು ಕೂಡ ಅವರ ಮಗ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ಕಷ್ಟ ಹಾಗೂ ಅವಮಾನಗಳನ್ನು ಎದುರಿಸಿ ಅವುಗಳನ್ನೆಲ್ಲ ಮೆಟ್ಟಿ ನಿಂತು ನಂತರವೇ ನಾಯಕ ನಟನಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಇನ್ನು ಮೆಜೆಸ್ಟಿಕ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ದರ್ಶನ್(Darshan) ರವರು ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಇಂದಿಗೂ ಅವರ ಪ್ರತಿಯೊಂದು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ತಮ್ಮದೇ ಆದಂತಹ ರೆಕಾರ್ಡುಗಳನ್ನು ಕ್ರಿಯೇಟ್ ಮಾಡಿವೆ. ಅವರ ಸಿನಿಮಾಗಳು ವಿಮರ್ಶಕರ ಬಾಯಲ್ಲಿ ಗೆಲ್ಲುತ್ತೋ ಇಲ್ವೋ ಗೊತ್ತಿಲ್ಲ ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಸೋತ ಉದಾಹರಣೆಯೇ ಇಲ್ಲ. ಅದಕ್ಕಾಗಿ ಅವರನ್ನು ಸಿಂಗಲ್ ಸ್ಕ್ರೀನ್ ಕಿಂಗ್ ಎನ್ನುವುದಾಗಿ ಕೂಡ ಕರೆಯುತ್ತಾರೆ.

ದರ್ಶನ್ ಅವರಿಗೆ ಅಭಿಮಾನಿಗಳ ಕಡೆಯಿಂದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್(Dboss) ಹೇಗೆ ಹತ್ತು ಹಲವಾರು ಬಿರುದುಗಳು ಬಂದಿವೆ ಆದರೆ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಬಿರುದು ಮಾತ್ರ ಅಭಿಮಾನಿಗಳಿಂದ ಬಂದ ಬಿರುದಲ್ಲ. ಅಷ್ಟಕ್ಕೂ ದರ್ಶನ್ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನ(Box Office Sultan) ಎನ್ನುವ ಬಿರುದನ್ನು ನೀಡಿದ್ದು ಯಾರು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ದರ್ಶನ್ ಅವರ ಪ್ರತಿಯೊಂದು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿಯಲ್ಲಿ ಕಲೆಕ್ಷನ್ ಮಾಡಿ ಗೆಲ್ಲುತ್ತಿದ್ದವು ಇದನ್ನು ನೋಡಿದಂತಹ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಹಾಗೂ ಪತ್ರಕರ್ತ ಆಗಿರುವ ವಿಜಯ ಸಾರಥಿ(Vijaya Sarathi Kannada Actor) ಅವರು ದರ್ಶನ್ ಅವರಿಗೆ ಈ ಬಿರುದನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆದರೆ ದುರದೃಷ್ಟವಶಾತ್ ಇಂದು ವಿಜಯ ಸಾರಥಿ ಅವರು ನಮ್ಮೊಂದಿಗೆ ಇಲ್ಲ.

Leave a Comment

error: Content is protected !!