Radhika Pandit: ನಟಿ ರಾಧಿಕಾ ಪಂಡಿತ್ ತಮ್ಮ ಮೊದಲ ಸಂಪಾದನೆಯಲ್ಲಿ ಖರೀದಿಸಿದ್ದು ಏನು ಗೊತ್ತಾ? ಇಂದಿಗೂ ಅದು ಅವರತ್ರಾನೆ ಇದೆ.

Radhika Pandith ನಟಿ ರಾಧಿಕಾ ಪಂಡಿತ್(Radhika Pandit Actress) ಇತ್ತೀಚಿಗಷ್ಟೇ ತಮ್ಮ 39ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದು ಮನೆಯಿಂದ ದೂರಾನೇ ಇದ್ದು ತಮ್ಮ ಪತಿ ಮಕ್ಕಳು ಹಾಗೂ ಪೋಷಕರ ಜೊತೆಗೆ ಸರಳವಾಗಿಯೇ ತಮ್ಮ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಮಾತ್ರವಲ್ಲದೆ ಈ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿದ್ದ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರನ್ನು ಮದುವೆಯಾದ ನಂತರ ಸಂಪೂರ್ಣವಾಗಿ ನಟಿಸುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಆದರೆ ಇಂದಿಗೂ ಕೂಡ ರಾಧಿಕಾ ಪಂಡಿತ್ ರವರು ಸಿನಿಮಾದಲ್ಲಿ ನಟಿಸಲಿ ಎಂದು ಕಾಯುತ್ತಿರುವ ಅಭಿಮಾನಿಗಳ ಸಂಖ್ಯೆ ಮಾತ್ರ ದೊಡ್ಡದಿದೆ.

ಇನ್ನು ಇತ್ತೀಚಿಗಷ್ಟೇ ತಮ್ಮ ಜನ್ಮದಿನದ ಪ್ರಯುಕ್ತ ಅಭಿಮಾನಿಗಳ ಜೊತೆಗೆ ಮಾತನಾಡಲು instagram ಖಾತೆಯಲ್ಲಿ ಪ್ರಶ್ನೋತ್ತರ ಸೆಶನ್ ಅನ್ನು ಕೂಡ ಇಟ್ಟುಕೊಂಡಿದ್ದರು. ಇನ್ನು ಈ ಸಂದರ್ಭದಲ್ಲಿ ಅವರ ಬಳಿ ಇರುವಂತಹ ಒಂದು ವಸ್ತುವಿನ ಬಗ್ಗೆ ಅಭಿಮಾನಿ ಪ್ರಶ್ನೆ ಮಾಡಿದ್ದು ಅದನ್ನು ತಾನು ತನ್ನ ಮೊದಲ ಸಂಪಾದನೆಯಲ್ಲಿ ಖರೀದಿಸಿದ್ದು ಎಂಬುದಾಗಿ ರಾಧಿಕಾ ಪಂಡಿತ್(Radhika Pandith) ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ವಸ್ತು ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೆ ಅಭಿಮಾನಿ ಒಬ್ಬರು ನಟಿ ರಾಧಿಕಾ ಪಂಡಿತ್(Kannada actress Radhika Pandit) ಅವರು ಸದಾಕಾಲ ತಮ್ಮ ಕೈಯಲ್ಲಿ ಧರಿಸುವಂತಹ ಸಿಲ್ವರ್ ಉಂಗುರದ ಬಗ್ಗೆ ಕೇಳಿದ್ದು, ಇದಕ್ಕೆ ಉತ್ತರ ಎನ್ನುವಂತೆ ರಾಧಿಕಾ ಪಂಡಿತ್ ಇದು ಸಿಲ್ವರ್ ಅಲ್ಲ ಬದಲಾಗಿ ವೈಟ್ ಗೋಲ್ಡ್. ಇದನ್ನು ನಾನು ನನ್ನ ಮೊದಲ ಸಂಪಾದನೆಯಿಂದ ಖರೀದಿಸಿದ್ದು ಇಂದಿಗೂ ಕೂಡ ಇದನ್ನು ನನ್ನೊಂದಿಗೆ ಇಟ್ಟುಕೊಂಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಇಂದು ಅವರ ಬಳಿ ಎಷ್ಟೇ ಹಣ ಇರಲಿ ಆದರೆ ತಮ್ಮ ಮೊದಲ ಸಂಪಾದನೆಯಿಂದ ಪಡೆದಿರುವಂತಹ ಈ ಒಂದು ವಸ್ತು ಅವರ ಜೀವನದಲ್ಲಿ ಸ್ಪೆಷಲ್ ಸ್ಥಾನವನ್ನು ಹೊಂದಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

error: Content is protected !!