Yajamana: ಅಂದಿನ ಕಾಲದಲ್ಲೇ ವಿಷ್ಣುವರ್ಧನ ನಟನೆಯ ಯಜಮಾನ ಸಿನಿಮಾ ಎಷ್ಟು ಕೋಟಿ ಗಳಿಸಿತ್ತು ಗೊತ್ತಾ? ಇಂದಿಗೂ ಮುರಿಯಲಾಗದ ದಾಖಲೆ!

Dr Vishnuvardhan ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್(Abhinaya Bhargava) ರವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದಾರೆ. ನಿಜ ಜೀವನ ಇರಲಿ ತೆರೆಯ ಮೇಲೆ ಇರುವಂತಹ ನಟನೆ ಇರಲಿ ಎರಡರಲ್ಲೂ ಕೂಡ ಅವರೊಬ್ಬ ಪರ್ಫೆಕ್ಟ್ ಮ್ಯಾನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಇಂದು ಅವರಿಲ್ಲದಿದ್ದರೂ ಕೂಡ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿಯನ್ನುದಾಗಿ ಅಷ್ಟಿಲ್ಲದೆ ಕರೆಯುತ್ತಾರೆ ನೀವೇ ಹೇಳಿ.

200 ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಾಹಸಸಿಂಹ ವಿಷ್ಣುವರ್ಧನ್(Sahasa simha Vishnuvardhan) ರವರನ್ನು ಭಾರತೀಯ ಚಿತ್ರರಂಗದ ಫೀನಿಕ್ಸ್ ಪಕ್ಷಿ ಎಂಬುದಾಗಿ ಕರೆಯುತ್ತಾರೆ. ನೂರಾರು ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ವಿಷ್ಣುವರ್ಧನ್ ರವರ ಸಿನಿಮಾ ಜೀವನದಲ್ಲಿ ಅತ್ಯಂತ ಪ್ರಮುಖ ಸಿನಿಮಾಗಳಲ್ಲಿ ಯಜಮಾನ(Yajamana Vishnuvardhan) ಕೂಡ ಒಂದಾಗಿದೆ. ರಿಮೇಕ್ ಸಿನಿಮಾ ಆಗಿದ್ರೂ ಕೂಡ ಕನ್ನಡದಲ್ಲಿ ಇತಿಹಾಸವನ್ನು ಸೃಷ್ಟಿಸಿದಂತಹ ಸಿನಿಮಾ ಇದಾಗಿತ್ತು.

ಸಹೋದರ ಹಾಗೂ ಕುಟುಂಬದ ಮೌಲ್ಯಗಳನ್ನು ಕನ್ನಡ ಪ್ರೇಕ್ಷಕರಿಗೆ ತೋರ್ಪಡಿಸಿದಂತಹ ಸಿನಿಮಾ ಇದಾಗಿತ್ತು. ಅದೆಷ್ಟು ಒಡೆದಂತಹ ಕುಟುಂಬಗಳು ಕೂಡ ಈ ಸಿನಿಮಾವನ್ನು ನೋಡಿದ ನಂತರ ಮತ್ತೆ ಒಂದಾಗಿತ್ತು ಅಷ್ಟರಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರಲ್ಲಿ ಪರಿಣಾಮ ಬೀರಿತ್ತು. ಇನ್ನು ಈ ಸಿನಿಮಾ ಬಿಡುಗಡೆಯಾಗಿದ್ದು 2000ನೇ ಇಸವಿಯಲ್ಲಿ. ಅಂದಿನ ಸಮಯದಲ್ಲಿ ಈ ಸಿನಿಮಾ ಎಷ್ಟು ಕೋಟಿ ಗಳಿಸಿತ್ತು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಆ ಕಾಲದಲ್ಲಿ ಅಂದರೆ 23 ವರ್ಷಗಳ ಹಿಂದೆ ಬಿಡುಗಡೆಯಾದ ಸಂದರ್ಭದಲ್ಲೇ ವಿಷ್ಣುವರ್ಧನ್(Vishnuvardhan) ನಟನೆಯ ಯಜಮಾನ ಸಿನಿಮಾ ಬರೋಬ್ಬರಿ 46 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತಂತೆ. ಅಂದರೆ ಅದರ ಮೌಲಿವನ್ನು ಇಂದಿನ ಕಾಲಕ್ಕೆ ಹೋಲಿಸಿದರೆ ನೂರಾರು ಕೋಟಿಗಳ ಮೇಲೆ ದಾಟುತ್ತದೆ. ಇದರ ಮೂಲಕ ನೀವೇ ಅಂದಾಜಿಸಬಹುದಾಗಿದೆ ಯಜಮಾನ ಸಿನಿಮಾ(Yajamana Cinema) ಯಾವ ರೀತಿಯ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು ಎಂಬುದನ್ನು.

Leave a Comment

error: Content is protected !!