Sanya Iyer: ಬಿಗ್ ಬಾಸ್ ಸಾನ್ಯಾ ಅಯ್ಯರ್ ಅಮ್ಮನ ಬಟ್ಟೆ ಬಗ್ಗೆ ಮಾತಾಡಿದವರಿಗೆ ಸಾನ್ಯಾ ಅಯ್ಯರ್ ಹೇಳಿದ್ದೇನು ಗೊತ್ತಾ?

Sanya Iyer ಬಿಗ್ ಬಾಸ್(Biggboss) ಖ್ಯಾತಿಯ ಸಾನ್ಯಾ ಅಯ್ಯರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ(Puttagouri Maduve Serial) ಧಾರವಾಹಿಯ ಮೂಲಕ ಎಲ್ಲರಿಗೂ ಮೊದಲ ಬಾರಿಗೆ ಬಾಲ ನಟಿಯಾಗಿ ಪರಿಚಿತರಾಗುತ್ತಾರೆ. ಆದರೆ ಇತ್ತೀಚಿಗಷ್ಟೇ ನೆಟ್ಟಿಗರ ವಿರುದ್ಧ ಸಾನ್ಯಾ ಅಯ್ಯರ್(Sanya Iyer) ಅವರು ತಮ್ಮ ತಾಯಿಯ ಬಗ್ಗೆ ಮಾತನಾಡಿರುವುದಕ್ಕಾಗಿ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ನಿಜವಾಗಿ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಟಿ ಸಾನ್ಯಾ ಅಯ್ಯರ್(Sanya Iyer) ಅವರ ಬರ್ತಡೆ ಇದ್ದ ಕಾರಣದಿಂದಾಗಿ ಅವರ ತಾಯಿ ನೀಲಿ ಗೌನ್ ಅನ್ನು ಧರಿಸಿದ್ದರು. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆ ಕೇಳಿ ಬಂದಿತ್ತು. ತಾಯಿಯೇ ಹೀಗಿರುವಾಗ ಮಗಳು ಹಾಗೆ ಇರೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕೆಲವರು ಕಾಮೆಂಟ್ ಮಾಡಿದ್ದರು. ಅದರಲ್ಲೂ ಇನ್ನು ಕೆಲವರು ಈ ವಯಸ್ಸಿನಲ್ಲಿ ಇಂತಹ ಬಟ್ಟೆಗಳು ಬೇಕಾ ನಿಮಗೆ ಎನ್ನುವುದಾಗಿ ಕೂಡ ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದರು.

ಇನ್ನು ಕೆಲವರು ನಮ್ಮ ದೇಶದಲ್ಲಿ ಯಾವ ಬಟ್ಟೆಯನ್ನು ಕೂಡ ಹಾಕುವಂತಹ ಸ್ವಾತಂತ್ರ್ಯ ಇದೆ ಆದರೆ ಮೈ ತೋರಿಸುವಂತಹ ಬಟ್ಟೆ ಹಾಕುವ ಸಂಸ್ಕೃತಿ ನಮ್ಮಲ್ಲಿ ಇಲ್ಲ ಅದನ್ನು ತಿಳಿದುಕೊಳ್ಳಬೇಕು ಎನ್ನುವುದಾಗಿ ಕೂಡ ಕೆಲವರು ಕಾಮೆಂಟ್ ಮಾಡಿದ್ದು ಇದರ ವಿರುದ್ಧವಾಗಿ ಈಗ ಸಾನ್ಯಾ ಅವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.

ನಮಗೆ ಇಷ್ಟವಾದ ಬಟ್ಟೆಯನ್ನು ಕೂಡ ಹಾಕುವಂತಹ ಸ್ವಾತಂತ್ರ್ಯ ನಮಗೆ ಇಲ್ವಾ, ಯಾವ ತರಹದ ಬಟ್ಟೆ ಹಾಕೋಬೇಕು ಎನ್ನುವ ಉಪದೇಶ ಮಾಡೋಕೆ ಬರಬೇಡಿ ನಮಗೆ ಚೆನ್ನಾಗಿ ತಿಳಿದಿದೆ ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂಬುದಾಗಿ ಸಾನ್ಯಾ ಅಯ್ಯರ್(Sanya Iyer) ಗುಡುಗಿದ್ದಾರೆ. ಸಾನಿಯಾ ಅಯ್ಯರ್ ಅವರ ತಾಯಿ ದೀಪ ಅಯ್ಯರ್(Deepa Iyer) ಕೂಡ ಧಾರವಾಹಿ ನಟಿಯಾಗಿದ್ದು ಇಬ್ಬರು ಜೊತೆಯಾಗಿ ನಿಂತರೆ ಅಕ್ಕ-ತಂಗಿ ಎಂದು ಹೇಳಿದರು ಕೂಡ ತಪ್ಪಾಗಲಾರದು.

Leave a Comment

error: Content is protected !!