Dboss: ಡಿ ಬಾಸ್ ಹಾಗೂ ದಿನಕರ ತೂಗುದೀಪ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ನವಗ್ರಹ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹಲವಾರು ಸಿನಿಮಾಗಳು ಇಂದಿಗೂ ಕೂಡ ಜನಮಾನಸದಲ್ಲಿ ಉಳಿದುಕೊಂಡಿದ್ದು ಅದರಲ್ಲಿ ನವಗ್ರಹ ಸಿನಿಮಾ ಕೂಡ ಒಂದು. ದರ್ಶನ್(Darshan) ಅವರ ಬೇರೆ ಎಲ್ಲಾ ಸಿನಿಮಾಗಳಿಗಿಂತ ನವಗ್ರಹ(Navagraha film) ಒಂದು ತೂಕ ಹೆಚ್ಚೆಂದು ಹೇಳಿದರು ಕೂಡ ತಪ್ಪಾಗಲಾರದು. ಯಾಕೆಂದರೆ ಅದು ಬಿಡುಗಡೆ ಆಗಿದ್ದ ಕಾಲಕ್ಕೆ ಅದೊಂದು ಮಾಸ್ಟರ್ ಪೀಸ್ ಆಗಿತ್ತು ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು.

2008ರಲ್ಲಿ ಬಿಡುಗಡೆಯಾಗಿದ್ದ ನವಗ್ರಹ ಸಿನಿಮಾ ಅಂದಿನ ಕಾಲಕ್ಕೆ ವಿಶೇಷವಾದ ಪ್ರಯೋಗವಾಗಿತ್ತು ಹಾಗೂ ದಿನಕರ್ ತೂಗುದೀಪ್(Dinakar Thoogudeepa) ಅವರ ನಿರ್ದೇಶನಕ್ಕೆ ಅದೊಂದು ಒಳ್ಳೆಯ ಉದಾಹರಣೆಯಾಗಿತ್ತು ಎನ್ನಬಹುದಾಗಿದೆ. ನವಗ್ರಹ ಸಿನಿಮಾದ ಕಥೆಯನ್ನು ನೋಡಿದರೆ ಖಂಡಿತವಾಗಿ ದಿನಕರ ತೂಗುದೀಪ್ ಇಂದಿನ ಯಾವ ಸ್ಟಾರ್ ನಿರ್ದೇಶಕರಿಗೂ ಕೂಡ ಕಡಿಮೆ ಇಲ್ಲ ಎನ್ನಬಹುದಾಗಿದೆ. ಅಷ್ಟರಮಟ್ಟಿಗೆ ಅವರ ಯೋಚನಾ ಶಕ್ತಿ ಆ ಸಿನಿಮಾದಲ್ಲಿ ಬಿಂಬಿತವಾಗಿದೆ.

2008ನೇ ಇಸ್ವಿಯ ನವೆಂಬರ್ 7ರಂದು ಬಿಡುಗಡೆಯಾದ ನವಗ್ರಹ ಸಿನಿಮಾ ಯಾವ ಮಟ್ಟದಲ್ಲಿ ಸದ್ದು ಮಾಡಿತ್ತು ಎನ್ನುವುದು ಈಗ ಇತಿಹಾಸ. ಈ ಸಿನಿಮಾದಲ್ಲಿ ದರ್ಶನ್(Darshan) ಅವರ ಜೊತೆಗೆ ವಿನೋದ್ ಪ್ರಭಾಕರ್(Vinod Prabhakar) ಸೃಜನ್ ಲೋಕೇಶ್(Srjun Lokesh) ಸೇರಿದಂತೆ ಹಲವಾರು ಸ್ಟಾರ್ ನಟರ ಹಿಂಡೇ ಇತ್ತು. ಕನ್ನಡ ಚಿತ್ರರಂಗದ ಖಳನಾಯಕರ ಮಕ್ಕಳನ್ನು ಒಂದೇ ಸಿನಿಮಾದ ಅಡಿಯಲ್ಲಿ ಕರೆ ತರುವಂತಹ ದಿನಕರ್ ತೂಗುದೀಪ್ ರವರ ಪ್ರಯತ್ನ ಈ ಸಿನಿಮಾದಲ್ಲಿ ಸಫಲವಾಗಿತ್ತು.

ಆರು ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಂತಹ ನವಗ್ರಹ ಸಿನಿಮಾ(Navagraha Film) ಅಂದಿನ ಕಾಲಕ್ಕೆ ಭರ್ಜರಿ 15 ರಿಂದ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದಿನ ಕಾಲಕ್ಕೆ ಈ ಸಿನಿಮಾ ಬಿಡುಗಡೆ ಆಗಿದ್ದರೆ ಖಂಡಿತವಾಗಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡೋದ್ರಲ್ಲಿ ಯಾವುದೇ ಅನುಮಾನ ಇರಲಿಲ್ಲವಾಗಿತ್ತು. ನವಗ್ರಹ ಸಿನಿಮಾದ ಜೊತೆಗೇನೆ ದರ್ಶನ್(Darshan) ರವರ ಮತ್ತೊಂದು ಸಿನಿಮಾ ಕೂಡ ಬಿಡುಗಡೆ ಆಗಿದ್ದ ಕಾರಣದಿಂದಾಗಿ ದೊಡ್ಡಮಟ್ಟದ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ.

Leave a Comment

error: Content is protected !!