Airtel 5G: ಏರ್ಟೆಲ್ ನಿಂದ ಗ್ರಾಹಕರಿಗೆ ಹೊರಬಂತು ಗುಡ್ ನ್ಯೂಸ್.

Airtel 5G ಸದ್ಯಕ್ಕೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಬಿದ್ದಿರುವಂತಹ ಎರಡು ದೊಡ್ಡ ಮಟ್ಟದ ಟೆಲಿಕಾಂ ಕಂಪನಿಗಳು ಎಂದರೆ ಒಂದು ಜಿಯೋ(Jio) ಹಾಗೂ ಇನ್ನೊಂದು ಏರ್ಟೆಲ್(Airtel). ಅದರಲ್ಲೂ ವಿಶೇಷವಾಗಿ ಗ್ರಾಹಕರಿಗೆ 5g ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಎರಡು ಕಂಪನಿಗಳು ಕೂಡ ಕಾರ್ಯತತ್ಪರವಾಗಿವೆ. ದೇಶದ 3 ಸಾವಿರಕ್ಕೂ ಅಧಿಕ ನಗರ ಹಾಗೂ ಹಳ್ಳಿ ಪ್ರದೇಶಗಳಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ 5G ಸೇವೆಯನ್ನು ನೀಡುವ ನಿಟ್ಟಿನಲ್ಲಿ ಈಗಾಗಲೇ ಯಶಸ್ವಿಯಾಗಿದೆ.

ಒಂದು ವೇಳೆ ನಿಮ್ಮ ಫೋನ್ 5g ಗೆ ಸಪೋರ್ಟ್ ಮಾಡುತ್ತಿದ್ದರೆ ಹಾಗೂ ನಿಮ್ಮ ಪ್ರದೇಶದಲ್ಲಿ 5g ನೆಟ್ವರ್ಕ್ ಕೂಡ ಇದ್ದರೆ ಖಂಡಿತವಾಗಿ ನೀವು ಏರ್ಟೆಲ್ 5g ಸೇವೆಯನ್ನು ಉಚಿತವಾಗಿ ಅನುಭವಿಸುವ ಎಲ್ಲ ಅವಕಾಶಗಳನ್ನು ಹೊಂದಿದ್ದೀರಿ.

ಏರ್ಟೆಲ್(Airtel) ನ 239 ಹಾಗೂ ಅದರ ಮೇಲಿನ ಎಲ್ಲಾ ರಿಚಾರ್ಜ್ಗಳ ಮೇಲೆ ಕೂಡ ನೀವು ಈ ರೀತಿಯ 5g ಸೇವೆಯನ್ನು ಉಚಿತವಾಗಿ ಅನುಭವಿಸಬಹುದಾಗಿದೆ. ಆದರೆ ನಿಮ್ಮ ಫೋನ್ 5G ನೆಟ್ವರ್ಕ್ ಗೆ ಸಪೋರ್ಟ್ ಮಾಡಬೇಕು. ಏರ್ಟೆಲ್ ಕಂಪನಿ ಹೇಳಿರುವಂತೆ ಕ್ಷಣಮಾತ್ರದಲ್ಲಿ ಯಾವುದೇ ವಿಡಿಯೋಗಳನ್ನು ಬಫರ್ ಇಲ್ಲದೆ ನೋಡಬಹುದು ಹಾಗೂ ಡೌನ್ಲೋಡ್ ಕೂಡ ಅತಿ ವೇಗವಾಗಿ ನಡೆಯಲಿದೆ.

ಇನ್ನು ನಿಮ್ಮ ಫೋನ್ 5G ಅಲ್ಲದಿದ್ದರೆ ಅದನ್ನು ಸೌಲಭ್ಯ ಇರುವ ಫೋನಿಗೆ ವರ್ಗಾಯಿಸಿಕೊಳ್ಳಿ ಎಂಬುದಾಗಿ ಕಂಪನಿ ಹೇಳಿದ್ದು ಒಂದುವೇಳೆ ನಿಮ್ಮ ಸಿಮ್ ಕೂಡ 5G ಅಲ್ಲದಿದ್ದರೂ ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ ಅದಕ್ಕೆ ಈ ಸೇವೆಯನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂಬುದಾಗಿ ಕೂಡ ಏರ್ಟೆಲ್ ಕಂಪನಿ ಹೇಳಿದೆ.

Leave a Comment

error: Content is protected !!