Dr.Bro: ಪ್ರಖ್ಯಾತ ಯುಟ್ಯೂಬರ್ ಡಾಕ್ಟರ್ ಬ್ರೋ ನಾಪತ್ತೆ ಆದ್ರ? ನಮಸ್ಕಾರ ದೇವ್ರು ಎನ್ನುತ್ತಾ ವಿಡಿಯೋ ಹಾಕಿ ಒಂದು ತಿಂಗಳಾಯಿತು ಅಷ್ಟಕ್ಕೂ ಆಗಿದ್ದೇನು

ಸ್ನೇಹಿತರೆ, ತಮ್ಮ ವಿಭಿನ್ನ ಕಂಟೆಂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ವಿಶೇಷ ಕ್ರೇಜನ್ನು ಸೃಷ್ಟಿ ಮಾಡಿದಂತಹ ಡಾಕ್ಟರ್ (Dr.Bro) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ ಹೇಳಿ? ದೇಶ ವಿದೇಶಗಳನ್ನು ಸುತ್ತಾಡುತ್ತಾ ಅಲ್ಲಿನ ಜನರ ಜೀವನ ಶೈಲಿ, ಅವರ ಆಹಾರ ಸೇವನೆ ಹಾಗೂ ಪದ್ಧತಿ ಆಚರಣೆಗಳ ಕುರಿತಾದಂತಹ ಎಲ್ಲಾ ವಿಚಾರಗಳನ್ನು ತಮ್ಮ ಅದ್ಭುತ ವಿಡಿಯೋಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಂತಹ ಡಾ. ಬ್ರೋ(Dr.Bro) ಅಳಿಯಾಸ್

ಗಗನ್ ಶ್ರೀನಿವಾಸ್(Gagan Srinivas) ಅವರು ಕಳೆದ ಒಂದು ತಿಂಗಳಿಂದ ಯಾವುದೇ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ರಿಯರಾಗಿಲ್ಲ ಇದನ್ನು ಗಮನಿಸಿದಂತಹ ಸಾಕಷ್ಟು ಅಭಿಮಾನಿಗಳು ಹಾಗೂ ನೆಟ್ಟಿಗರು ಡಾ. ಬ್ರೋ(Dr.Bro) ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಅಷ್ಟಕ್ಕೂ ಇದರ ಅಸಲಿಯತ್ತೇನು? ಡಾ. ಬ್ರೋ ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಗೆಳೆಯರೇ ನಮಸ್ಕಾರ ದೇವ್ರು ಎನ್ನುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುತ್ತಿದ್ದಂತಹ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಅವರು ಪ್ರತಿದಿನ ಒಂದೊಂದು ಇನ್ಸ್ಟಾಗ್ರಾಮ್ ಸ್ಟೋರಿ ಅಥವಾ ಪೋಸ್ಟ್ಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು ಹಾಗೂ ತಿಂಗಳಿಗೆ ಎರಡು ವಿಡಿಯೋಗಳನ್ನು ತಮ್ಮ ಯೂಟ್ಯೂಬ್(Youtube) ನಲ್ಲಿ ಅಪ್ಲೋಡ್ ಮಾಡುತ್ತಾ ಸುದ್ದಿ ಮಾಡುತ್ತಿದ್ದರು.

ಆದರೆ ಗಗನ್ ಶ್ರೀನಿವಾಸ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನವೆಂಬರ್ 14 ಮಕ್ಕಳ ದಿನಾಚರಣೆಯ ಅಂಗವಾಗಿ ಗಲ್ಲಿ ಕ್ರಿಕೆಟ್ ಆಡುವಂತಹ ಗ್ರೌಂಡ್ (Cricket ground) ಒಂದರಲ್ಲಿ ಮಕ್ಕಳನ್ನು ಮಾತನಾಡಿಸುವಂತಹ ವಿಡಿಯೋ ಒಂದನ್ನು ಕೊನೆಯದಾಗಿ ಹಂಚಿಕೊಂಡಿದ್ದಾರೆ. ಅದಾದ ಬಳಿಕ ಒಂದು ತಿಂಗಳಾದರೂ ಕೂಡ ಗಗನ್ ಶ್ರೀನಿವಾಸ್ ಎಲ್ಲಿದ್ದಾರೆ ಅವರಿಗೆ ಏನಾಗಿದೆ ಎಂಬ ಯಾವುದರ ಸುಳಿವಿಲ್ಲ ಅವರ ಯಾವುದೇ ಸೋಶಿಯಲ್ ಮೀಡಿಯಾ ಖಾತೆಗಳು ಕೂಡ ಸಕ್ರಿಯವಾಗಿಲ್ಲ.

ಹೀಗಾಗಿ ಅಭಿಮಾನಿಗಳ ವಲಯದಿಂದ ಬ್ರೋಗೆ ಏನಾಯ್ತು ಅವರು ಎಲ್ಲಿದ್ದಾರೆ ಅವರನ್ನು ಹುಡುಕಿಸುವಂತಹ ಪ್ರಯತ್ನ ಮಾಡಿ ಎಂಬ ಕೂಗು ಕೇಳಿ ಬರುತ್ತಿದೆ. ಕೆಲವು ಖಾಸಗಿ ಮಾಧ್ಯಮಗಳು ಡಾಕ್ಟರ್ ಬ್ರೋ(Dr.Bro) ಕೊನೆಯದಾಗಿ ಚೀನಾ ವೀಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದರು ಅದರಿಂದ ಚೀನಾ ಜನರಿಂದ ತೊಂದರೆಗೆ ಗುರಿಯಾಗಿರಬಹುದೇನೋ, ಇನ್ನು ಆರು ತಿಂಗಳ ಕಾಲ ಡಾ. ಬ್ರೋ(Dr.Bro) ವಿಡಿಯೋ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಊಹಾಪೋಹವನ್ನು ಹಬ್ಬಿಸುತ್ತಿದ್ದು ಅನುಯಾಯಿಗಳಿಗೆ ಕಳವಳ ಉಂಟಾಗಿದೆ.

ಆದರೆ ಇನ್ನಷ್ಟು ಜನರು ಅವರಿಗೆ ಏನು ಆಗಿಲ್ಲ ತಮ್ಮ ಹುಟ್ಟೂರಿನಲ್ಲಿ ಕೊಂಚ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ಕಮೆಂಟ್ಗಳ ಮೂಲಕ ಪ್ರಕಟ ಮಾಡುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!