First Night: ಮೊದಲ ರಾತ್ರಿಗೂ ಮುನ್ನವೇ ಈ ಪ್ರಶ್ನೆಯನ್ನು ಕೇಳಿ. ಇಲ್ಲವಾದಲ್ಲಿ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.

Kannada News ಮದುವೆ(Marriage) ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಅತ್ಯಂತ ಸುಮಧುರ ಹಾಗೂ ಸಂತೋಷದ ಕ್ಷಣಗಳಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿಂದಲೇ ಪ್ರತಿಯೊಬ್ಬರ ಜೀವನದ ಎರಡನೇ ಅಧ್ಯಾಯ ಪ್ರಾರಂಭವಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮದುವೆಯಾದ ಪ್ರತಿಯೊಂದು ಜೋಡಿಗಳು ಕೂಡ ಮೊದಲ ರಾತ್ರಿ(First Night) ಎನ್ನುವ ಸುಖದ ಕ್ಷಣವನ್ನು ಕೂಡ ಕಳೆಯಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ಅನುಮಾನಗಳನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ.

ಮೊದಲ ರಾತ್ರಿ ಎನ್ನುವುದು ಕೇವಲ ದೈಹಿಕವಾಗಿ ಒಬ್ಬರನ್ನೊಬ್ಬರು ಕೊಡುವುದು ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಕೂಡ ಆಗಿದೆ. ಹೀಗಾಗಿ ಮೊದಲ ರಾತ್ರಿ ನಡೆಯುವುದಕ್ಕೂ ಮುನ್ನ ನಿಮ್ಮ ಸಂಗಾತಿಯವರ ಜೊತೆಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ನಿಮ್ಮಲ್ಲಿರುವ ಗೊಂದಲಗಳನ್ನು ದೂರ ಮಾಡಿಕೊಂಡು ನಿಮ್ಮ ಜೀವನದ ಎರಡನೇ ಅಧ್ಯಾಯವನ್ನು ಶುಭಾರಂಭ ಮಾಡುವುದು ಉತ್ತಮ. ಬನ್ನಿ ಆ ಪ್ರಶ್ನೆಗಳ್ಯಾವುವು ಎಂಬುದನ್ನು ತಿಳಿಯೋಣ.

ಮೊದಲಿಗೆ ನಿಮ್ಮ ಸಂಗಾತಿಯಲ್ಲಿ(Life Partner) ನನ್ನನ್ನು ಮದುವೆಯಾಗಿರುವ ನಿಜವಾದ ಕಾರಣ ಏನೆಂಬುದನ್ನು ಕೇಳಿ. ಅದು ನಿಮಗೆ ಸಮರ್ಪಕವಾದ ಉತ್ತರವಾಗಿದ್ದರೆ ನಿಮ್ಮ ದಾಂಪತ್ಯ ಜೀವನಕ್ಕೆ ಒಳ್ಳೆದಾಗುತ್ತದೆ. ಕೆಲವೊಂದು ಪ್ರೀತಿಯ ಸಂಬಂಧದುವೆಯಾದ ಮೇಲೆ ಕಡಿಮೆಯಾಗುತ್ತದೆ. ಹೀಗಾಗಿ ಇದರ ಕುರಿತಂತೆ ಕೂಡ ನಿಮ್ಮ ಗೊಂದಲವನ್ನು ಈ ಸಮಯದಲ್ಲಿಯೇ ದೂರ ಮಾಡಿಕೊಳ್ಳಿ. ಇದರಿಂದಾಗಿ ಯಾವುದೇ ಗೊಂದಲವಿಲ್ಲದೆ ನೀವು ನಿಮ್ಮ ಸಂಗಾತಿಯ ಜೊತೆಗೆ ಮುಕ್ತವಾಗಿ ಸಂಸಾರ ನಡೆಸಬಹುದಾಗಿದೆ‌.

ನಿಮ್ಮ ಜೀವನದ ಸುಖದ ಜೊತೆಗೆ ನಿಮ್ಮ ದುಃಖವನ್ನು ಕೂಡ ಮದುವೆಯಾದ ನಂತರ ಹಂಚಿಕೊಳ್ಳಲು ಸಿದ್ದರಿರುವಂತೆ ಅವರಲ್ಲಿ ನಿಮ್ಮ ಗೊಂದಲವನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಇವೆಲ್ಲ ಹೊಂದಾಣಿಕೆ(Adjustment) ಆದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೀವು ಯಾವುದೇ ಚಿಂತೆ ಇಲ್ಲದೆ ಸಂಸಾರವನ್ನು ನಡೆಸಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!