Trishika Kumari Wadiyar: ಮೈಸೂರಿನ ಮಹಾರಾಣಿ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ಅವರ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ ಮಹಾರಾಜ ಯದುವೀರ್ ಒಡೆಯರ್!

Trishika Kumari Wadiyar: ಸ್ನೇಹಿತರೆ, ಮೈಸೂರು ಸಂಸ್ಥಾನಕ್ಕೆ ಬಹಳ ವಿಶೇಷವಾದಂತಹ ದಿನ ಎಂದರೆ ತಪ್ಪಾಗಲಾರದು ಒಂದೆಡೆ ನವರಾತ್ರಿಯ ಕೊನೆಯ ದಿನ ಆಯುಧ ಪೂಜೆ ಹಬ್ಬದ ಆಚರಣೆ. ಇದರ ಜೊತೆಗೆ ಮೈಸೂರಿನ ಮಹಾರಾಣಿಯಾಗಿರುವ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್(Trishika Kumari Wadiyar) ಅವರ ಜನ್ಮದಿನವಾಗಿದ್ದು, ಈ ವಿಶೇಷ ದಿನದ ಅಂಗವಾಗಿ ಮೈಸೂರಿನಲ್ಲಿನ ವಿಶ್ವವಿಖ್ಯಾತ ದಸರಾ ಹಬ್ಬದ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.

ಹೌದು ಗೆಳೆಯರೇ ಮೈಸೂರಿನ 27ನೇ ಮಹಾರಾಜರಾದ ಯದುವೀರ್ (Yaduveer) ಅವರು ಜೂನ್ 27ನೇ ತಾರೀಕು 2016 ರಂದು ಹರ್ಷವರ್ಧನ್ ಸಿಂಗ್ ಮತ್ತು ಮಹಾಶ್ರೀ ಕುಮಾರಿಯವರ ಪುತ್ರಿ ತ್ರಿಷಿಕಾ ಕುಮಾರಿಯವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳಿಗೆ 2017ರ ಡಿಸೆಂಬರ್ ತಿಂಗಳಿನಲ್ಲಿ ಅಧ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಮುದ್ದಾದ ಮಗನು ಜನಿಸಿದನು. ನೆನ್ನೆ ಅಂದರೆ ಅಕ್ಟೋಬರ್ 22ನೇ ತಾರೀಕಿನಂದು ಮಹಾರಾಣಿ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು,

ಇದರ ಅಂಗವಾಗಿ ಅವರ ಪತಿ ಯದುವೀರ್ ಒಡೆಯರ್ (Yaduveer Wadiyar) ಸಾಮಾಜಿಕ ಜಾಲತಾಣದಲ್ಲಿ ಹೆಂಡತಿಯ ಫೋಟೋ ಹಂಚಿಕೊಂಡು ವಿಶೇಷವಾಗಿ ಜನ್ಮದಿನದ ಶುಭಾಶಯಗಳು ಕೋರಿದ್ದಾರೆ. “ಮಹಾರಾಣಿ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ಅವರ ಜನ್ಮದಿನದಂದು ಅವರಿಗೆ ಶುಭ ಕೋರುತ್ತೇವೆ, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇವೆ” ಎಂದು

ಮಹಾರಾಜ ಯದುವೀರ್ ಒಡೆಯರ್ (Yaduveer Wadiyar) ಅವರು ತಮ್ಮ ಮಡದಿಗೆ ಪ್ರೀತಿಯಿಂದ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಸರಾ ಹಬ್ಬದ ಸಂಭ್ರಮದ ಜೊತೆಗೆ ರಾಜ ಮನೆತನದಲ್ಲಿ ಮಹಾರಾಣಿಯ ಹುಟ್ಟು ಹಬ್ಬದ ಸಂಭ್ರಮವು ಜೋರಾಗಿರುವ ಮಾಹಿತಿ ತಿಳಿದು ಬಂದಿದೆ.

ಇದರ ಜೊತೆಗೆ ಯದುವೀರ್ ಒಡೆಯರ್ (Yaduveer Wadiyar) ಅವರು ನಾಡಿನ ಸಮಸ್ತ ಜನರಿಗೂ ವಿಶೇಷವಾದ ಆಯುಧ ಪೂಜೆ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಜಂಬೂ ಸವಾರಿಗೆ (Jumbo Savari) ಅದಾಗಲೇ ಕ್ಷಣಗಳನ್ನು ಪ್ರಾರಂಭವಾಗಿದ್ದು, ಜಗನ್ಮಾತೆಯಾದ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ತುಂಬಿಕೊಳ್ಳಲು ದೇಶದ ಜನತೆಯು ಕಾದು ಕುಳಿತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!