John Kokken: ಪುನೀತ್ ರಾಜಕುಮಾರ್ ಅವರಿಂದ ಕನ್ನಡ ಕಲಿತು ಇಂದು ಕನ್ನಡಿಗರ ಮನೆಮಗನಾಗಿರುವ ಜಾನ್ ಕೊಕ್ಕೆನ್ ಸುಂದರ ಫ್ಯಾಮಿಲಿ ಫೋಟೋಸ್!

John Kokken: ಸ್ನೇಹಿತರೆ ಮೂಲತಃ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯವರದಂತಹ ನಟ ಜಾನ್ ಕೊಕ್ಕೆನ್ (John Kokken) ಸಿನಿಮಾ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವಿದ್ದು, ತಮ್ಮ ವೈಯಕ್ತಿಕ ವಿಚಾರಗಳಿಂದ ಆಗಾಗ ಸುದ್ದಿಗೊಳಗಾಗುತ್ತಲೇ ಇರುತ್ತಾರೆ. ಹೌದು ಗೆಳೆಯರೇ 2005 ರಿಂದಲೂ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ಜಾನ್ 2006ರಲ್ಲಿ ಕಲಭಂ ಎಂಬ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿ ಅನಂತರಾ ಪೋಷಕ ನಟನಾಗಿ ಸಹನಟನಾಗಿ,

ಖಳ ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಂಡರು. 2010ರಲ್ಲಿ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪೃಥ್ವಿ ಸಿನಿಮಾದ ಮೂಲಕ ನಮ್ಮ ಚಂದನವನಕ್ಕೆ ಪಾದರ್ಪಣೆ ಮಾಡಿದಂತಹ ನಟ ಜಾನ್ ಕೊಕ್ಕೆನ್ (John Kokken) ಪುನೀತ್ ರಾಜಕುಮಾರ್ ಅವರ ಸಹಾಯದಿಂದಲೇ ಕನ್ನಡವನ್ನು ಕಲಿತು ಇದೀಗ ಕನ್ನಡಿಗರ ಮನೆ ಮಗನಾಗಿ ಹೋಗಿದ್ದಾರೆ.

ಹೌದು ಗೆಳೆಯರೇ ಇವರ ಅಮೋಘ ಅಭಿನಯಕ್ಕೆ ಕನ್ನಡ ಇಂಡಸ್ಟ್ರಿಯಲ್ಲಿ ವ್ಯಾಪಕ ಮೆಚ್ಚುಗೆ ಹಾಗೂ ಅವಕಾಶ ದೊರಕುತ್ತಾ ಹೋಗುತ್ತದೆ. ಹೀಗಾಗಿ ಶೌರ್ಯ ಮೈಲಾರಿ ಕೋ ಕೋ ಅಣ್ಣ ಬಾಂಡ್, ಲಕ್ಷ್ಮಣ, ಕೆಜಿಎಫ್ ೧, ಜೇಮ್ಸ್ ಸೇರಿದಂತೆ ಹಲವು ಕನ್ನಡ ಚಿತ್ರದಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದಾರೆ. ಇನ್ನು 2012ರಲ್ಲಿ ಮೀರಾ ವಾಸುದೇವನ್ (Meera Vasudevan) ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಜಾನ್ ಕೊಕ್ಕೆನ್ (John Kokken) ಅವರಿಗೆ ಒಬ್ಬ ಮಗ ಜನಿಸಿದ ನಂತರ 2016ರಲ್ಲಿ ಕೆಲ ವೈಯಕ್ತಿಕ ಕಾರಣಗಳಿಂದ ದಂಪತಿಗಳಿಬ್ಬರು ವಿವಾಹ ವಿಚ್.ಛೇದನವನ್ನು ಪಡೆದುಕೊಂಡು ದೂರಾದರು.

ಆನಂತರ 2019ರಲ್ಲಿ ಪೂಜಾ ರಾಮಚಂದ್ರನ್ (Pooja Ramachandran) ಅವರನ್ನು ಎರಡನೇ ವಿವಾಹವಾದ ಜಾನ್ ಅವರಿಗೆ ಕಿಯಾನ್ ಎಂಬ ಮಗನಿದ್ದು, ಆಗಾಗ ಹೆಂಡತಿ ಮಕ್ಕಳೊಂದಿಗೆ ಫಾರಿನ್ ಟ್ರಿಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಹೆಂಡತಿ ಹಾಗೂ ಮಗನೊಂದಿಗೆ ಬಾಲಿ ಪ್ರವಾಸಕ್ಕೆ ತೆರಳಿರುವ ಜಾನ್ ಅವರು ದ್ವೀಪದಲ್ಲಿ ಎಂಜಾಯ್ ಮಾಡುತ್ತಿರುವಂತಹ ಕೆಲವು ಸುಂದರ ಫೋಟೋಗಳನ್ನು ಶೇರ್ ಮಾಡಿ ನಮ್ಮಿಬ್ಬರ ಕನಸು ಕೊನೆಗೂ ನನಸಾಗಿದೆ ಎಂಬ ಕ್ಯಾಪ್ಷನ್ ಬರೆದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!