ಸಾನಿಯಾ ವಿವಾಹದ ವಿಚ್ಛೇದನಕ್ಕೆ ಕಾರಣವೇನು ಗೊತ್ತಾ? ವಿವಾಹದ ನಂತರ ಪಾಕ್ ಆಟಗಾರ ನಡೆದುಕೊಂಡಿದ್ದು ಹೇಗೆ? ವಿಷಯವನ್ನು ಕೇಳಿದರೆ ನೀವು ಬೇಸರಗೊಳ್ಳುತ್ತೀರಾ..

ಸಾನಿಯಾ ಮಿರ್ಜಾ ಅವರು ಭಾರತದ ಉತ್ತಮ ಟೆನಿಸ್ ಆಟಗಾರ್ತಿ. ವುಮೆನ್ ಟೆನ್ನಿಸ್ ಅಸೋಸಿಯೇಷನ್ ಹೇಳಿರುವ ಹಾಗೆ ಇವರು ಸಿಂಗಲ್ಸ್ ನಲ್ಲಿ ಭಾರತದ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆರು ಬಿರುದುಗಳನ್ನು ಗೆದ್ದ ಇವರು ರೂಪವತಿಯು ಹೌದು.

2009 ರಿಂದ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟ್ ಆಟಗಾರನಾದ ಶೋಯಬ್ ಮಾಲೀಕವರೊಂದಿಗೆ ಹಲವಾರು ಬಾರಿ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸುದ್ದಿಯಾಗುತ್ತಿದ್ದಂತಲೇ ವಿವಾಹವಾಗುವ ವಿಚಾರವು ಹೊರ ಬೀಳುತ್ತದೆ. 2010ರಲ್ಲಿ ಸಾನಿಯಾ ಅವರು ಶೋಯಬ್ ಮಾಲೀಕನನ್ನು ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗುತ್ತಾರೆ. ಹೊಸ ಜೀವನವನ್ನು ಪ್ರಾರಂಭಿಸಿದ ಈ ದಂಪತಿಗಳು 2018ರಲ್ಲಿ ತಾವು ತಂದೆ-ತಾಯಿಯಾಗುವ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ. 2018 ಅಕ್ಟೋಬರ್ ತಿಂಗಳಿನಲ್ಲಿ ಸಾನಿಯಾ ಗಂಡು ಮಗುವಿಗೆ ಜನ್ಮ ನೀಡುತ್ತಾರೆ.

ಸುಮಾರು 12 ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದ ಇವರಿಬ್ಬರ ಮಧ್ಯೆ ಬಿರುಕು ಮೂಡಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಮೊದಲೇ ಇವರಿಬ್ಬರ ನಡುವೆ ಸಂಬಂಧವೂ ಸರಿಯಾಗಿಲ್ಲ ಎಂಬ ವದಂತಿಗಳು ಕೇಳಿ ಬಂದಿದ್ದರೂ ಇದೀಗ ವಿವಾಹವು ಮುರಿದು ಬೀಳಲಿದೆ ಎಂಬ ಸುದ್ದಿಯು ಹರಡಿದೆ. ಶೋಯಬ್ ಮಾಲೀಕ ಅವರು ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ಬಿತ್ತರಿಸುತ್ತೇವೆಯಂತೆ. ಅಕ್ರಮ ಸಂಬಂಧದಿಂದಾಗಿ ಈ ದಂಪತಿಗಳ ನಡುವೆ ಮನಸ್ತಾಪಗಳು ಮೂಡಿದ್ದು, ಅದೇ ಕಾರಣಕ್ಕಾಗಿ ಸಾನಿಯಾ ಅವರು ವಿಚ್ಛೇದನ ನೀಡಲಿದ್ದಾರೆ ಎಂದು ಹಲವರ ಅಭಿಪ್ರಾಯವಂತೆ.

Sho

ವಿಚ್ಛೇದನದ ಸುದ್ದಿ ಹರಿದಾಡಲು ಕಾರಣಗಳಿವೆ. ಶೋಯಬ್ ಮಾಲೀಕ ಅವರ ಪರಿಚಿತರೊಬ್ಬರು ಮಾಧ್ಯಮದಲ್ಲಿ ಹೇಳಿಕೆಯೊಂದನ್ನು ನೀಡಿದ್ದು, ‘ಈ ದಂಪತಿಗಳು ಕಾನೂನಾತ್ಮಕವಾಗಿ ವಿಚ್ಛೇದನವನ್ನು ಪಡೆಯಲಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ನಾನೇನು ಹೇಳಲು ಸಾಧ್ಯವಿಲ್ಲ; ಇವರಿಬ್ಬರೂ ಬೇರೆಯಾಗುತ್ತಾರೆ ಎಂಬುದಷ್ಟೇ ಖಚಿತಪಡಿಸಬಲ್ಲೆ’ ಎಂದಿದ್ದಾರಂತೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಸಾನಿಯಾ ಮಿರ್ಜಾ ಅವರು ಸಾಕಷ್ಟು ವಿಷಯಗಳನ್ನು ಹಂಚಿಕೊಂಡೆ ಬಂದಿದ್ದಾರೆ. ತಮ್ಮ ವಿಚ್ಛೇದನದ ಬಗ್ಗೆ ಏನನ್ನು ಬಾಯಿ ಬಿಟ್ಟಿಲ್ಲ. ಆದರೆ ‘ನನ್ನ ಜೀವನದ ಕಷ್ಟ ಸಮಯದಲ್ಲಿ ಇದೊಂದು ವಿಚಾರ ವಿಶೇಷವಾಗಿದೆ’ ಎಂದು ಬರೆದುಕೊಂಡು ಮಗ ಇಜಾನ್ ಮಿರ್ಜಾ ಮಾಲಿಕ್ ಅವನೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ.

ವೈವಾಹಿಕ ಜೀವನದ ಬಿರುಕಿನ ವಿಷಯವಾಗಿ ಈ ದಂಪತಿಗಳು ಎಲ್ಲಿಯೂ ಹೇಳಿಕೊಂಡಿಲ್ಲ. ಇವರಿಬ್ಬರ ಸಂಬಂಧವು ಸರಿ ಹೋಗಲಿದೆಯೋ ಅಥವಾ ಮುರಿದು ಬೀಳಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

Leave a Comment

error: Content is protected !!