KL Rahul: ಐಪಿಎಲ್ ನಡುವೆ ಮತ್ತೊಂದು ಆ’ ಘಾತಕ್ಕೆ ಸಿಲುಕಿದ ಕನ್ನಡಿಗ ಕೆ ಎಲ್ ರಾಹುಲ್.

KL Rahul ನಾವು ಈ ರೀತಿ ಹೇಳುವುದು ತಪ್ಪಾಗಿ ಕಾಣುತ್ತದೆ ಆದರೆ ಮದುವೆಯಾದ ಸಮಯದಿಂದಲೂ ಕೂಡ ಕೆ ಎಲ್ ರಾಹುಲ್(KL Rahul) ಅವರ ಸಮಯ ಅಷ್ಟೊಂದು ಚೆನ್ನಾಗಿ ಇಲ್ಲ ಎಂಬುದಾಗಿಯೇ ಹೇಳಬಹುದಾಗಿದೆ. ಹೌದು ಯಾಕೆಂದರೆ ಮದುವೆಯಾದ ಸಂದರ್ಭದಲ್ಲಿ ಕೂಡ ಇಡೀ ವರ್ಷ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಒಂದೇ ಒಂದು ಮ್ಯಾಚ್ ಅನ್ನು ಕೂಡ ಆಡಿಲ್ಲ. ಆಡಿರುವ ಕ್ರಿಕೆಟ್ ನಲ್ಲಿ ಸಂಪೂರ್ಣವಾಗಿ ವಿಫಲ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ.

ಕೆ ಎಲ್ ರಾಹುಲ್ ಒಂದು ಕಾಲದಲ್ಲಿ ಪ್ರತಿವರ್ಷ ಐಪಿಎಲ್(IPL) ನಲ್ಲಿ ಅತ್ಯಂತ ಹೆಚ್ಚು ರನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಹಕ್ಕುದಾರನಾಗಿ ಕಾಣಿಸಿಕೊಳ್ಳುತ್ತಿದ್ದರು ಆದರೆ ಈ ಬಾರಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಇಂಜುರಿ ಕೂಡ ಕೆಎಲ್ ರಾಹುಲ್ ಅವರನ್ನು ಬೆನ್ನು ಬಿಡದೆ ಕಾಡುತ್ತಿದೆ.

ಈ ಬಾರಿ ಐಪಿಎಲ್ ನಲ್ಲಾದರೂ ಕೂಡ ಲಕ್ನೋ ತಂಡದ ಕ್ಯಾಪ್ಟನ್ ಆಗಿ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಮತ್ತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಅಧಿಕಾರ ಮಾಡುವ ಕನಸನ್ನು ಕೆ ಎಲ್ ರಾಹುಲ್ ಕಂಡಿದ್ದರು ಆದರೆ ಆ ಕನಸಿಗೂ ಕೂಡ ತಣ್ಣೀರು ಎರಚಿದಂತಾಗಿದೆ. ಹೌದು ಆರ್ಸಿಬಿ(RCB) ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನ ಆರಂಭದಲ್ಲಿಯೇ ಬೌಂಡರಿಯ ಗೆರೆಯ ಬಳಿ ಬಾಲನ್ನು ನಿಲ್ಲಿಸುವ ಭರದಲ್ಲಿ ಓಡುತ್ತಿರುವಾಗ ಇಂಜುರಿಗೆ ತುತ್ತಾಗುತ್ತಾರೆ.

ಸದ್ಯದ ಮಟ್ಟಿಗೆ ಕೆ ಎಲ್ ರಾಹುಲ್(KL Rahul) ಅವರು ಮುಂಬೈನಲ್ಲಿ ಈ ಕುರಿತಂತೆ ಬಿಸಿಸಿಐ ಬೆಂಬಲಿತ ವೈದ್ಯರ ತಂಡದಿಂದ ಚಿಕಿತ್ಸೆಯನ್ನು ಪಡೆಯಲಿದ್ದು ಮುಂದಿನ ದಿನಗಳಲ್ಲಿ ಅವರ ಕ್ರಿಕೆಟ್ ನಿಲುವಿನ ಕುರಿತಂತೆ ಅಧಿಕೃತವಾಗಿಯೇ ಮಾಹಿತಿಯನ್ನು ಹೊರಹಾಕಲಾಗುವುದು ಎಂಬುದಾಗಿ ಹೇಳಲಾಗಿದೆ. ಅದೇನೇ ಇರಲಿ ಇತ್ತೀಚಿನ ದಿನಗಳಲ್ಲಿ ಸತತವಾಗಿ ದುರದೃಷ್ಟಕರ ಘಟನೆಗಳಿಂದ ಕೆಎಲ್ ರಾಹುಲ್ ಅವರು ಬಳಲುತ್ತಿರುವುದಂತೂ ನಿಜ‌.

Leave a Comment

error: Content is protected !!