MS Dhoni: ಕೋಟ್ಯಾಂತರ ಆಸ್ತಿ ಇದ್ದರೂ ಕೂಡ ಹಳ್ಳಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಈಗ ಮಾಡುತ್ತಿರುವುದೇನು ಗೊತ್ತಾ? ಇವರು ನಿಜವಾದ ಆಸ್ತಿ ಕಣ್ರೀ.

Mahendra Singh Dhoni ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಕಾಲಿಡಲು ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ ಎಂಬುದು ಅವರ ಬಯೋಪಿಕ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ತೋರಿಸಿದ್ದಾರೆ.

ಇನ್ನು ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಮಹೇಂದ್ರ ಸಿಂಗ್ ಧೋನಿ ಅವರು ಮೂರು ಫಾರ್ಮಾಟ್ನಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ. ಕೇವಲ ಭಾರತ ಕ್ರಿಕೆಟ್ ತಂಡದ ಮಾತ್ರವಲ್ಲದೆ ಇಡೀ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಕ್ಯಾಪ್ಟನ್ ಆಗಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ನಿವೃತ್ತಿ ಹೊಂದಿದಾಗ ಬೇರೆ ಬಿಜಿನೆಸ್ ಮಾಡೋ ಕಡೆಗೆ ತಮ್ಮ ಗಮನವನ್ನು ಹರಿಸಿ ಪಟ್ಟಣದಲ್ಲಿ ಐಷಾರಾಮಿ ಜೀವನವನ್ನು ಮಾಡುವ ಕನಸನ್ನು ಹೊಂದಿರುತ್ತಾರೆ ಆದರೆ ಮಹೇಂದ್ರ ಸಿಂಗ್ ಧೋನಿ ಈ ಸಾಲಿನಲ್ಲಿ ಸೇರುವವರಲ್ಲ.

Mahendra Singh Dhoni Farming

ಹಲವಾರು ವ್ಯಾಪಾರ ವಹಿವಾಟುಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಹೂಡಿಕೆ ಮಾಡಿದ್ದಾರೆ ನಿಜ ಆದರೆ ನಿವೃತ್ತಿಯ ನಂತರ ಅವರು ನಮ್ಮ ದೇಶದ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಕೂಡ ಕಾಲಿಟ್ಟಿದ್ದಾರೆ. ರಾಂಚಿಯಲ್ಲಿ 40 ಎಕರೆ ಜಮೀನನ್ನು ಖರೀದಿಸಿ ಅದನ್ನು ಫಾರ್ಮ್ ಹೌಸ್ ಅನ್ನಾಗಿ ಮಾಡಿದ್ದಾರೆ. ಅಲ್ಲಿ ಸ್ಟ್ರಾಬೆರಿ ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳನ್ನು ಸಾವಯುವ ಗೊಬ್ಬರವನ್ನು ಬಳಸಿ ಮಹೇಂದ್ರ ಸಿಂಗ್ ಧೋನಿ ಅವರು ಮಾರ್ಗದರ್ಶಕರ ಸಹಾಯದಿಂದ ಕೃಷಿಯನ್ನು ಮಾಡುತ್ತಿದ್ದಾರೆ.

ಕೇವಲ ಕೃಷಿ ಮಾತ್ರವಲ್ಲದೆ ಹೈನುಗಾರಿಕೆ ವಿಧವಿಧವಾದ ಕೋಳಿ ಸಾಕಾಣಿಕೆ ಸೇರಿದಂತೆ ಹಲವಾರು ರೀತಿಯ ಕೃಷಿಗಾರಿಕೆಯನ್ನು ಮಹೇಂದ್ರ ಸಿಂಗ್ ಧೋನಿ ರವರು ತಮ್ಮ ಫಾರ್ಮ್ ಹೌಸ್ ನಲ್ಲಿ ಮಾಡುತ್ತಿದ್ದಾರೆ. ಕೋಟಿ ಕೋಟಿ ಹಣ ಬೇರೆ ಕಡೆಗಳಿಂದ ಬರುತ್ತಿದ್ದರು ಕೂಡ ಕೃಷಿಯ ಕಡೆಗೆ ಮಹೇಂದ್ರ ಸಿಂಗ್ ಧೋನಿ ಮುಖ ಮಾಡಿರುವುದು ನಿಜಕ್ಕೂ ಕೂಡ ಬೇರೆ ಸೆಲೆಬ್ರಿಟಿ ಗಳಿಗೂ ಕೂಡ ಕೃಷಿಯ ಕುರಿತಂತೆ ತಮ್ಮ ಕೊಡುಗೆಯನ್ನು ನೀಡುವ ಮುನ್ಸೂಚನೆಯಾಗಿದೆ ಎನ್ನಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!