Ms Dhoni: ಈ ಬಾರಿ IPL ನಲ್ಲಿ ಧೋನಿ ಫ್ಯಾನ್ಸ್ ಗಳಿಗೆ ಭಾರಿ ನಿರಾಸೆ ಆಗಲಿದೆ, ಯಾಕೆ ಗೊತ್ತಾ? ಇಲ್ಲಿದೆ ಕಾರಣ

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಕೇವಲ ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತು ಕಂಡಂತಹ ಅತ್ಯಂತ ಸರ್ವ ಶ್ರೇಷ್ಠ ನಾಯಕರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅವರಂತಹ ಯಶಸ್ವಿ ನಾಯಕ ಮತ್ತೊಮ್ಮೆ ಈ ವಿಶ್ವ ಜಗತ್ತು ಕಾಣುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನಾಯಕನಾಗಿ ಸಾಧನೆಯನ್ನು ಮಾಡಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಅವರ ಸಾಧನೆಯನ್ನು ಗಮನಿಸುವುದಾದರೆ ಏಕದಿನ ವಿಶ್ವಕಪ್ ಟಿ20 ವಿಶ್ವಕಪ್ ಟೆಸ್ಟ್ನಲ್ಲಿ ನಂಬರ್ ವನ್ ತಂಡವನ್ನು ಮಾಡಿದ ಹೆಗ್ಗಳಿಕೆ. ಕೇವಲ ಇಷ್ಟೇ ಅಲ್ಲ ಚಾಂಪಿಯನ್ ಟ್ರೋಫಿಯಲ್ಲಿ ಕೂಡ ಈಗಾಗಲೇ ಗೆದ್ದ ಸಾಧನೆಯನ್ನು ಮಾಡಿದ್ದಾರೆ. ಈಗಾಗಲೇ ಚಾಂಪಿಯನ್ಸ್ ಲೀಗ್ ಹಾಗೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super kings) ತಂಡದ ನಾಯಕನಾಗಿ ಎಷ್ಟು ಬಾರಿ ಟ್ರೋಫಿಯನ್ನು ಗೆದ್ದಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಆದರೆ ಈ ಬಾರಿಯ ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳು ಖಂಡಿತವಾಗಿ ಅಳಲೇಬೇಕಾದಂತಹ ವಾತಾವರಣ ನಿರ್ಮಾಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮಗೆ ಗೊತ್ತಿರಬಹುದು ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ಧೋನಿ ಅವರು ನಿವೃತ್ತಿಯನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿಯೇ ಮಹೇಂದ್ರ ಸಿಂಗ್ ಧೋನಿ(Dhoni) ಅವರ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದರು.

ಆದರೆ ಬಲವಾದ ಮೂಲಗಳ ಪ್ರಕಾರ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿ ಅಥವಾ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಕೊನೆಯ ಬಾರಿಗೆ ಆಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕೊನೆ ಬಾರಿಗೆ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕ್ರಿಕೆಟಿಗನನ್ನಾಗಿ ನೋಡೋದು ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಧೋನಿ ಅಭಿಮಾನಿಗಳು ಬೇಸರದ ಸಾಗರದಲ್ಲಿ ಮುಳುಗಿದಂತೆ ಭಾಸವಾಗಿದೆ. ಎಲ್ಲರೂ ಕೂಡ ಚೆನ್ನೈ ಸೂಪರ್ ಕಿಂಗ್ ತಂಡದ ಪರವಾಗಿ ಧೋನಿ ಕೊನೆಯ ಬಾರಿಗೆ ಆಡುತ್ತಿದ್ದು ಈ ಬಾರಿ ಕಪ್ ಗೆದ್ದುಕೊಂಡೇ ಹೋಗಲಿ ಎಂಬುದಾಗಿ ಆಶಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!