Rahul Dravid: ಸತತವಾಗಿ ವೈಫಲ್ಯವನ್ನು ಕಾಣುತ್ತಿರುವ ಕೆಎಲ್ ರಾಹುಲ್ ಬಗ್ಗೆ ಕೋಚ್ ದ್ರಾವಿಡ್ ಹೇಳಿದ್ದೇನು ಗೊತ್ತಾ? ಬೇಸರದಲ್ಲಿ ಕ್ರಿಕೆಟ್ ಅಭಿಮಾನಿಗಳು.

KL Rahul ಇತ್ತೀಚಿಗಷ್ಟೇ ಕೆ ಎಲ್ ರಾಹುಲ್ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಯಶಸ್ವಿ ಉದ್ಯಮಿ ಆಗಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಯುವ ಉದಯೋನ್ಮುಖ ನಟಿ ಅಥಿಯಾ ಶೆಟ್ಟಿ(Athiya Shetty) ರವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬೆನ್ನಲ್ಲೇ ಪ್ರಾರಂಭವಾಗಿರುವ ಬಾರ್ಡರ್ ಗಾವಸ್ಕರ್ ಟ್ರೋಫಿಯ(Border Gavaskar) ಟೆಸ್ಟ್ ಪಂದ್ಯಾವಳಿಗೂ ಕೂಡ ಹಾಜರಿದ್ದಾರೆ. ಇದು ಅವರ ಕ್ರಿಕೆಟ್ ಪ್ರೇಮವನ್ನು ಎತ್ತಿ ಹಿಡಿಯುತ್ತದೆ.

ಆದರೆ ಗಮನವಹಿಸಬೇಕಾಗಿರುವಂತಹ ಒಂದು ವಿಚಾರ ಏನೆಂದರೆ, ಈಗಾಗಲೇ ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಎರಡು ಪಂದ್ಯಾಟದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ಕೆಎಲ್ ರಾಹುಲ್ ನೀಡಿಲ್ಲ. ಇತ್ತೀಚಿನ ಸಮಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಕೆಎಲ್ ರಾಹುಲ್ ರವರು ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ.

Rahul Dravid About KL Rahul’s Bad Performance

ಕೆ ಎಲ್ ರಾಹುಲ್ ಅವರಿಂದಾಗಿ ಬೇರೆ ಆರಂಭಿಕ ಆಟಗಾರರಿಗೂ ಕೂಡ ಅವಕಾಶ ಸಿಗದಂತಾಗಿದೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೆಎಲ್ ರಾಹುಲ್ ಅವರ ಅತ್ಯಂತ ಕಳಪೆ ಪ್ರದರ್ಶನದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ರಾಹುಲ್ ದ್ರಾವಿಡ್ ಅವರಿಗೂ ಕೂಡ ಇದೇ ರೀತಿಯ ಪ್ರಶ್ನೆಗಳು ಎದುರಾದವು. ಅದಕ್ಕೆ ಅವರು ನೀಡಿದ ಉತ್ತರ ವಿಚಿತ್ರವಾಗಿತ್ತು.

ಪ್ರತಿಯೊಬ್ಬರೂ ಕೂಡ ಈ ರೀತಿಯ ಕಳಪೆ ಪ್ರದರ್ಶನದ ಹಾದಿಯಲ್ಲಿ ಸಾಗಿರುತ್ತಾರೆ ಕೆಎಲ್ ರಾಹುಲ್(KL Rahul) ಕೂಡ ಅದೇ ಹಾದಿಯಲ್ಲಿ ಇದ್ದಾನೆ. ಅವನ ಮೇಲೆ ನಮಗೆ ನಂಬಿಕೆ ಇದೆ ಎಂಬುದಾಗಿ ರಾಹುಲ್ ದ್ರಾವಿಡ್(Rahul Dravid) ಕೆಎಲ್ ರಾಹುಲ್ ಅವರ ಬಗ್ಗೆ ಹೇಳಿದ್ದಾರೆ. ಇಷ್ಟೊಂದು ಕಳಪೆ ಪ್ರದರ್ಶನವನ್ನು ನೀಡುತ್ತಿದ್ದರು ಕೂಡ ಅವರ ಪರವಾಗಿ ವಹಿಸುವುದು ಸರಿಯಲ್ಲ ಎಂಬುದಾಗಿ ನೆಟ್ಟಿಗರು ವಾದ ಮಾಡಿದ್ದಾರೆ.

Leave a Comment

error: Content is protected !!