10 ವರ್ಷಗಳ ಸುಖ ದಾಂಪತ್ಯ ಜೀವನದಲ್ಲಿ ಬಿರುಕು. ಡಿವೋರ್ಸ್ ಪಡೆಯುತ್ತಿದ್ದಾರೆ ಶೋಯಬ್ ಮಲ್ಲಿಕ್ ಹಾಗೂ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಸ್ಟಾರ್ ಆಗಿರುವ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದ ಶೋಯಬ್ ಮಲಿಕ್ ಅವರು 2010ರಲ್ಲಿ ಹೈದರಾಬಾದ್ ಮತ್ತು ಪಾಕಿಸ್ತಾನದ ಸಿಯಾಲ್ಕೋಟ್ ನಲ್ಲಿ ಎರಡು ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಮದುವೆ ಆದಾಗ ಎರಡು ದೇಶಗಳ ಜನರು ಕೂಡ ಇವರಿಬ್ಬರ ಮದುವೆಯನ್ನು ಸಾಕಷ್ಟು ವಿರೋಧಿಸಿದ್ದರು. ಮೂಲಗಳ ಪ್ರಕಾರ ಶೋಯಬ್ ಮಲ್ಲಿಕ್ ಅವರಿಗೆ ಇದು ಎರಡನೇ ಮದುವೆ ಕೂಡ ಆಗಿತ್ತಂತೆ.

ಆದರೂ ಕೂಡ ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲ್ಲಿಕ್ ಎಲ್ಲಾ ವಿರೋಧಗಳ ನಡುವೆ ಪ್ರೀತಿಸಿ ಮದುವೆಯಾಗಿ ತಮ್ಮ ಪ್ರೀತಿಯೇ ಗ್ರೇಟ್ ಎಂಬುದಾಗಿ ಎಲ್ಲರಿಗೂ ಕೂಡ ಸಾಬೀತುಪಡಿಸಿದ್ದರು. ಆದರೆ ಇವರಿಬ್ಬರ ಮದುವೆ ಹಾಗೂ ದಾಂಪತ್ಯ ಜೀವನದ ಬಗ್ಗೆ ಈಗ ಕೇಳಿ ಬರುತ್ತಿರುವ ಸುದ್ದಿಯನ್ನು ಕೇಳಿದರೆ ಖಂಡಿತವಾಗಿ ಆಶ್ಚರ್ಯ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಇವರಿಬ್ಬರ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಕೂಡ ಪರಸ್ಪರ ವಿವಾಹ ವಿಚ್ಛೇದನವನ್ನು ಅತಿ ಶೀಘ್ರದಲ್ಲೇ ಪಡೆದುಕೊಳ್ಳಲಿದ್ದಾರೆ ಎಂಬ ರೀತಿಯಲ್ಲಿ ಸುದ್ದಿಗಳು ಹರಡುತ್ತಿವೆ.

ಹೌದು ಮಿತ್ರರೇ, ಇವರಿಬ್ಬರಿಗೂ ಈಗಾಗಲೇ ಇಜಾನ್ ಮಿರ್ಜಾ ಮಲ್ಲಿಕ್ ಎನ್ನುವ ಮಗ ಕೂಡ ಇದ್ದಾನೆ. ತನ್ನ ಮಗನ ಜೊತೆಗೆ ಶೋಯಬ್ ಮಲ್ಲಿಕ್ ಅವರಿಂದ ದೂರವಾಗಿ ಸಾನಿಯಾ ಮಿರ್ಜಾ ಅವರು ಒಬ್ಬಂಟಿಯಾಗಿ ಇದ್ದಾರೆ ಎಂಬುದು ಅವರು ಪೋಸ್ಟ್ ಮಾಡಿರುವ ಫೋಟೋ ಮೂಲಕ ತಿಳಿದು ಬಂದಿದೆ. ಇವರಿಬ್ಬರು ಯಾಕೆ ಒಟ್ಟಾಗಿಲ್ಲ ಎಂಬುದು ಇನ್ನೂ ಕೂಡ ತಿಳಿದುಬಂದಿಲ್ಲ ಇದರ ಕುರಿತಂತೆ ಇಬ್ಬರೂ ಕೂಡ ಎಲ್ಲಿಯೂ ಮಾತನಾಡಿಲ್ಲ. ಪಾಕಿಸ್ತಾನದ ಮಾಧ್ಯಮಗಳು ಮಾತ್ರ ಸಾನಿಯಾ ಮಿರ್ಜಾ ಅವರಿಗೆ ಶೋಯಬ್ ಮಲ್ಲಿಕ್ ಮೋಸ ಮಾಡಿದ್ದಾರೆ ಎಂಬುದಾಗಿ ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂಬುದು ಕೂಡ ಸುದ್ದಿ ಇದೆ.

ಇನ್ನು ಇತ್ತೀಚಿಗಷ್ಟೇ ಮಗನ ಬರ್ತಡೆಯ ಸಂದರ್ಭದಲ್ಲಿ ಮಾತ್ರ ಫೋಟೋ ಪೋಸ್ಟ್ ಮಾಡಿದ್ದರು ಆದರೆ ಸಾನಿಯಾ ಮಿರ್ಜಾ ಅವರು ಯಾವುದೇ ಫೋಟೋವನ್ನು ಪೋಸ್ಟ್ ಮಾಡಿರಲಿಲ್ಲ. ಇನ್ನೂ ಅತ್ಯಂತ ರೀಸೆಂಟ್ ಆಗಿ ನಡೆದಿರುವ ಸಂದರ್ಶನ ಒಂದರಲ್ಲಿ ಸಾನಿಯಾ ಮಿರ್ಜಾ ಅವರ ಟೆನಿಸ್ ಸಾಧನೆಗಳ ಬಗ್ಗೆ ಕೇಳಿದಾಗ ಶೋಯಬ್ ಮಲ್ಲಿಕ್ ನನಗೆ ತಿಳಿದಿಲ್ಲ ಎಂಬುದಾಗಿ ಕೇಳಿದಾಗ ಸಂದರ್ಶಕ ನೀವೆಂತಹ ಗಂಡ ಎನ್ನುವುದಾಗಿ ತಮಾಷೆಯಾಗಿ ಪ್ರಶ್ನಿಸಿದ್ದರು. ಈಗ ನಿಜಕ್ಕೂ ಕೂಡ ಈ ಎಲ್ಲಾ ಬೆಳವಣಿಗೆಗಳನ್ನು ಒಟ್ಟಾಗಿ ತಾಳೆ ಹಾಕಿ ನೋಡಿದರೆ ಸಿಗುತ್ತಿರುವ ಉತ್ತರ ಇವರಿಬ್ಬರ ನಡುವೆ ಕಂದಕ ಏರ್ಪಟ್ಟಿರುವುದಂತೂ ನಿಜ ಎಂಬುದಾಗಿ ಸ್ಪಷ್ಟವಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದನ್ನು ಕಾಲವೇ ನಿರ್ಧರಿಸಬೇಕು.

Leave a Comment

error: Content is protected !!