Surya Kumar Yadav: ಭಾರತೀಯ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಸೂರ್ಯಕುಮಾರ್ ಯಾದವ್ ರವರ ಪತ್ನಿ, ಮಂಗಳೂರಿನವರೇ! ಹೇಗಿದ್ದಾರೆ ಗೊತ್ತಾ ನೋಡಿ ಮೊದಲ ಬಾರಿಗೆ.

Surya Kumar Yadav ಕೆಲವು ವರ್ಷಗಳ ಹಿಂದೆ ಹೋದರೆ ಸೂರ್ಯಕುಮಾರ ಯಾದವ್ ಕೇವಲ ಐಪಿಎಲ್(IPL) ನಲ್ಲಿ ಮುಂಬೈ ತಂಡಕ್ಕೆ ಮಾತ್ರ ಪ್ರದರ್ಶನ ನೀಡುವುದಕ್ಕೆ ಸೀಮಿತ ರಾಗಿದ್ದರು. ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಬೇಕು ಎನ್ನುವ ಕೂಗು ಕ್ರಿಕೆಟ್ ಅಭಿಮಾನಿಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿತ್ತು. ಹಲವಾರು ವರ್ಷಗಳ ನಂತರ ಕೊನೆಗೂ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ಈಗ ಸೇರಿಕೊಂಡಿದ್ದಾರೆ.

ಅವರ ಅಗತ್ಯತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಎಷ್ಟಿತ್ತು ಎಂಬುದನ್ನು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಗಮನಿಸಿದರೆ ತಿಳಿದು ಬರುತ್ತದೆ. ಅತ್ಯಂತ ವೇಗವಾಗಿ ಟಿ20 ನಲ್ಲಿ ನಂಬರ್ ಒನ್ ಬ್ಯಾಟ್ಸ್ಮನ್ ಆಗಿರುವಂತಹ ಹೆಗ್ಗಳಿಕೆಯು ಕೂಡ ಸೂರ್ಯಕುಮಾರ್ ಯಾದವ್(Surya Kumar Yadav) ಅವರಿಗೆ ಸಲ್ಲುತ್ತದೆ. ಒಟ್ಟಾರೆಯಾಗಿ ಕೇವಲ ಐಪಿಎಲ್ ನಲ್ಲಿ ಮಾತ್ರವಲ್ಲದೇ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಕೂಡ ಸೂರ್ಯಕುಮಾರ್ ಯಾದವ್ ರವರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.

suryakumar yadav wife

ಸೂರ್ಯ ಕುಮಾರ್ ಯಾದವ್ ರವರು ಮುಂಬೈನವರೇ ಆಗಿರಬಹುದು ಆದರೆ ಅವರಿಗೂ ಕರ್ನಾಟಕಕ್ಕೂ ಕೂಡ ನಂಟಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬೇಕಾಗಿದೆ. ಹೌದು ನಾವು ಮಾತನಾಡುತ್ತಿರುವುದು ಅವರ ಪತ್ನಿ ದೇವಿಶಾ ಶೆಟ್ಟಿ(Devisha Shetty) ಅವರ ಬಗ್ಗೆ. ಆ ಲೆಕ್ಕದಲ್ಲಿ ಮಾತನಾಡಲು ಹೋಗುವುದಾದರೆ ಸೂರ್ಯ ಕುಮಾರ್ ಯಾದವ್ ರವರು ಕರ್ನಾಟಕದ ಅಳಿಯ ಎಂದು ಹೇಳಬಹುದು.

ಸೂರ್ಯ ಕುಮಾರ್ ಯಾದವ್ ರವರ ಪತ್ನಿ ಆಗಿರುವ ದೇವಿಶಾ ಶೆಟ್ಟಿ ನಮ್ಮ ಕರಾವಳಿಯ ಮಂಗಳೂರಿನವರು. ಸೂರ್ಯಕುಮಾರ್ ಯಾದವ್(Surya Kumar Yadav) ಹಾಗೂ ದೇವಿಶಾ ಶೆಟ್ಟಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆ ಆಗಿದ್ದಾರೆ ಎಂಬುದಾಗಿ ಕೆಲವೊಂದು ಮೂಲಗಳು ತಿಳಿಸುತ್ತವೆ. ಸೂರ್ಯ ಕುಮಾರ್ ಯಾದವ್ ಅವರ ಪತ್ನಿಯ ಫೋಟೋಗಳನ್ನು ಕೂಡ ನೀವು ಮೊದಲ ಬಾರಿಗೆ ಇಲ್ಲಿ ನೋಡಬಹುದಾಗಿದೆ.

Leave a Comment

error: Content is protected !!