Kiccha46: ಸೋಲೇ ಇಲ್ಲದ ನಿರ್ದೇಶಕನ ಜೊತೆಗೆ ಕಿಚ್ಚನ ಮುಂದಿನ ಸಿನಿಮಾ. ಸಿನಿಮಾದ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ.

Kiccha Sudeep ಬಾದ್ಷಾ ಕಿಚ್ಚ ಸುದೀಪ್(Baadshah Kiccha Sudeep) ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆಗೆ ಉತ್ತರ ಸಿಕ್ಕಂತಿದೆ. ಹೌದು ಗೆಳೆಯರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೊನೆಯ ಬಾರಿಗೆ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದು ವಿಕ್ರಾಂತ್ ರೋಣ ಸಿನಿಮಾದ ಮೂಲಕ. ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಆರು ತಿಂಗಳಿಗೂ ಅಧಿಕಕಾಲ ಕಳೆದಿದ್ದು ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಹಲವಾರು ಗಾಳಿ ಸುದ್ದಿಗಳು ಎದ್ದಿವೆ ಹೊರತು ಸ್ಪಷ್ಟನೆ ಯಾವುದಕ್ಕೂ ಕೂಡ ಸಿಕ್ಕಿರಲಿಲ್ಲ.

ಆದರೆ ಕೊನೆಗೂ ಈಗ ಕಿಚ್ಚ ಸುದೀಪ್ ಅವರ 46ನೇ ಸಿನಿಮಾ ಯಾವುದು ಎನ್ನುವ ಕುರಿತಂತೆ ಸ್ವಲ್ಪಮಟ್ಟಿಗೆ ಅಧಿಕೃತ ಮಾಹಿತಿಗಳು ಸಿನಿಮಾದ ನಿರ್ದೇಶಕರಿಂದಲೇ ದೊರಕಿದೆ. ಹೌದು ಗೆಳೆಯರೇ ತಮಿಳು ಸಿನಿಮಾ ರಂಗದಲ್ಲಿ ಸೋಲಿಲ್ಲದ ಸರದಾರನಾಗಿ ಕಾಣಿಸಿಕೊಳ್ಳುತ್ತಿರುವ ನಿರ್ದೇಶಕ ವೆಂಕಟ್ ಪ್ರಭು(Venkat Prabhu) ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಮೂಡಿಬರಲಿದೆ. ಅದ್ಯಕ್ಕೆ ನಾಗ ಚೈತನ್ಯ ಜೊತೆಗೆ ಕಷ್ಟ ಅಡಿ ಸಿನಿಮಾ ವನ್ನು ಮಾಡುತ್ತಿರುವ ವೆಂಕಟ್ ಪ್ರಭು ಸ್ಕ್ರಿಪ್ಟ್ ಮೇಕಿಂಗ್ ಹಂತದಲ್ಲಿ ಕಿಚ್ಚನ ಸಿನಿಮಾವನ್ನು ಇಟ್ಟಿದ್ದಾರೆ.

Kiccha Sudeep With Venkat Prabhu

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sure) ಹಾಗೂ ವೆಂಕಟ್ ಪ್ರಭು ಕಾಂಬಿನೇಷನ್ ನಲ್ಲಿ ಪಕ್ಕ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ ಮೂಡಿ ಬರಲಿದೆ ಎಂಬುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯನ್ ಬಿಡುಗಡೆ ಕಾಣಲಿದೆ ಎನ್ನುವ ಸುದ್ದಿ ಇದ್ದು ಕೆಲವು ಕಡೆಗಳಲ್ಲಿ ಕೇವಲ ತಮಿಳು ಹಾಗೂ ಕನ್ನಡದಲ್ಲಿ ಮೂಡಿಬರಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಮಾಹಿತಿಗಳ ಪ್ರಕಾರ ನಾಲ್ಕು ಭಾಷೆಗಳಿಂದ ಆಯಾಯ ಭಾಷೆಯ ಅತ್ಯಂತ ಜನಪ್ರಿಯ ಕಲಾವಿದರನ್ನು ಸಿನಿಮಾದಲ್ಲಿ ಕಾಸ್ಟ್ ಮಾಡಲು ನಿರ್ದೇಶಕರು ಯೋಚಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಒಟ್ಟಾರಿಯಾಗಿ ಈ ಸಿನಿಮಾ ಅಭಿಮಾನಿಗಳು ಇಷ್ಟಪಡುವಂತಹ ಸಿನಿಮಾಗಳಲ್ಲಿ ಒಂದಾಗಲಿದೆ ಎಂದು ನಿರ್ದೇಶಕರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಕಿಚ್ಚನ(Kiccha) ಮುಂದಿನ ಈ ಕಾಂಬಿನೇಷನ್ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!