Virat Kohli: ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ನಡೆದಂತಹ ಸಂಭಾಷಣೆ ಏನು ಗೊತ್ತಾ? ಇಲ್ಲಿದೆ ನೋಡಿ ಪ್ರತಿಯೊಂದು ಶಬ್ದ.

Virat Kohli ಲಕ್ನೋ ಹಾಗೂ ಆರ್‌ಸಿಬಿ(RCB) ತಂಡಗಳ ನಡುವಿನ ಪಂದ್ಯದಲ್ಲಿ ಪಂದ್ಯದ ಬ್ಯಾಟಿಂಗ್ ಹಾಗೂ ಬೌಲಿಂಗ್ ಗಿಂತ ಪಂದ್ಯ ನಡೆದ ನಂತರ ಭಾರತೀಯ ಕ್ರಿಕೆಟ್ ಕ್ಷೇತ್ರದ ಇಬ್ಬರು ದಿಗ್ಗಜರ ನಡುವೆ ನಡೆದಿರುವಂತಹ ಮಾತಿನ ಚಕಮಕಿ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಮನೋರಂಜನೆಯನ್ನು ನೀಡಿತು.

ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ(Virat Kohli) ಹಾಗೂ ಗೌತಮ್ ಗಂಭೀರ್(Gautam Gambhir) ನಡೆದುಕೊಂಡರೆ ನಿಜಕ್ಕೂ ಕೂಡ ಜೆಂಟಲ್ ಮ್ಯಾನ್ ಗೇಮ್ ಆಗಿರುವ ಕ್ರಿಕೆಟ್ ಗೆ ಕಳಂಕವನ್ನು ತರುವ ಕೆಲಸವನ್ನು ಮಾಡಿತು ಎಂದರೆ ತಪ್ಪಾಗಲಾರದು. ಸಾಕಷ್ಟು ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಕೂಡ ಇದು ಅಸಮಾಧಾನ ಗೊಳ್ಳುವಂತೆ ಮಾಡಿತು ಎಂದರು ಕೂಡ ತಪ್ಪಾಗಲಾರದು.

ಇಷ್ಟಕ್ಕೂ ಇವರಿಬ್ಬರ ನಡುವೆ ನಡೆದಿರುವಂತಹ ಸಂಭಾಷಣೆ ಏನು? ಯಾವ ವಿಚಾರಕ್ಕಾಗಿ ಜಗಳ ಮಾಡಿಕೊಂಡಿವೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಗೌತಮ್ ಗಂಭೀರ್(Gautam Gambhir) ಅವರು ವಿರಾಟ್ ಕೊಹ್ಲಿ ಅವರನ್ನು ಏನು ಹೇಳುತ್ತಿದ್ದೀಯ ಇನ್ನೊಮ್ಮೆ ಹೇಳು ಎಂಬುದಾಗಿ ಹೇಳ್ತಾರೆ. ಅದಕ್ಕೆ ವಿರಾಟ್ ಕೊಹ್ಲಿ ಅವರು ಗೌತಮ್ ಗಂಭೀರ್ ಅವರಿಗೆ ನಿಮ್ಮ ಬಗ್ಗೆ ನಾನು ಏನು ಮಾತಾಡಲೇ ಇಲ್ಲ ನೀವು ಯಾಕೆ ನಡುವೆ ಬರ್ತಿದ್ದೀರಾ ಎಂಬುದಾಗಿ ಹೇಳ್ತಾರೆ.

ಅದಕ್ಕೆ ಗೌತಮ ಗಂಭೀರ್ ನೀನು ನನ್ನ ತಂಡದ ಆಟಗಾರನ ಬಗ್ಗೆ ಅಂದರೆ ನನ್ನ ಕುಟುಂಬದ ಬಗ್ಗೆ ಮಾತನಾಡಿದರೆ ನಾನು ಸುಮ್ಮನೆ ಇರಬೇಕಾ ಎಂಬುದಾಗಿ ಕೇಳ್ತಾರೆ. ಅದಕ್ಕೆ ವಿರಾಟ್ ಕೊಹ್ಲಿ(Virat Kohli) ಹಾಗಿದ್ದರೆ ನಿಮ್ಮ ಕುಟುಂಬವನ್ನು ಸರಿಯಾಗಿ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ ಎಂಬುದಾಗಿ ಹೇಳಿದಾಗ ಗೌತಮ್ ಗಂಭೀರ್ ಈಗ ನಾನು ನಿನ್ನಿಂದ ಕಲಿಯಬೇಕ ಎಂಬುದಾಗಿ ಹೇಳಿ ಹೋಗುತ್ತಾರೆ.

Leave a Comment

error: Content is protected !!