ಕಿರುತೆರೆಯ ನಟಿ ಸುಕೃತಾ ಜೊತೆ ನನಗೆ ಮದುವೆ ಫಿಕ್ಸ್ ಆಗಿದೆ’ ಎಂದ ಬಿಗ್ ಬಾಸ್ 7 ವಿನ್ನರ್ ಶೈನ್ ಶೆಟ್ಟಿ!

1991 ಏಪ್ರಿಲ್ 4ರಂದು ಕುಂದಾಪುರದಲ್ಲಿ ಶರ ಚಂದ್ರ ಶೆಟ್ಟಿ ಹಾಗೂ ಇಂದಿರಾ ಶೆಟ್ಟಿಯವರ ಮಗನಾಗಿ ಜನಿಸಿ, ಇಂದು ಕರ್ನಾಟಕದ ಮನೆ ಮಗನಾಗಿ ಶೈನ್ ಆಗುತ್ತಿರುವ ಶೈನ್ ಶೆಟ್ಟಿ ಅವರಿಗೀಗ 31 ವರ್ಷ. ಚಿಕ್ಕಂದಿನಿಂದಲೂ ಗಾಯನದಲ್ಲಿ, ಅಭಿನಯದಲ್ಲಿ ಆಸಕ್ತಿಯನ್ನು ತೋರಿಸಿದ ಶೈನ್ ಶೆಟ್ಟಿ ಅವರು ಬಿಬಿಎಂ ಕೋರ್ಸ್ ಅನ್ನು ಓದುತ್ತಿರುವಾಗಲೇ ಸ್ಥಳೀಯ ವಾಹಿನಿವೊಂದರಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಾರೆ.

ನಂತರ ಮುಂಬೈನಲ್ಲಿ ನಟನೆಗೆ ಬೇಕಾದ ಕೋರ್ಸ್ ಅನ್ನು ಮುಗಿಸಿ ಬೆಂಗಳೂರಿಗೆ ಬಂದು ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾರೆ. 2013ರಲ್ಲಿ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟಿಸಿ, 2014ರಲ್ಲಿ ಮೀರಾ ಮಾಧವ ಧಾರವಾಹಿಯ ಮೂಲಕ ಕರ್ನಾಟಕದ ಮನೆ ಮಂದಿಗೆಲ್ಲ ಪರಿಚಿತರಾಗುತ್ತಾರೆ.

2016ರಲ್ಲಿ ಕುಡ್ಲ ಕಥೆ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶವು ಆಗುತ್ತದೆ. ನಂತರ ಅಸ್ತಿತ್ವ, ಜೀವನ ಯಜ್ಞ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ, ಕಾಂತರ ಚಿತ್ರದಲ್ಲಿಯೂ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರೆ. ದೂರದರ್ಶನದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಶೈನ್ ಶೆಟ್ಟಿ ಸ್ಪರ್ಧಿಯಾಗಿ ಭಾಗವಹಿಸಿದ್ದು, ನಂತರ ಕೊನೆಯ ಸ್ಪರ್ಧಿಗಳಾಗಿ ಉಳಿದ ವಾಸುಕಿ ವೈಭವ್, ಕುರಿ ಪ್ರತಾಪ್ ರನ್ನು ಹಿಂದಕ್ಕಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಆಗಿ ಹೊರಹೊಮ್ಮುತ್ತಾರೆ.

ಬಿಗ್ ಬಾಸ್ ಮನೆಯಿಂದಲೇ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರ ನಡುವೆ ಸ್ನೇಹ ಚಿಗುರೊಡೆಯಿತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲು ಇವರಿಬ್ಬರ ಸ್ನೇಹ ಹಾಗೆ ಮುಂದುವರೆದಿತ್ತು. ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥವು ನೆರವೇರಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯು ಎಲ್ಲೆಡೆ ಹರಿದಾಡಿತ್ತು.

ಆದರೆ ಇದೀಗ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರು ‘ನನಗೆ ಸುಕೃತ ಜೊತೆ ಮದುವೆ ಫಿಕ್ಸ್ ಆಗಿದೆ’ ಎಂದಿದ್ದಾರೆ. ದೀಪಿಕಾ ದಾಸ್ ಅವರ ಕಥೆ ಮುಂದೇನು ಎಂಬುದನ್ನು ಕಾದು ನೋಡಬೇಕಾಗಿದೆ …

ಕಲರ್ಸ್ ಕನ್ನಡ ವಾಹಿನಿಯವರು, ತಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳ ನಟ ನಟಿಯರನ್ನು, ಹಿಂದೆ ಪ್ರಸಾರವಾದ ಕಾರ್ಯಕ್ರಮಗಳ ಕಲಾವಿದರನ್ನು, ರಿಯಾಲಿಟಿ ಶೋಗಳ ಸ್ಪರ್ಧಿಗಳನ್ನು ತೀರ್ಪುಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅನುಬಂಧ ಅವಾರ್ಡ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ.

ಕಲರ್ಸ್ ಕನ್ನಡ ವಾಹಿನಿಯು ಅನುಬಂಧ ಅವಾರ್ಡ್ ಕಾರ್ಯಕ್ರಮದ ಪ್ರೋಮೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಶೈನ್ ಶೆಟ್ಟಿಯ ಮೇಲೆ ಒಂದು ಹುಡುಗಿ ಬಂದು ಬೀಳುತ್ತಾಳೆ…ಆ ವೇಳೆಯಲ್ಲಿ ಶೈನ್ ಶೆಟ್ಟಿ ಅವರು ನಗುತ್ತಾ ‘ಇಲ್ಲ ನನಗೆ ಸುಕೃತ ಜೊತೆ ಮದುವೆ ಫಿಕ್ಸ್ ಆಗಿದೆ’ ಎಂದು ಹೇಳುತ್ತಾ, ತಕ್ಷಣದಲ್ಲಿಯೇ ಸುಕೃತಾ ಅವರಿಗೆ ಕರೆ ಮಾಡಿ, ಮುದ್ದು ಚಿನ್ನಾ ಎಂದೆಲ್ಲಾ ಮಾತನಾಡುತ್ತಾರೆ. ಈ ವಿಡಿಯೋವನ್ನು ಹಂಚಿಕೊಂಡಿದ್ದೇಕ್ಕೆ ಎಂಬುದಾಗಿ ಮೇಕಿಂಗ್ ವಿಡಿಯೋ ಪ್ರಸಾರವಾದ ಬಳಿಕ ಉತ್ತರ ಸಿಗಲಿದೆ.

Leave a Comment

error: Content is protected !!