Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ ಈ ಅಂತರಾಷ್ಟ್ರೀಯ ಕ್ರಿಕೆಟಿಗ! ಯಾರು ಗೆಸ್ ಮಾಡಿ ನೋಡೋಣ?

Ramesh Aravind ಜೀ ಕನ್ನಡ ವಾಹಿನಿಯಲ್ಲಿ ಇದೇ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮವನ್ನು ನೋಡಲು ಪ್ರತಿಯೊಬ್ಬ ಕಿರುತೆರೆಯ ಪ್ರೇಕ್ಷಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ. ರಮೇಶ್(Ramesh) ಅವರ ವಿಭಿನ್ನ ನಿರೂಪಣೆ ಶೈಲಿ ಹಾಗೂ ಸಾಧಕರ ಜೀವನದ ಕೊರಿದಂತೆ ಅರಿಯುವ ಪ್ರಯತ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಿಂದ ಆಗಲಿದೆ.

ಇನ್ನು ಈ ಬಾರಿಯ ವೀಕೆಂಡ್ ವಿತ್ ರಮೇಶ್(Weekend With Ramesh 5) ಕಾರ್ಯಕ್ರಮದ ಐದನೇ ಆವೃತ್ತಿಗೆ ಅತಿಥಿಯಾಗಿ ಬರುವಂತಹ ಸೆಲೆಬ್ರೆಟಿಗಳ ಸಂಖ್ಯೆ ಹೆಚ್ಚಾಗಿದ್ದು ಸಾಕಷ್ಟು ಖ್ಯಾತ ನಾಮರ ಹೆಸರು ಕೂಡ ಕೇಳಿ ಬರುತ್ತದೆ. ಅದರಲ್ಲೂ ಕನ್ನಡ ಮೂಲದ ಒಬ್ಬ ಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗರ ಹೆಸರು ಕೂಡ ಈ ಬಾರಿ ಜೋರಾಗಿ ಕೇಳಿ ಬರುತ್ತಿದೆ. ಹಾಗಿದ್ದರೆ ಈ ಬಾರಿ ಆ ಸಾಧಕರ ಸೀಟ್ ನಲ್ಲಿ ಕುಳಿತುಕೊಳ್ಳಲಿರುವ ಕರ್ನಾಟಕದ ಖ್ಯಾತ ಕ್ರಿಕೆಟಿಗ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕರ್ನಾಟಕ ಮೂಲದ ಅಂತರಾಷ್ಟ್ರೀಯ ಕ್ರಿಕೆಟಿಗ ಆಗಿರುವ ಕೆ ಎಲ್ ರಾಹುಲ್(KL Rahul) ರವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.

ಆದರೆ ಒಬ್ಬ ಕನ್ನಡಿಗನಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಾಗೂ ಐಪಿಎಲ್ ನಲ್ಲಿ ಕೆಎಲ್ ರಾಹುಲ್(KL Rahul) ರವರು ಈಗಾಗಲೇ ಹಲವಾರು ಸಾಧನೆಯನ್ನು ಮಾಡಿದ್ದಾರೆ. ಸದ್ಯದ ಮಟ್ಟಿಗೆ ಕರ್ನಾಟಕ ಮೂಲದಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಏಕೈಕ ಆಟಗಾರ ಇವರಾಗಿದ್ದು ಇವರ ಕ್ರಿಕೆಟ್ ಜೀವನ ಎನ್ನುವುದು ಸಾಕಷ್ಟು ಕರ್ನಾಟಕ(Karnataka) ಮೂಲದ ಭವಿಷ್ಯದ ಯುವ ಕ್ರಿಕೆಟಿಗರಿಗೆ ಒಂದು ಸ್ಪೂರ್ತಿಯ ಹಾದಿಯಾಗಲಿದೆ. ಕೆಎಲ್ ರಾಹುಲ್ ರವರ ಎಪಿಸೋಡ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಾಗೂ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!