ಬೆಡ್ ರೂಮ್ ನಲ್ಲಿ ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಮಾಡಬಾರದನ್ನ ಮಾಡಿ ಬಿಗ್ ಬಾಸ್ ನಿಂದ ಹೊರಗೆ

ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಬಿಗ್ ಬಾಸ್ ಈಗಾಗಲೇ 9ನೆಯ ಅವತರಣಿಕೆಯನ್ನು ಈಗಾಗಲೇ ಪ್ರಾರಂಭಿಸಿದ್ದು ನವೀನರು ಹಾಗೂ ಪ್ರವೀಣರ ನಡುವೆ ಈಗಾಗಲೇ ಬಿಗ್ ಬಾಸ್ ಕದನ ನಡೆಯುತ್ತಿರುವುದು ನಿಮಗೆ ತಿಳಿದಿರುವ ವಿಚಾರವಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಗೆಲ್ಲುತ್ತಾರೆ ಎಂಬ ಕುರಿತಂತೆ, ಈಗಾಗಲೇ ಚರ್ಚೆಗಳು ಕೂಡ ಬಿಗ್ ಬಾಸ್ ಪ್ರೇಕ್ಷಕರ ನಡುವೆ ಪ್ರಾರಂಭವಾಗಿದೆ.

ಮನೆಯಲ್ಲಿ ಹಲವಾರು ಸ್ಪರ್ದಿಗಳು ಈಗಾಗಲೇ ತಮ್ಮ ಟಾಸ್ಕ್ ಹಾಗೂ ನಡವಳಿಕೆಯ ಮೂಲಕ ಜನರ ಚರ್ಚೆಯ ಪ್ರಮುಖ ಅಂಶವಾಗಿ ಉಳಿದುಕೊಂಡಿದ್ದಾರೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಬಿಗ್ ಬಾಸ್ ಮನೆಯಲ್ಲಿ ಸುದ್ದಿ ಆಗುತ್ತಿರುವ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಅವರ ಬಗ್ಗೆ.

ಬಿಗ್ ಬಾಸ್ ಓಟಿಟಿ ಮೂಲಕ ಇಬ್ಬರೂ ಕೂಡ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮಕ್ಕೆ ತೇರ್ಗಡೆಯಾಗಿ ಬಂದಿದ್ದಾರೆ. ಅಲ್ಲಿಂದ ಪ್ರಾರಂಭಿಸಿ ಇಲ್ಲಿಯವರೆಗೂ ಕೂಡ ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇದೆ ಎಂಬುದಾಗಿ ಪ್ರೇಕ್ಷಕರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತೆ ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ನಡೆದುಕೊಂಡಿರುವ ರೀತಿ ನಿಜಕ್ಕೂ ಕೂಡ ಪ್ರೇಕ್ಷಕರನ್ನು ಗರಂ ಆಗುವಂತೆ ಮಾಡಿದೆ.

ಆ ಕೋಣೆಯಲ್ಲಿ ಆರ್ಯವರ್ಧನ್ ಗುರೂಜಿ ಅವರ ಜೊತೆಗೆ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ರವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ಅವರನ್ನು ತಬ್ಬಿಕೊಂಡು ಸಾನಿಯಾ ಅಯ್ಯರ್ ಅವರ ಪಕ್ಕದಲ್ಲಿಯೇ ಮಲಗಿದ್ದರು. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು ಇದನ್ನು ನೋಡಿರುವ ಪ್ರೇಕ್ಷಕರು ಇದು ಫ್ಯಾಮಿಲಿ ರಿಯಾಲಿಟಿ ಶೋ ನೀವು ಹೀಗೆ ಮಾಡುವುದು ಎಷ್ಟು ಸರಿ, ಕುಟುಂಬದ ಜೊತೆಗೆ ಈ ಕಾರ್ಯಕ್ರಮವನ್ನು ನಾವು ಹೇಗೆ ನೋಡಲು ಸಾಧ್ಯ ಎಂಬುದಾಗಿ ಅಸಮಾಧಾನದಿಂದ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!