Garuda Purana: ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಬೇಕು ಎನ್ನುತ್ತೆ ಗರುಡ ಪುರಾಣ!

Garuda Purana ಭಗವಾನ್ ಶ್ರೀ ವಿಷ್ಣು(Bhagavan Sri Vishnu) ತನ್ನ ವಾಹನ ಆಗಿರುವ ಗರುಡನಿಗೆ ಜೀವನದ ರಹಸ್ಯಗಳನ್ನು ಹೇಳಿರುವಂತಹ ಅಂಶಗಳ ಗ್ರಂಥವೇ ಗರುಡ ಪುರಾಣವಾಗಿದೆ. ಅತ್ಯಂತ ಪ್ರಾಚೀನ ಗ್ರಂಥಗಳಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ. ಇನ್ನು ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಏನೆಲ್ಲ ಮಾಡಬೇಕು ಎನ್ನುವುದಾಗಿ ಕೂಡ ಭಗವಾನ್ ಶ್ರೀ ವಿಷ್ಣು ಗರುಡ ಪುರಾಣದಲ್ಲಿ ಹೇಳಿದ್ದು, ಸನಾತನ ಹಿಂದೂ ಧರ್ಮದಲ್ಲಿ(Sanatan Hindu Dharm) ಪವಿತ್ರ ಗ್ರಂಥ ಎನಿಸಿಕೊಂಡಿರುವ ಗರುಡ ಪುರಾಣದ ಕುರಿತು ಇಂದು ತಿಳಿಯೋಣ ಬನ್ನಿ.

ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ಧನ್ಯವಾದಗಳನ್ನು ತಿಳಿಸಬೇಕು ಹಾಗೂ ರಾತ್ರಿ ಮಲಗುವ ಮುನ್ನ ದೇವರಿಗೆ ಧನ್ಯವಾದಗಳನ್ನು ತಿಳಿಸಬೇಕು. ಇಂದಿನ ದಿನಾ ಚೆನ್ನಾಗಿ ಇರುವುದಕ್ಕೆ ಧನ್ಯವಾದ ಹಾಗೂ ನಾಳಿನ ದಿನಾ ಚೆನ್ನಾಗಿರಲಿ ಎನ್ನುವುದನ್ನು ದೇವರಿಗೆ ತಲುಪಿಸಬೇಕು. ಇನ್ನು ದಿನದ ಮೊದಲ ಆಹಾರವನ್ನು ಹಸುವಿಗೆ ಹಾಗೂ ಕೊನೆಯ ಆಹಾರವನ್ನು ನಾಯಿಗೆ ನೀಡುವ ಮೂಲಕ ಪಿತೃಗಳ(Ancestors) ಆಶೀರ್ವಾದವನ್ನು ಪಡೆಯಬೇಕು. ಇದರಿಂದಾಗಿ ನಿಮ್ಮ ದಿನ ಚೆನ್ನಾಗಿ ಸಾಗಲಿದೆ.

ಇನ್ನು ಸನಾತನ ಹಿಂದೂ ಧರ್ಮದ(Hindu Dharma) ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಕೂಡ ಆಚರಿಸಿಕೊಂಡು ಬಂದಿರುವ ದೇವರಿಗೆ ಭೋಗ ನೀಡುವ ಪದ್ಧತಿಯನ್ನು ಕೂಡ ಆಗಾಗ ಅನುಸರಿಸಬೇಕು. ಸಾತ್ವಿಕ ಆಹಾರವನ್ನು ತಯಾರಿಸಿದ ನಂತರ ದೇವರಿಗೆ ಭೋಗವನ್ನು ಅರ್ಪಿಸಿ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸಬೇಕು.

ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ದೇವಿ( Godess Lakshmi ) ನೆಲೆಸಿರುತ್ತಾಳೆ ಎಂಬುದಾಗಿ ಪ್ರತೀತಿಯಿದೆ. ಹೀಗಾಗಿ ನಿಯಮಿತವಾಗಿ ಪ್ರತಿದಿನ ತುಳಸಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಮೃದ್ಧಿ ಹಾಗೂ ಸಂಪತ್ತು ಸಮೃದ್ಧವಾಗಿ ನೆಲೆಸಿರುತ್ತದೆ. ಇವಿಷ್ಟು ಕೆಲಸಗಳನ್ನು ನೀವು ನಿಮ್ಮ ದೈನಂದಿನ ಜೀವನದಲ್ಲಿ ನೆರವೇರಿಸಿದರೆ ಖಂಡಿತವಾಗಿ ಅದೃಷ್ಟ ಎನ್ನುವುದು ನಿಮ್ಮ ಸಾಥ್ ನೀಡುತ್ತದೆ. ತಪ್ಪದೇ ಇವುಗಳನ್ನು ನಿಮ್ಮ ಸ್ನೇಹಿತರೊಂದಿಗೆ ಕೂಡ ಶೇರ್ ಮಾಡಿ.

Leave a Comment

error: Content is protected !!