Oscar Awards: ಆಸ್ಕರ್ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ಟಿಆರ್ ಧರಿಸಿದ್ದ ಕೋಟ್ ಬೆಲೆ ಎಷ್ಟು ಗೊತ್ತಾ? ಚಿನ್ನದಲ್ಲಿ ತಯಾರಿಸಿದ್ದು!

Jr Ntr ಇಂದು ನಿಜಕ್ಕೂ ಕೂಡ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಪ್ರತಿಯೊಬ್ಬರು ಕೂಡ ಹೆಮ್ಮೆಪಡುವಂತಹ ವಿಚಾರ ಯಾಕೆಂದರೆ, ರಾಜ ಮೌಳಿ(Rajamouli) ನಿರ್ದೇಶನದಲ್ಲಿ ಹಾಗೂ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ RRR ಸಿನಿಮಾದ ನಾಟು ನಾಟು ಸಾಂಗ್(Natu Natu Song) ಅಮೇರಿಕಾದ ಪ್ರತಿಷ್ಠಿತ ಆಸ್ಕರ್ ಅವಾರ್ಡ್(Oscar Awards) ಪ್ರಶಸ್ತಿಯನ್ನು ಗೆದ್ದಿದೆ.

ನಿಜಕ್ಕೂ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿಯ ಗೌರವ ಆಗಿರುವಂತಹ ಆಸ್ಕರ್ ಅವಾರ್ಡ್ ನಮ್ಮ ಭಾರತದ ಸಿನಿಮಾಗೆ ಸಿಗುತ್ತಿರುವುದು ನಿಜಕ್ಕೂ ಕೂಡ ಭಾಷೆಯ ಎಲ್ಲೆಯನ್ನು ಮೀರಿ ಪ್ರತಿಯೊಬ್ಬ ಭಾರತೀಯನೂ ಕೂಡ ಆನಂದಿಸಬೇಕು. ಅದರಲ್ಲೂ ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ಟಿಆರ್(Jr Ntr) ಅವರು ಸಖತ್ ಮಿಂಚಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಭಾರತೀಯ ಸ್ಟೈಲ್ ಅನ್ನು ಹೊಂದಿರುವಂತಹ ಕೋರ್ಟ್ ಅನ್ನು ಧರಿಸಿ ಕಾರ್ಯಕ್ರಮದಲ್ಲಿ ಅವರು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಜೂನಿಯರ್ ಎನ್ಟಿಆರ್ ಧರಿಸಿದ್ದ ವಸ್ತ್ರದ ಬೆಲೆಯ ಕುರಿತಂತೆ ಈಗ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಯಾಕೆಂದರೆ ಇದನ್ನು ಖ್ಯಾತ ಡಿಸೈನರ್ ಆಗಿರುವ ಗೌರವ್ ಗುಪ್ತ ಡಿಸೈನ್ ಮಾಡಿದ್ದು, ಇದರ ತೋಳುಗಳಲ್ಲಿ ಚಿನ್ನದಿಂದ ಹೋಲಿಸಲಾಗಿರುವ ಹುಲಿಯ ಚಿತ್ರ ಕೂಡ ಇದ್ದು ಯಂಗ್ ಟೈಗರ್ ಎಂದು ಬಿರುದಾಂಕಿತರಾಗಿರುವ ಜೂನಿಯರ್ ಎನ್ಟಿಆರ್(Jr Ntr) ಅವರ ವ್ಯಕ್ತಿತ್ವವನ್ನು ಇದರ ಮೇಲೆ ಪ್ರತಿಬಿಂಬಿಸಲಾಗಿದೆ. ಸಾಕಷ್ಟು ಉನ್ನತ ದರ್ಜೆಯ ಬಟ್ಟೆಯನ್ನು ಈ ಕೋಟ್ ಅನ್ನು ಇದನ್ನು ತಯಾರಿಸಲು ಉಪಯೋಗಿಸಲಾಗಿದೆ.

ಇದರ ಬೆಲೆ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ಎಂಬುದಾಗಿ ತಿಳಿದು ಬಂದಿದ್ದು ಈ ಬೆಲೆಯಲ್ಲಿ ಅಮೆರಿಕಾದಲ್ಲಿ ದೊಡ್ಡ ಬಂಗಲೆಯನ್ನೇ ಖರೀದಿಸಬಹುದಾಗಿತ್ತು ಎಂಬುದಾಗಿ ಎಲ್ಲರೂ ಮಾತನಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಜೂನಿಯರ್ ಎನ್ಟಿಆರ್(NTR) ರವರು ಅದೇ ಬಟ್ಟೆಯನ್ನು ಧರಿಸಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!