Duniya Vijay: ಯಾವ ಹೀರೋಯಿನ್ ಗೂ ಕಡಿಮೆಯಿಲ್ಲ ದುನಿಯಾ ವಿಜಯ್ ಪತ್ನಿ!

Keerthy Vijay ನಟ ದುನಿಯಾ ವಿಜಯ್(Duniya Vijay) ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸೈಡ್ ಆರ್ಟಿಸ್ಟ್ ಹಾಗೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅಂತಹ ಕಲರ್ ಹೊಂದಿರುವ ನಟ ಖದರ್ ಆಗಿರೋ ಹೀರೋ ಆಗ್ತಾನೆ ಎನ್ನುವ ಕನಸು ಕೂಡ ಯಾರಿಗೂ ಬಿದ್ದಿರಲಿಲ್ಲ. ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡು ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಬೆಳೆದು ನಿಂತಿರುವ ರೀತಿ ನಿಜಕ್ಕೂ ಕೂಡ ಪ್ರಶಂಸನೀಯ.

ಇತ್ತೀಚಿಗಷ್ಟೇ ಸಲಗ(Salaga Movie) ಸಿನಿಮಾದ ಮೂಲಕ ಕೇವಲ ನಾಯಕ ನಟನಾಗಿ ಮಾತ್ರವಲ್ಲದೆ ಚೊಚ್ಚಲ ಬಾರಿಗೆ ನಿರ್ದೇಶಕನಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಯಶಸ್ಸಿನ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೇವಲ ಸ್ಟಾರ್ ನಟನಾಗಿ ಮಾತ್ರವಲ್ಲದೆ ಸ್ಟಾರ್ ನಿರ್ದೇಶಕನಾಗಿ ಕೂಡ ದುನಿಯಾ ವಿಜಯ್(Duniya Vijay) ರವರನ್ನು ನಾವು ನೋಡಬಹುದಾಗಿದೆ.

ಇನ್ನು ನಟ ದುನಿಯಾ ವಿಜಯ್ ಅವರ ವೈಯಕ್ತಿಕ ಜೀವನವನ್ನು ಗಮನಿಸುವುದಾದರೆ ಅವರಿಗೆ ಈಗಾಗಲೇ ಎರಡು ಮದುವೆಯಾಗಿದೆ. ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡಿದ ನಂತರ ನಟಿ ಕೀರ್ತಿ(Keerthy Vijay) ಅವರನ್ನು ದುನಿಯಾ ವಿಜಯ್ ಅವರು ಮದುವೆ ಆಗಿದ್ದರು. ಇವರಿಬ್ಬರ ನಡುವೆ ವಯಸ್ಸಿನ ಅಂತರ ಸಾಕಷ್ಟು ಇದ್ದರೂ ಕೂಡ ಇವರಿಬ್ಬರ ಪ್ರೀತಿಗೆ ಇವರಿಬ್ಬರ ವಯಸ್ಸು ಅಡ್ಡಿ ಬಂದಿಲ್ಲ.

ಹಲವಾರು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿರುವಂತಹ ಕೀರ್ತಿ ಪಟ್ಟಾಡಿ(Keerthy Pattadi) ಈಗಲೂ ಕೂಡ ಯಾವುದೇ ಹೀರೋಯಿನ್ ಗೂ ಕಡಿಮೆ ಇಲ್ಲದಂತೆ ಕಾಣಿಸಿಕೊಳ್ಳುತ್ತಾರೆ. ನೀವು ಕೂಡ ಅವರ ಫೋಟೋಗಳನ್ನು ನೋಡಬಹುದಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!