Garuda Purana: ಜೀವನದ ನಂತರ ಮೋಕ್ಷವನ್ನು ಸಾಧಿಸಲು ಗರುಡ ಪುರಾಣದ ಪ್ರಕಾರ ಈ 3 ನಿಯಮಗಳನ್ನು ಪಾಲಿಸಬೇಕು.

Garuda Purana ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ ಮಾಡಲಾಗಿದೆ ಎಂಬುದಾಗಿ ಹಿಂದೂ ಸಂಸ್ಕೃತಿಗಳ ಪ್ರಕಾರ ನಂಬಲಾಗುತ್ತಿದ್ದು ಇದರಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಜೀವನದ ನಂತರ ಮೋಕ್ಷವನ್ನು ಸುಲಭವಾಗಿ ಪ್ರಾಪ್ತಿ ಆಗುವಂತೆ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ತಿಳಿಸಲಾಗಿದ್ದು ಆ ಕೆಲಸಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ದಾನ ಧರ್ಮಗಳನ್ನು ಹೆಚ್ಚಾಗಿ ಜೀವಿತಾವಧಿಯಲ್ಲಿ ಮಾಡಬೇಕು ಎಂಬುದಾಗಿ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಸಂಪತ್ತು ಹಾಗೂ ಸಮೃದ್ಧಿಯ ದೇವತೆಯಾಗಿರುವ ಲಕ್ಷ್ಮಿ ದೇವಿ ಇದರಿಂದ ಪ್ರಸನ್ನಳಾಗಿ ನಿಮ್ಮ ಹಲವಾರು ಪಾಪ ಕರ್ಮಗಳನ್ನು ಮನ್ನಿಸುತ್ತಾಳೆ ಹಾಗೂ ಜೀವನದ ನಂತರ ನಿಮಗೆ ಮೋಕ್ಷವನ್ನು ಕರುಣಿಸುತ್ತಾಳೆ ಎಂಬುದಾಗಿದೆ.

ಅಧರ್ಮದ ಹಾದಿಯಲ್ಲಿ ಯಾವತ್ತೂ ಕೂಡ ಹೋಗಿ ಹಣವನ್ನು ಸಂಪಾದಿಸಬಾರದು ಎಂಬುದಾಗಿ ಗರುಡ ಪುರಾಣದಲ್ಲಿ ವಿಷ್ಣು ಗರುಡನಿಗೆ ಹೇಳುತ್ತಾನೆ. ಇದರಿಂದಾಗಿ ಆತನ ಪಾಪ ಕರ್ಮಗಳು ಹೆಚ್ಚಾಗುತ್ತವೆ ಹೀಗಾಗಿಯೇ ಯಾವತ್ತೂ ಕೂಡ ಅಧರ್ಮದ ಹಾದಿಯಲ್ಲಿ ಹಣವನ್ನು ಸಂಪಾದಿಸುವಂತಹ ಕೆಲಸವನ್ನು ಮಾಡಲೇಬಾರದು ಎಂಬುದಾಗಿ ಗರುಡ ಪುರಾಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಮಹಿಳೆಯನ್ನು ದೇವಿಯ ಸ್ವರೂಪ ಎಂಬುದಾಗಿ ಕರೆಯಲಾಗುತ್ತದೆ ಹೀಗಾಗಿ ನಿಮ್ಮ ಜೀವಿತಾವಧಿಯಲ್ಲಿ ಯಾವತ್ತೂ ಕೂಡ ಮಹಿಳೆಗೆ ಅವಮಾನ ಮಾಡುವಂತಹ ಕೆಲಸವನ್ನು ಮಾಡಲೇಬೇಡಿ ಎಂಬುದಾಗಿ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಮೂರು ಕೆಲಸಗಳನ್ನು ತಪ್ಪದೇ ನಿರ್ವಹಿಸಿ ಖಂಡಿತವಾಗಿ ನೀವು ನಿಮ್ಮ ಜೀವಿತಾವಧಿಯ ನಂತರ ಮೋಕ್ಷವನ್ನು ಪಡೆಯುತ್ತಿರಿ ಎಂಬುದಾಗಿ ಪವಿತ್ರ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

Leave a Comment

error: Content is protected !!