Prashanth Neel: ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Prashanth Neel ಸದ್ಯದ ಮಟ್ಟಿಗೆ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಿರ್ದೇಶಕರಲ್ಲಿ ಪ್ರಶಾಂತ್ ನೀಲ್(Prashanth Neel) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಮೊದಲ ಸಿನಿಮಾ ಉಗ್ರಂ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ದೊಡ್ಡದಾಗಿ ಸಾಧಿಸುತ್ತೇನೆ ಎಂಬ ಸುಳಿವನ್ನು ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿದ್ದರು.

ಕೆಜಿಎಫ್ ಸರಣಿ ಸಿನಿಮಾಗಳ ನಂತರ ಈಗ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ತೆಲುಗಿನ ರೆಬಲ್ ಸ್ಟಾರ್ ಪ್ರಭಾಸ್(Prabhas) ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಲಾರ್(Salaar) ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಿಗ್ ಬಜೆಟ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

ಇನ್ನು ಈ ಸಿನಿಮಾ ಇನ್ನೇನು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು ಭರ್ಜರಿ 400 ರಿಂದ 500 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ಮೂಡಿಬರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಸಿನಿಮಾಗಾಗಿ ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವ ಪ್ರಶಾಂತ್ ನೀಲ್ ಸಲಾರ್(Salaar) ಸಿನಿಮಾಗಾಗಿ ಭರ್ಜರಿ 25 ರಿಂದ 30 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸ್ಟಾರ್ ನಟರಿಗಿಂತಲೂ ಹೆಚ್ಚಾಗಿ ಪ್ರಶಾಂತ್ ನೀಲ್(Prashanth Neel) ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕಾಗಿದೆ.

Leave a Comment

error: Content is protected !!