Devotion: ನಿಮ್ಮ ಮನೆಯಲ್ಲಿ ಈ ದೇವರ ಮೂರ್ತಿಗಳು ಇದ್ದರೆ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.

God Statue ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸುವುದು ಅಥವಾ ದೇವರ ಪೂಜೆಯಿಂದ(Pooje) ದಿನವನ್ನು ಪ್ರಾರಂಭಿಸುವ ಅಭ್ಯಾಸವನ್ನು ರೂಡಿಸಿಕೊಳ್ಳುತ್ತಾರೆ. ಇದು ಧಾರ್ಮಿಕವಾಗಿ ನೋಡುವುದಾದರೆ ಖಂಡಿತವಾಗಿ ಒಳ್ಳೆಯ ಆರಂಭವೇ ಸರಿ ಎಂದು ಹೇಳಬಹುದಾಗಿದೆ.

ಪ್ರತಿಯೊಬ್ಬರ ಮನೆಯಲ್ಲಿ ಕೂಡ ನಕಾರಾತ್ಮಕ ಶಕ್ತಿಗಳು ಇದ್ದೇ ಇರುತ್ತವೆ ದೇವರ ಪೂಜೆ ಹಾಗೂ ದೇವರ ಸ್ಮರಣೆಯಿಂದಾಗಿ ಅವುಗಳು ನಿಮ್ಮ ಜೀವನ ಹಾಗೂ ಮನೆ ಎರಡರಿಂದ ಕೂಡ ದೂರ ಹೋಗುತ್ತವೆ. ಪುರಾಣ ಶಾಸ್ತ್ರಗಳ ಪ್ರಕಾರ ಯಾವ ರೀತಿಯ ದೇವರ ಮೂರ್ತಿಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಯಾವೆಲ್ಲ ಲಾಭವು ಸಿಗುತ್ತವೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ವಿಘ್ನ ವಿನಾಶಕ ಗಣಪನ(Lord Ganesha) ಹಳದಿ ಅಥವಾ ಕೇಸರಿ ಬಣ್ಣದ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸಾಕಷ್ಟು ಅಡ್ಡಿ ಆತಂಕಗಳಿಂದ ನೀವು ದೂರವಾಗಬಹುದು. ಇದರ ಜೊತೆಗೆ ನಿಮ್ಮ ದೇವರ ಕೋಣೆಯಲ್ಲಿ ಬಾಲಕೃಷ್ಣನ(Balakrishna) ವಿಗ್ರಹವನ್ನು ಇಡುವುದು ಕೂಡ ನಿಮಗೆ ಸಾಕಷ್ಟು ಶುಭವನ್ನು ತಂದು ಕೊಡಲಿದೆ. ಬೇರೆಲ್ಲ ಮೂರ್ತಿಗಳಿಗಿಂತ ಬಾಲಕೃಷ್ಣನ ಮೂರ್ತಿ ಅತ್ಯಂತ ಪರಿಪೂರ್ಣವಾದದ್ದು ಎಂಬುದು ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಸರ್ವರನ್ನು ಪಾಲಿಸುವಂತಹ ಶ್ರೀ ವಿಷ್ಣು ಹಾಗೂ ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿಯ ಮೂರ್ತಿಯನ್ನು ನಿಮ್ಮ ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ನಿಮ್ಮ ಮನೆಯ ಸಮೃದ್ಧಿ ಹೆಚ್ಚಾಗುತ್ತದೆ. ಶ್ರೀ ರಾಮನ ಮೂರ್ತಿ ಕೂಡ ಅತ್ಯಂತ ಶುಭಕರವಾದದ್ದು ಎಂಬುದು ಧಾರ್ಮಿಕ ಗ್ರಂಥಗಳಲ್ಲಿ ಕೂಡ ಉಲ್ಲೇಖಿತವಾಗಿರುವಂತಹ ಅಂಶ. ಯಾವತ್ತೂ ಕೂಡ ದೇವರ ಮೂರ್ತಿಯನ್ನು ಹಾಗೆ ಇಡಬಾರದು. ದೇವರ ಮೂರ್ತಿಯ ಕೆಳಗೆ ಬಟ್ಟೆಯನ್ನು ಇಟ್ಟು ನಂತರ ಅದರ ಮೇಲೆ ಮೂರ್ತಿಯನ್ನು ಇಡುವುದು ಒಳ್ಳೆಯದು.

Leave a Comment

error: Content is protected !!