Sumalatha Ambareesh: ಅಭಿಷೇಕ್ ಅಂಬರೀಶ್ ರಾಜಕೀಯ ಎಂಟ್ರಿಯ ಬಗ್ಗೆ ತಾಯಿ ಸುಮಲತಾ ಅಂಬರೀಶ್ ಹೇಳಿದ್ದೇನು? ನೀವೇ ನೋಡಿ.

Abhishek Ambareesh ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೆಬಲ್ ಸ್ಟಾರ್ ಅಂಬರೀಶ್(Rebel Star Ambareesh) ರವರು ಕನ್ನಡ ಚಿತ್ರರಂಗದಲ್ಲಿ ಕಲಿಯುಗದ ಕರ್ಣನಾಗಿ ಮಿಂಚಿ ಮೆರೆದವರು. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ರಾಜಕೀಯ ನಾಯಕನಾಗಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ನಿಜವಾದ ನಾಯಕನಾಗಿ ಕಾಣಿಸಿಕೊಂಡವರು ನಮ್ಮೆಲ್ಲರನ್ನು ನೆಚ್ಚಿನ ಅಂಬಿ.

ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ನಂತರ ಅವರ ಸಿನಿಮಾ ರಂಗದ ವಾರಿಸುದಾರರಾಗಿ ಅವರ ಮಗ ಆಗಿರುವ ಅಭಿಷೇಕ್ ಅಂಬರೀಶ್(Abhishek Ambareesh) ರವರು ಕೂಡ ಜೂನಿಯರ್ ರೆಬಲ್ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಆಗಿರುವ ಸುಮಲತಾ ಅಂಬರೀಶ್(Sumalatha Ambareesh) ಈಗಾಗಲೇ ಮಂಡ್ಯ ಲೋಕಸಭೆ ಕ್ಷೇತ್ರದ ಎಂಪಿ ಆಗಿ ಆಯ್ಕೆಯಾಗಿದ್ದಾರೆ.

ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಅವರ ಕುಟುಂಬದಿಂದ ಅವರ ಮಗ ಆಗಿರುವ ಅಭಿಷೇಕ್ ಅಂಬರೀಶ್(Abhishek Ambareesh) ರವರು ರಾಜಕೀಯಕ್ಕೆ ಬರುತ್ತಾರಾ ಎನ್ನುವುದಾಗಿ ಕೇಳಲಾಗಿತ್ತು. ಅದಕ್ಕೆ ಅವರು ನೀಡಿರುವ ಉತ್ತರ ನಿಜಕ್ಕೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದ್ದು ಆ ಉತ್ತರವಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಈ ಕುರಿತಂತೆ ಮಾತನಾಡುತ್ತಾ ಸುಮಲತಾ ಅಂಬರೀಶ್(Sumalatha Ambareesh) ರವರು ನನಗೆ ಕುಟುಂಬ ರಾಜಕಾರಣದಲ್ಲಿ ಇಷ್ಟ ಇಲ್ಲ. ಅವನು ರಾಜಕೀಯಕ್ಕೆ ಬರುವುದರೊಳಗಡೆ ನಾನು ರಾಜಕೀಯ ಬಿಡುತ್ತೇನೆ ಎಂಬುದಾಗಿ ತಮಾಷೆಯಾಗಿ ಸುಮಲತಾ ಅಂಬರೀಶ್ ರವರು ತಮ್ಮ ಮಗನ ರಾಜಕೀಯ ಎಂಟ್ರಿ ಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಮಲತಾ ಅಂಬರೀಶ್ ಅವರ ಈ ಪ್ರತಿಕ್ರಿಯೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!