Income Tax: ಮನೆಯಲ್ಲಿ ಹೆಚ್ಚೆಂದರೆ ಎಷ್ಟು ಹಣ ಇಡಬಹುದು? ಇಲ್ಲಿದೆ ನೋಡಿ ಸಂಪೂರ್ಣ ಇನ್ಕಮ್ ಟ್ಯಾಕ್ಸ್ ಡೀಟೇಲ್ಸ್.

Income Tax Info ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಖೋಟ ನೋಟುಗಳನ್ನು ಬಯಲಿಗೆ ಎಳೆಯಲು ಮೋದಿ(Modi) ಸರ್ಕಾರ 2016 ರಂದು ಡಿ ಮೋನಿಟೈಸೇಷನ್ ಜಾರಿಗೆ ತಂದು 500 ಹಾಗೂ ಸಾವಿರ ರೂಪಾಯಿಗಳ ನೋಟನ್ನು ಬ್ಯಾನ್ ಮಾಡಿತ್ತು. ಅದೆಷ್ಟೋ ಜನರು ತೆರಿಗೆ ಕಟ್ಟುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಕೋಟ್ಯಾಂತರ ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಇದಕ್ಕಾಗಿಯೇ ಆದಾಯ ತೆರಿಗೆ ಇಲಾಖೆಯಿಂದ ಸಾಕಷ್ಟು ನಿಯಮಗಳು ಕೂಡ ಈಗಾಗಲೇ ಹೊರಬಂದಿವೆ.

ಕಪ್ಪು ಹಣ ಹಾಗೂ ತೆರಿಗೆ ಹಣವನ್ನು ಸರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ಸರ್ಕಾರ(Govt Of India) ಈಗಾಗಲೇ ಒಬ್ಬರು ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಎನ್ನುವ ರೂಪರೇಶಿಗಳನ್ನು ಈಗಾಗಲೇ ಜಾರಿಗೆ ತಂದಿದ್ದು ಇದರ ಕುರಿತಂತೆ ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದೇ ತೆರಿಗೆಯನ್ನು ಕಟ್ಟದ ಹಣವನ್ನು ಹೊಂದಿದ್ದರೆ ಅದರ ಮೇಲೆ 137 ಪ್ರತಿಶತದಷ್ಟು ಹಣವನ್ನು ನೀವು ಕಟ್ಟಬೇಕಾಗುತ್ತದೆ ಎನ್ನುವ ನಿಯಮ ಕೂಡ ಇದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ನ ನಿಯಮದ ಪ್ರಕಾರ ಒಂದು ವೇಳೆ ನೀವು 50,000 ಕ್ಕಿಂತಲೂ ಹೆಚ್ಚಿನ ಹಣವನ್ನು ಹಿಂಪಡೆಯಬೇಕಾದರೆ ಪ್ಯಾನ್ ಕಾರ್ಡನ್ನು(Pan Card) ತೋರಿಸಲೇಬೇಕು. ಒಂದು ವೇಳೆ ನೀವು ಒಂದು ವರ್ಷದಲ್ಲಿ 20 ಲಕ್ಷಕ್ಕಿಂತಲೂ ಅಧಿಕ ಠೇವಣಿ ಇಡಬೇಕಾದರೆ ಫ್ಯಾನ್ ಹಾಗೂ ಆಧಾರ್ ಕಾರ್ಡನ್ನು ತೋರಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಈ ಠೇವಣಿ ವಿಫಲವಾದರೆ 20 ಲಕ್ಷಕ್ಕೂ ಅಧಿಕ ದಂಡವನ್ನು ಕೂಡ ವಿಧಿಸಬೇಕಾಗುತ್ತದೆ. ಇನ್ನು ನೀವು ಮನೆಯಲ್ಲಿ ಇಡಬಹುದಾದಂತಹ ಹಣದ ವಿಚಾರದಲ್ಲಿ ಕೂಡ ಕೆಲವೊಂದು ವಿಚಾರಗಳನ್ನು ಗಮನಿಸಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಆದಾಯ ಅಷ್ಟೇ ದೊಡ್ಡಮಟ್ಟದಲ್ಲಿದ್ದರೆ ಮಾತ್ರ ಹಾಗೂ ಅದಕ್ಕೆ ತಕ್ಕಂತಹ ಟ್ಯಾಕ್ಸ್ ಮಾಹಿತಿಗಳು ಸರಿಯಾಗಿರಬೇಕು. ಹೀಗಾಗಿ ನಿಯಮಗಳ ಪ್ರಕಾರ ನಿಮ್ಮ ಮನೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಕೂಡ ಇಟ್ಟುಕೊಳ್ಳಬಹುದು ಆದರೆ ಪ್ರತಿಯೊಂದು ಪೈಸೆಗೂ ಕೂಡ ಲೆಕ್ಕ ಇಟ್ಟುಕೊಳ್ಳುವುದಾದರೆ ಮಾತ್ರ. ಇಲ್ಲದಿದ್ದಲ್ಲಿ ನಿಮ್ಮ ಬಳಿ ಇರುವುದಕ್ಕಿಂತ ಹೆಚ್ಚಿನ ಹಣವನ್ನು ನೀವು ದಂಡದ ರೂಪದಲ್ಲಿ ಕಟ್ಟ ಬೇಕಾಗಿರುವಂತಹ ಸಾಧ್ಯತೆ ಭಾರತೀಯ ಕಂದಾಯ(Tax) ನಿಯಮಗಳ ಪ್ರಕಾರ ಇದೆ.

Leave a Comment

error: Content is protected !!