Aishwarya Rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ಯಾ? ಅಭಿಷೇಕ್ ಬಚ್ಚನ್ ಅವರೇ ನೀಡಿದ್ರು ಓಪನ್ ಹೇಳಿಕೆ.

Abhishek Bachchan ನಟಿ ಐಶ್ವರ್ಯ ರೈ(Aishwarya Rai) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಗಳೂರು ಮೂಲದ ಕರಾವಳಿ ಹುಡುಗಿ ವಿಶ್ವ ಸುಂದರಿಯಾಗಿ ಮಿಂಚಿ ನಂತರ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನಟನೆ ಹಾಗೂ ಪರಿಶ್ರಮದ ಫಲವಾಗಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹಾಗೂ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ಅತ್ಯಂತ ಬೇಡಿಕೆ ಹೊಂದಿರುವಂತಹ ನಟಿಯರಲ್ಲಿ ಅವರು ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ನಟಿ ಐಶ್ವರ್ಯ ಅವರ ಹೆಸರು ಮದುವೆ ಆಗುವುದಕ್ಕಿಂತ ಮುಂಚೆ ಸಲ್ಮಾನ್ ಖಾನ್(Salman Khan) ಹಾಗೂ ವಿವೇಕ್ ಒಬೆರಾಯ್(Vivek Oberoi) ಅವರ ಜೊತೆಗೆ ಕೇಳಿ ಬಂದಿದ್ರು ಕೂಡ ಅವರು ಮದುವೆಯಾಗಿದ್ದು ಮಾತ್ರ ಅಮಿತಾಬ್ ಬಚ್ಚನ್(Amitabh Bacchan) ಅವರ ಮಗ ಆಗಿರುವಂತಹ ಅಭಿಷೇಕ್ ಬಚ್ಚನ್ ಅವರನ್ನು.

ಹೌದು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿರುವ ಐಶ್ವರ್ಯ ರೈ ಅವರು ಈಗಾಗಲೇ ಆರಾಧ್ಯ ಎನ್ನುವಂತಹ ಮಗಳನ್ನು ಕೂಡ ಹೊಂದಿದ್ದಾರೆ. ಕಳೆದು ಸಾಕಷ್ಟು ವರ್ಷಗಳಿಂದ ಹಲವು ಬಾರಿ ಹಾಗೂ ಇತ್ತೀಚಿಗಷ್ಟೇ ಮತ್ತೆ ಅಭಿಷೇಕ್ ಬಚ್ಚನ್(Abhishek Bacchan) ಹಾಗೂ ಐಶ್ವರ್ಯ ರವರ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ಹೌದು ಇತ್ತೀಚಿಗಷ್ಟೇ ನೀತ ಮುಕೇಶ್ ಅಂಬಾನಿ(Nita Mukhesh Ambani) ಅವರ ಕಾರ್ಯಕ್ರಮದಲ್ಲಿ ಕೂಡ ಐಶ್ವರ್ಯ ರೈ ತಮ್ಮ ಮಗಳ ಜೊತೆಗೆ ಮಾತ್ರ ಕಾಣಿಸಿಕೊಂಡಿದ್ದು ಈ ಅನುಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಇದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವಂತಹ ಟೀಕೆಗಳಿಗೂ ಹಾಗೂ ಗಾಳಿ ಸುದ್ದಿಗಳಿಗೂ ಉತ್ತರ ಎನ್ನುವಂತೆ ಅಭಿಷೇಕ್ ಬಚ್ಚನ್(Abhishek Bacchan) ರವರು ” ಓಹೋ ಹೌದಾ ನನಗೂ ಕೂಡ ಈ ವಿಚಾರ ತಿಳಿದಿರಲಿಲ್ಲ ಡಿವೋರ್ಸ್ ಕೊಟ್ಟ ನಂತರ ನನ್ನ ಎರಡನೇ ಮದುವೆಗೂ ಕೂಡ ನೀವೇ ಪ್ಲಾನ್ ಮಾಡುತ್ತಿದ್ದೀರಾ ” ಎಂಬುದಾಗಿ ಕೂಡ ವ್ಯಂಗ್ಯ ಮಾಡುವಂತೆ ಟೀಕಾಕಾರರಿಗೆ ಹಾಗೂ ಗಾಳಿ ಸುದ್ದಿಯನ್ನು ಹರಡುವವರೆಗೆ ಖಡಕ್ ಉತ್ತರವನ್ನು ನೀಡಿದ್ದು ಈ ಮೂಲಕ ಐಶ್ವರ್ಯ ರೈ(Aishwarya Rai) ಅವರ ಜೊತೆಗೆ ವಿವಾಹ ವಿಚ್ಛೇದನವನ್ನು ಪಡೆಯುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

Leave a Comment

error: Content is protected !!