Suniel Shetty: ಮೊದಲ ಬಾರಿಗೆ ಕಿಚ್ಚನ ಪೈಲ್ವಾನ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಸುನಿಲ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

Suniel Shetty ಕರಾವಳಿ ಮೂಲದವರು ಆಗಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ನಟ ಸುನಿಲ್ ಶೆಟ್ಟಿ(Suniel Shetty) ಕಾಣಿಸಿಕೊಂಡಿದ್ದು ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್(Pailwan) ಸಿನಿಮಾದ ಮೂಲಕ. ಈ ಸಿನಿಮಾ ಯಾವ ರೀತಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಸಿನಿಮಾದಲ್ಲಿ ಅವರು ಕಿಚ್ಚ ಸುದೀಪ್ ಅವರ ಕುಸ್ತಿ ಗುರುವಾಗಿ ಕಾಣಿಸಿಕೊಳ್ಳುತ್ತಾರೆ.

ಸಿನಿಮಾ ಬಾಲಿವುಡ್ ನ ಸಲ್ಮಾನ್ ಖಾನ್(Salman Khan) ನಟನೆಯ ಸುಲ್ತಾನ್ ಸಿನಿಮಾದ ರಿಮೇಕ್ ರೀತಿಯಲ್ಲಿ ಕಂಡಿದ್ದರು ಕೂಡ ಪೈಲ್ವಾನ್ ಸಿನಿಮಾ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಖತ್ ಆಗಿ ಮೂಡಿ ಬಂದಿತ್ತು. ಬಿಡುಗಡೆಗು ಮುನ್ನವೇ ಟೀಸರ್ ಹಾಗೂ ಟ್ರೈಲರ್ ಮುಖಾಂತರ ಪರಭಾಷೆಗಳನ್ನು ಕೂಡ ಸೆಳೆದಿದ್ದ ಈ ಸಿನಿಮಾ ಬಿಡುಗಡೆಯಾದ ನಂತರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.

ಕಿಚ್ಚ ಸುದೀಪ್(Kiccha Sudeep) ರವರ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ತಮ್ಮ ದೈಹಿಕ ಮೈಕಟ್ಟನ್ನು ಹುರಿಗೊಳಿಸಿಕೊಂಡು ದೊಡ್ಡಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಇನ್ನು ಈ ಸಿನಿಮಾಗೆ ಬಾಲಿವುಡ್ ಚಿತ್ರರಂಗದ ಬಲ್ವಾನ್ ಸುನಿಲ್ ಶೆಟ್ಟಿ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಕೋಟಿ ಎಂಬುದನ್ನು ತಿಳಿಯೋಣ ಬನ್ನಿ.

ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಲು ಸುನಿಲ್ ಶೆಟ್ಟಿ ಭರ್ಜರಿ 2 ರಿಂದ 2.5 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರಂತೆ. ಈ ಸಿನಿಮಾದಲ್ಲಿ ಸುನಿಲ್ ಶೆಟ್ಟಿ(Suniel Shetty) ಅವರ ನಟನೆ ಹಾಗೂ ಸಿನಿಮಾದ ಕುರಿತಂತೆ ನಿಮಗಿರುವಂತಹ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!