Actress Prema: ಎರಡನೇ ಮದುವೆ ಬಗ್ಗೆ ಖಡಕ್ ಆಗಿ ನಟಿ ಪ್ರೇಮ ಹೇಳಿದ್ದೇನು ಗೊತ್ತಾ? ಮುದುಕ ಎಂದು ಟಾಂಗ್ ನೀಡಿದ್ದು ಯಾರಿಗೆ?

Actress Prema ಒಂದು ಕಾಲದಲ್ಲಿ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ನಾಯಕ ನಟರ ಚಿತ್ರದಲ್ಲಿ ಕೂಡ ನಾಯಕಿಯಾಗಿ ಪ್ರೇಮ(Prema) ಅವರೇ ಇರಬೇಕಾಗಿತ್ತು ಎನ್ನುವುದಾಗಿ ನಿರ್ದೇಶಕರು ಹಾಗೂ ನಿರ್ಮಾಪಕರು ಡಿಮ್ಯಾಂಡ್ ಮಾಡುತ್ತಿದ್ದರು ಅಷ್ಟರಮಟ್ಟಿಗೆ ಪ್ರೇಮ ಅವರ ಬೇಡಿಕೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿತ್ತು. ಅವರಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕನ್ನಡ ಚಿತ್ರರಂಗದ ಬೇರೆ ಯಾವ ನಟಿ ಕೂಡ ಅನುಭವಿಸಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

ನಟಿ ಪ್ರೇಮ ಅವರು ಶಿವಣ್ಣನ(Shivanna) ಓಂ ಹಾಗೂ ಉಪೇಂದ್ರ ಅವರ ನಾನು ಮತ್ತು ವಿಷ್ಣುವರ್ಧನ್(Vishnuvardhan) ಮತ್ತು ರಮೇಶ್ ಅರವಿಂದ(Ramesh Aravind) ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಆಪ್ತಮಿತ್ರ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಫೆವರೇಟ್ ನಾಯಕ ನಟಿಯಾಗಿದ್ದರು.

ಇನ್ನು ಇತ್ತೀಚಿಗಷ್ಟೇ ಅವರು ನೀಡಿರುವಂತಹ ಒಂದು ಸಂದರ್ಶನ ಸಾಕಷ್ಟು ಸದ್ದು ಮಾಡುತ್ತಿದ್ದು ಈ ಸಂದರ್ಭದಲ್ಲಿ ಅವರು ತಮ್ಮ ಎರಡನೇ ಮದುವೆ ಕುರಿತಂತೆ ಓಡಾಡುತ್ತಿರುವ ಗಾಳಿ ಸುದ್ದಿಗಳಿಗೆ ಖಡಕ್ ಆಗಿ ಉತ್ತರ ನೀಡುವ ಮೂಲಕ ಎಲ್ಲಾ ಸೋಶಿಯಲ್ ಮೀಡಿಯಾ ಕಿ’ ಡಿಗೇಡಿಗಳಿಗೆ ಖಾರವಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಅಷ್ಟಕ್ಕೂ ನಟಿ ಪ್ರೇಮ(Prema) ಅವರು ಈ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಎರಡನೇ ಮದುವೆಯಾಗುವುದು ನನ್ನ ವೈಯಕ್ತಿಕ ವಿಚಾರ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ನನಗಿದೆ. 70ರ ಮುದುಕರು ಕೂಡ ಮದುವೆಯಾಗುತ್ತಿರುವ ಹೊತ್ತಲ್ಲಿ ಒಂದು ವೇಳೆ ನನಗೆ ಒಬ್ಬ ಹುಡುಗ ಇಷ್ಟವಾದರೆ ಮದುವೆಯಾಗುವುದಕ್ಕೆ ನನಗೇನಾಗಿದೆ ಎಂದು ಹೇಳುವ ಮೂಲಕ ಅವರ ಮದುವೆ ವಿಚಾರದ ಕುರಿತಂತೆ ಟೀಕೆ ಮಾಡುತ್ತಿದ್ದ ಜನರಿಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ನಟಿ ಪ್ರೇಮ ಅವರ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!