Ramya: ರಮ್ಯಾ ಅವರ ಪಾತ್ರದ ವಾಯ್ಸ್ ಡಬ್ಬಿಂಗ್ ಮಾಡುತ್ತಿದ್ದಿದ್ದು ಯಾರು ಗೊತ್ತಾ? ಯಾರಿಗೂ ತಿಳಿಯದ ರಹಸ್ಯ ಇದು.

Actress Ramya ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲ ಎಪಿಸೋಡಿನಲ್ಲಿ ಅತಿಥಿಯಾಗಿ ಬಂದು ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನವನ್ನು ಕರ್ನಾಟಕದ ಜನತೆಯ ಮುಂದೆ ಕನ್ನಡವೋ ಅಥವಾ ಇಂಗ್ಲೀಷೋ ಯಾವುದೋ ಒಂದು ಭಾಷೆಯಲ್ಲಿ ವಿವರಿಸಿದ್ದಾರೆ.

ಆದರೆ ಈ ಸಂದರ್ಭದಲ್ಲಿ ಅವರು ತಮ್ಮ ಜೀವನದ ಅತ್ಯಂತ ಪ್ರಮುಖ ವ್ಯಕ್ತಿಯ ವಿಚಾರವನ್ನೇ ಎಲ್ಲೂ ಕೂಡ ಉಲ್ಲೇಖಿಸಿಲ್ಲ. ಇದು ನಿಜಕ್ಕೂ ಕೂಡ ಒಂದು ಲೆಕ್ಕದಲ್ಲಿ ಬೇಸರ ಪಟ್ಟು ಕೊಳ್ಳುವಂತಹ ವಿಚಾರ ಎಂದು ಹೇಳಬಹುದಾಗಿದೆ ಯಾಕೆಂದರೆ ಕನ್ನಡ ಸಿನಿಮಾದಲ್ಲಿ ಅವರು ನಟನೆ ಮಾಡಿದ್ದಷ್ಟೇ ಅವರ ವಾಯ್ಸ್ ಕೂಡ ಪ್ರಮುಖವಾಗಿತ್ತು. ರಮ್ಯಾ ಅವರ ಪಾತ್ರಕ್ಕೆ ಧ್ವನಿಯಾಗಿ ಕಾಣಿಸಿಕೊಂಡಿದ್ದು ನಟಿ ದೀಪ ಭಾಸ್ಕರ್(Deepa Bhaskar).

ಸಿದ್ಲಿಂಗು ಸಿನಿಮಾದ ತನಕವೂ ಕೂಡ ನಟಿ ರಮ್ಯಾ ಅವರ ಪ್ರತಿಯೊಂದು ಪಾತ್ರಗಳು ಗೆಲ್ಲಲು ದೀಪ ಭಾಸ್ಕರ್ ಅವರ ವಾಯ್ಸ್ ಕೂಡ ಅತ್ಯಂತ ಪ್ರಮುಖವಾಗಿತ್ತು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅಷ್ಟರಮಟ್ಟಿಗೆ ರಮ್ಯಾ(Ramya) ಅವರ ನಟನೆ ಹಾಗೂ ದೀಪ ಭಾಸ್ಕರ್ ಅವರ ವಾಯ್ಸ್ ಒಂದಕ್ಕೆ ಒಂದು ಹೊಂದಿಕೊಂಡಂತೆ ಇತ್ತು.

ದೀಪಾ ಭಾಸ್ಕರ್(Deepa Bhaskar) ಅವರು ಕನ್ನಡ ಚಿತ್ರರಂಗದ ಹಲವಾರು ಸಿನಿಮಾಗಳಲ್ಲಿ ಮತ್ತು ಕಿರುತೆರೆಯ ಧಾರವಾಹಿಗಳಲ್ಲಿ ಕೂಡ ಈಗಾಗಲೇ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದು ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಆ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರನ್ನು ಹೊಂದಿದ್ದು ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ರಮ್ಯಾ ಅವರು ತಮ್ಮ ಧ್ವನಿಯನ್ನೇ ಮರೆತಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರ ಬೇಸರಕ್ಕೆ ಕಾರಣವಾಗಿದೆ.

Leave a Comment

error: Content is protected !!