ಕೆಲವು ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದ ಐಶ್ವರ್ಯ ಹಾಗೂ ಧನುಷ್ ರನ್ನು ಒಂದು ಮಾಡಿದ ರಜನೀಕಾಂತ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಅವರ ಮಗಳು ಐಶ್ವರ್ಯ ರಜನಿಕಾಂತ್ ಹಾಗೂ ಕಾಲಿವುಡ್ ನ ಖ್ಯಾತ ನಟ ಆಗಿರುವ ಧನುಷ್ ಇಬ್ಬರೂ ಕೂಡ ಚಿಕ್ಕವಯಸ್ಸಿನಲ್ಲಿಯೇ ಪ್ರೀತಿಸಿ ಮದುವೆಯಾದವರು. ಇವರ ಬಾಳ್ವೆ ಎನ್ನುವುದು ಬೇರೆಯವರಿಗೆ ಮಾದರಿ ಆಗುವಂತೆ ಇವರಿಬ್ಬರೂ ಜೀವಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಇವರು ತೆಗೆದುಕೊಂಡಿದ್ದ ನಿರ್ಧಾರ ಚಿತ್ರರಂಗವನ್ನೆ ನಡುಗಿಸಿತ್ತು.

ಐಶ್ವರ್ಯ ರಜನಿಕಾಂತ್ ಹಾಗೂ ಧನುಷ್ ಇಬ್ಬರೂ ಕೂಡ ಹಲವಾರು ವರ್ಷಗಳ ವೈವಾಹಿಕ ಜೀವನದ ನಂತರವೂ ಕೂಡ ವಿವಾಹ ವಿಚ್ಚೇದನವನ್ನು ಪಡೆದುಕೊಂಡಿದ್ದರು. ಇವರಿಬ್ಬರ ನಡುವಿನ ಬಿರುಕಿನ ಬಗ್ಗೆ ಕೊಂಚವೂ ಕೂಡ ಸುದ್ದಿ ಮಾಧ್ಯಮಗಳಲ್ಲಾಗಲಿ ಅವರ ಆಪ್ತವಲಯದಲ್ಲಾಗಲಿ ಕೇಳಿ ಬಂದಿರಲಿಲ್ಲ ಅಷ್ಟರಮಟ್ಟಿಗೆ ಇಬ್ಬರೂ ಕೂಡ ಸುಂದರವಾಗಿ ಸಂಸಾರವನ್ನು ನಡೆಸಿದ್ದರು. ಆದರೆ ಇವರು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದಾಗ ಅಭಿಮಾನಿಗಳಲ್ಲಿ ನಿಜಕ್ಕೂ ಕೂಡ ಆಕಾಶವೇ ತಲೆ ಮೇಲೆ ಬಿದ್ದಂತೆ ಭಾಸವಾಗಿತ್ತು.

ಇದಾದ ನಂತರ ಐಶ್ವರ್ಯ ರಜನಿಕಾಂತ್ ಅವರು ತಮ್ಮ ತಂದೆ ಜೊತೆಗೆ ಹೋಗಿ ನೆಲೆಸಿದರೆ ಈ ಕಡೆ ಧನುಷ್ ಅವರು ತಮ್ಮ ಸಿನಿಮಾಗಳಲ್ಲಿ ನಿರತರಾಗಿದ್ದರು. ಧನುಷ್ ಅವರ ಇಬ್ಬರು ಗಂಡು ಮಕ್ಕಳು ಕೂಡ ತಂದೆಯ ಜೊತೆಗೆ ಇದ್ದರು. ಈಗ ಡೈವೋರ್ಸ್ ಪಡೆದು ಬರೋಬ್ಬರಿ ಎಂಟು ತಿಂಗಳ ನಂತರ ಇವರಿಬ್ಬರ ಸಂಸಾರದಲ್ಲಿ ಒಂದು ಗುಡ್ ನ್ಯೂಸ್ ಸಿಕ್ಕುವ ಸಾಧ್ಯತೆ ಇದೆ ಎಂಬುದಾಗಿ ಹಲವಾರು ಮೂಲಗಳಿಂದ ತಿಳಿದು ಬಂದಿದೆ.

ಹೌದು ಮಿತ್ರರೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಗಳು ಹಾಗೂ ಅಳಿಯ ಇಬ್ಬರನ್ನು ಕೂಡ ಕೂರಿಸಿಕೊಂಡು ಇಷ್ಟೊಂದು ವರ್ಷದ ಸುಖಮಯ ದಾಂಪತ್ಯ ಜೀವನ ಹಾಗೂ ಮಕ್ಕಳ ಭವಿಷ್ಯ ಹಾಳಾಗಬಾರದು ಇದಕ್ಕಾಗಿ ನೀವಿಬ್ಬರು ಮತ್ತೆ ಒಂದಾಗಬೇಕು ಎಂಬುದಾಗಿ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಇಬ್ಬರು ದಂಪತಿಗಳು ವಿವಾಹ ವಿಚ್ಛೇದನವನ್ನು ವಾಪಾಸ್ ಪಡೆದುಕೊಂಡು ಮತ್ತೆ ಮರಳಿ ಜೊತೆಯಾಗಿ ಜೀವನ ನಡೆಸಲಿದ್ದಾರೆ ಎಂಬುದಾಗಿ ಕೇಳಿ ಬರುತ್ತಿದೆ.

Leave a Comment

error: Content is protected !!