Prashanth Neel: ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಪ್ರಶಾಂತ್ ನೀಲ್ ಪಡೆದ ಹಣ ಕೇಳಿದ್ರೆ ನೀವು ನಡಗ್ತೀರಾ!

Prashanth Neel ನಮ್ಮ ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನೆನಪಿಸಿಕೊಳ್ಳುವಾಗ ಖಂಡಿತವಾಗಿ ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಕೆಜಿಎಫ್ ಚಾಪ್ಟರ್ 2(Kgf Chapter 2) ಸಿನಿಮಾವನ್ನು ಖಂಡಿತವಾಗಿ ಮೊದಲ ಸ್ಥಾನದಲ್ಲಿ ಗಮನಿಸುತ್ತಾರೆ ಯಾಕೆಂದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡವನ್ನು ಟಾಪ್ ಸ್ಥಾನದಲ್ಲಿ ಇಟ್ಟಂತಹ ಸಿನಿಮಾ ಇದಾಗಿದೆ.

1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಸಿನಿಮಾ ಕೂಡ ಸಿನಿಮಾ ಜಗತ್ತಿನಲ್ಲಿ ಇಂತಹ ಸಾಧನೆಯನ್ನು ಮಾಡಬಹುದು ಎನ್ನುವುದನ್ನು ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಸಾಬೀತು ಮಾಡಿ ತೋರಿಸಿದ್ದಾರೆ. ನಿಜಕ್ಕೂ ಇಂತಹ ಸಾಧನೆಯನ್ನು ಮತ್ತೆ ಅವರೇ ಕೂಡ ಮಾಡುತ್ತಾರೆ ಎನ್ನುವುದನ್ನು ಲೆಕ್ಕಾಚಾರ ಹಾಕಲು ಕೂಡ ಸಾಧ್ಯವಿಲ್ಲ ಅಷ್ಟರಮಟ್ಟಿಗೆ ಆ ಸಾಧನೆ ಎನ್ನುವುದು ಬಲವಾಗಿ ನಿಂತಿದೆ.

ಇನ್ನು ಈ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್(Yash) ಸೇರಿದಂತೆ ಬೇರೆ ಕಲಾವಿದರು ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಲೆಕ್ಕಾಚಾರವನ್ನು ಸಿನಿಮಾ ಪಂಡಿತರು ಹಾಕಿದ್ದಾರೆ ಆದರೆ ನಿರ್ದೇಶಕ ಆಗಿರುವ ಪ್ರಶಾಂತ್ ನೀಲ್ ರವರು ಈ ಸಿನಿಮಾಗೆ ಎಷ್ಟು ಸಂಭಾವನೆಯನ್ನು ಪಡೆದಿರಬಹುದು ಎನ್ನುವ ಸತ್ಯ ಹಲವಾರು ಜನರಿಗೆ ತಿಳಿದಿಲ್ಲ. ಈ ಸಿನಿಮಾದಲ್ಲಿ ಪಡೆದಿರುವ ಸಂಭಾವನೆಯ ಮೂಲಕ ಕನ್ನಡ ಚಿತ್ರರಂಗದ ಅತ್ಯಂತ ಶ್ರೀಮಂತ ನಿರ್ದೇಶಕರ ಲಿಸ್ಟಿನಲ್ಲಿ ಪ್ರಶಾಂತ್ ನೀಲ್(Prashanth Neel) ಮೊದಲನೇ ಸ್ಥಾನದಲ್ಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅತ್ಯಧಿಕ ಎನ್ನುವ 15ರಿಂದ 20 ಕೋಟಿಗೂ ಅಧಿಕ ಹಣವನ್ನು ಕೆಜಿಎಫ್ ಚಾಪ್ಟರ್ 2(Kgf 2) ಗಾಗಿ ಪ್ರಶಾಂತ್ ನೀಲ್ ಅವರು ಪಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಈ ಸಿನಿಮಾದ ನಂತರ ಅವರ ಬೇಡಿಕೆ ಹಾಗೂ ಮೌಲ್ಯ ಎರಡು ಕೂಡ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಇದಕ್ಕಿಂತ ದುಪ್ಪಟ್ಟು ಸಂಭಾವನೆಯನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

Leave a Comment

error: Content is protected !!