Daali Dhananjay: ಹಾಸ್ಟೆಲ್ ನಲ್ಲಿ ಇದ್ದಾಗ ಧನಂಜಯ್ ಅವರಿಗೆ ಅದೊಂದು ಕೆಟ್ಟ ಅಭ್ಯಾಸ ಇತ್ತಾ! ಅವರ ಫ್ರೆಂಡ್ಸೆ ಹೇಳಿದ ಮಾತಿದು.

Daali Dhananjay ನಟ ಡಾಲಿ ಧನಂಜಯ್(Dhananjay) ಕಳೆದ 5 ರಿಂದ 6 ವರ್ಷಗಳಲ್ಲಿ ಬೆಳವಣಿಗೆ ಹೊಂದಿರುವ ರೀತಿ ನಿಜಕ್ಕೂ ಕೂಡ ಯಾವುದೇ ಚಮತ್ಕಾರಕ್ಕೂ ಕಡಿಮೆ ಇಲ್ಲ ಎಂದು ಹೇಳಬಹುದಾಗಿದೆ. ಯಾಕೆಂದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಂತಹ ನಟ ಒಬ್ಬ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತಿರುವ ರೀತಿ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಅದರಲ್ಲೂ ಬಡವರ ಮನೆ ಮಕ್ಕಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಚಿತ್ರರಂಗದಲ್ಲಿ ಡಾಲಿ ಧನಂಜಯ್(Daali Dhananjay) ಮಿಂಚುತ್ತಿದ್ದಾರೆ.

ಪ್ರತಿಯೊಂದು ಸಿನಿಮಾಗಳಲ್ಲಿ ಒಂದೊಂದು ಸಿನಿಮಾಗಳನ್ನು ಕೂಡ ವಿಭಿನ್ನವಾಗಿ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಾ ಒಂದೊಂದೇ ಹಂತವಾಗಿ ಚಿತ್ರರಂಗದಲ್ಲಿ ಅವರು ಮೇಲೆಕ್ಕೇರಿರುವ ರೀತಿ ಬಡವರ ಮನೆ ಮಕ್ಕಳು ಈ ರೀತಿ ಕೂಡ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಇನ್ನು ಕಾಲೇಜ್ ದಿನಗಳಲ್ಲಿ ಡಾಲಿ ಧನಂಜಯ್ ಅವರಿಗೆ ಒಂದು ಕೆಟ್ಟ ಅಭ್ಯಾಸ ಇತ್ತು ಅದನ್ನು ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ವೇದಿಕೆಯಲ್ಲಿ ಅವರ ಗೆಳೆಯರೇ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಆ ಕೆಟ್ಟ ಅಭ್ಯಾಸ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ಅವರ ಗೆಳೆಯರೇ ಬಹಿರಂಗಪಡಿಸಿರುವ ಆಧಾರದ ಮೇರೆಗೆ ಹಾಸ್ಟೆಲ್ ದಿನಗಳಲ್ಲಿ ಡಾಲಿ ಧನಂಜಯ್(Daali Dhananjay) ಅವರಿಗೆ ಇಸ್ಪೀಟ್ ಆಡುವಂತಹ ಒಂದು ಅಭ್ಯಾಸ ಇತ್ತು ಎಂಬುದನ್ನು ಈ ಸಂದರ್ಭದಲ್ಲಿ ಮೊದಲ ಬಾರಿಗೆ ವೇದಿಕೆಯ ಮೇಲೆ ತಿಳಿಸಿದ್ದಾರೆ. ಡಾಲಿ ಧನಂಜಯ್ ಅವರ ಈ ಅಭ್ಯಾಸದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!