Daali Dhananjay: ಡಾಲಿ ಧನಂಜಯ್ ಮೊದಲು ಎಲ್ಲಿ ಕೆಲಸ ಮಾಡುತ್ತಿದ್ರು ಹಾಗೂ ತಮ್ಮ ಮೊದಲ ಸಂಬಳದಲ್ಲಿ ಏನು ಮಾಡಿದ್ರು ಗೊತ್ತಾ?

Daali Dhananjay ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಕನ್ನಡ ಚಿತ್ರರಂಗದಲ್ಲಿ ಓಡಾಡುತ್ತಿದ್ದ ಹಾಗೂ ಪರದಾಡುತ್ತಿದ್ದ ಪ್ರತಿಭೆ ಇಂದು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಾಯಕನಟನಾಗಿ ಯುವ ಪ್ರೇಕ್ಷಕರ ನೆಚ್ಚಿನ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹೌದು ನಾವು ಮಾತನಾಡುತ್ತಿರುವುದು ನಟರಾಕ್ಷಸ ಡಾಲಿ ಧನಂಜಯ್(Daali Dhananjay) ಅವರ ಕುರಿತಂತೆ. ಇನ್ನು ಈ ವಾರಾಂತ್ಯದ ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಕೂಡ ಅವರು ಬಂದಿದ್ದಾರೆ.

ಕರ್ನಾಟಕದ ಸಾಕಷ್ಟು ಸಾಧಕರು ಕುಳಿತಿರುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಡಾಲಿ ಧನಂಜಯ್(Daali Dhananjay) ಇಷ್ಟೊಂದು ಕಡಿಮೆ ವಯಸ್ಸಿನಲ್ಲಿ ಕುಳಿತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚಬೇಕಾಗಿರುವಂತಹ ವಿಚಾರವಾಗಿದೆ.

ಇನ್ನು ಈ ಸಂದರ್ಭದಲ್ಲಿ ಅವರು ನಟನೆಯ ಕೆಲಸವನ್ನು ಮೊದಲ ಆಯ್ಕೆಯಾಗಿ ತೆಗೆದುಕೊಂಡಿರಲಿಲ್ಲ ಬದಲಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಸಿನಿಮಾದಲ್ಲಿ ಏನಾದರೂ ಮಾಡಬೇಕು ಎನ್ನುವ ಉದ್ದೇಶಕ್ಕಾಗಿಯೇ ಇನ್ಫೋಸಿಸ್(Infosys) ಕೆಲಸವನ್ನು ತೊರೆದು ನಂತರ ಚಿತ್ರರಂಗಕ್ಕೆ ಸೇರಿದರು ಎಂಬುದಾಗಿ ಕೂಡ ವೀಕೆಂಡ್ ವಿತ್ ರಮೇಶ್(Weekend With Ramesh) ವೇದಿಕೆಯ ಮೇಲೆ ತಿಳಿದುಬಂದಿದೆ.

ಹೌದು ಮಿತ್ರರೇ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಬಂದಂತಹ ಮೊದಲ ತಿಂಗಳ ಸಂಬಳದಲ್ಲಿ ಡಾಲಿ ಧನಂಜಯ್(Daali Dhananjay) ಅವರು ತಮ್ಮ ಮನೆಯವರನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗಿ ಅವರಿಗೆ ಬೇಕಾದಂತಹ ವಸ್ತುಗಳನ್ನು ತೆಗೆಸಿಕೊಟ್ಟಿದ್ದರು ಎಂಬುದಾಗಿ ತಿಳಿದು ಬಂದಿದೆ. ಇಂತಹ ಮಗನನ್ನು ಪಡೆದಂತಹ ಅವರ ಹೆತ್ತವರೆ ಧನ್ಯರು ಎಂದರು ಕೂಡ ತಪ್ಪಾಗಲಾರದು.

Leave a Comment

error: Content is protected !!