Darshan: ಜಗದ ಸುಖವೆಲ್ಲವೂ ಇರಲಿ ಈ ಕೈಯಲ್ಲಿ ಎಂದು ತನ್ನ ಅಣ್ಣ ದಾಸನಿಗೆ ಶುಭ ಕೋರಿದ ನಟಿ ಅಮೂಲ್ಯ!

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಕಲಾವಿದರೊಂದಿಗೆ ತಮ್ಮ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡಿರುವಂತಹ ಡಿ ಬಾಸ್ ದರ್ಶನ್ ಅವರ ಜನುಮದಿನಕ್ಕೆ ಶುಭಾಶಯಗಳು ಮಹಾಪೂರವೇ ಹರಿದು ಬಂತು ಎಂದರೆ ತಪ್ಪಾಗಲಾರದು. ಎಲ್ಲ ಸ್ಟಾರ್ ನಟ ನಟಿಯರು ದರ್ಶನ್(Darshan) ಅವರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

ಅದರಂತೆ ಲಾಲಿಹಾಡು ಸಿನಿಮಾದಲ್ಲಿ ದರ್ಶನ್ರವರ ತಂಗಿಯಾಗಿ ಅಭಿನಯಿಸಿ ಆನಂತರ ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯಾಗಿ ಮಾರ್ಪಟ್ಟಂತಹ ಅಮೂಲ್ಯ ಅವರು ಕೂಡ ದರ್ಶನ್(Darshan) ಜೊತೆಗಿನ ಸೆಲ್ಫಿ ಫೋಟೋಗಳನ್ನು ಶೇರ್ ಮಾಡಿ ಹ್ಯಾಪಿ ಬರ್ತಡೆ ಡಿ ಬಾಸ್ ಜಗದ ಸುಖವೆಲ್ಲವೂ ಇರಲಿ ಈ ಕೈಯಲ್ಲಿ ಇರುವವರೆಗೂ ಕೊನೆಯವರೆಗೂ ಎಂಬ ಶೀರ್ಷಿಕೆ ಬರೆದು ದರ್ಶನ್ ಜೊತೆಗಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ದರ್ಶನ್ ಮತ್ತು ಅಮೂಲ್ಯ ಇಬ್ಬರು ಒಂದೇ ರೀತಿಯ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದಾರೆ. ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ಅವರು ಹಸಿರು ಬಣ್ಣದ ಚಕ್ಸ್ ಶರ್ಟ್ ಹಾಕಿಕೊಂಡು ತಮ್ಮ ಮಕ್ಕಳನ್ನು ಹಿಡಿದು ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ತನ್ನ ಪ್ರೀತಿಯ ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲು ಈ ವರ್ಷ ಅಮೂಲ್ಯ ಅವರು ರಾಜರಾಜೇಶ್ವರಿ ನಗರದಲ್ಲಿ ಇರುವಂತಹ ದರ್ಶನ್(Darshan) ಅವರ ನಿವಾಸಕ್ಕೆ ತಮ್ಮ ಇಬ್ಬರೂ ಮಕ್ಕಳಾದ ಅಥರ್ವ ಮತ್ತು ಆದವ್ ಹಾಗೂ ಪತಿ ಜಗದೀಶ್ ಅವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ.

ಆ ಸಮಯದಲ್ಲಿ ದರ್ಶನ್ ದಂಪತಿ ಗಳನ್ನು ಸತ್ಕರಿಸುವುದರ ಜೊತೆಗೆ ಅವರೊಂದಿಗೆ ನಗುನಗುತ ಮಾತನಾಡಿ ಕೆಲ ಅಮೂಲ್ಯವಾದ ಸಮಯವನ್ನು ಕಳೆದಿದ್ದಾರೆ. ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ನಟಿ ಅಮೂಲ್ಯ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಂಕಲ್ ಎಂದು ಕರೆಯುತ್ತಿದ್ದರಂತೆ. ಕಾಲಕ್ರಮೇಣ ಇವರಿಬ್ಬರ ಬಾಂಧವ್ಯ ಅಣ್ಣ ತಂಗಿಯಾಗಿ ಬದಲಾಗಿದ್ದು ಅವರ ಪ್ರತಿ ಸಿನಿಮಗಳಿಗೂ ಪ್ರೋತ್ಸಾಹಿಸಲು ಅಮೂಲ್ಯ ಅವರೇ ಸಿನಿಮಾ ಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಹಾಗೂ ಅಮೂಲ್ಯ(Amulya) ಅವರ ಮನೆಯಲ್ಲಿ ಆಚರಿಸಲಾಗುವಂತಹ ಪ್ರತಿ ವಿಶೇಷ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಆಹ್ವಾನಿಸುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!