ವಿಕಲಚೇತನ ಅಭಿಮಾನಿಗಳೊಂದಿಗೆ ದಾಸ ದರ್ಶನ್, ಈ ಅಪರೂಪದ ಚಿತ್ರಕ್ಕೆ ಅಭಿಮಾನಿಗಳು ಬಾರಿ ಮೆಚ್ಚುಗೆ

ಸ್ನೇಹಿತರೆ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ ಕರುನಾಡ ಅಧಿಪತಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Dashan) ಅವರು ಫೆಬ್ರವರಿ 16ನೇ ತಾರೀಕಿನಂದು ತಮ್ಮ ಅದ್ದೂರಿ 47ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು, ಕುಟುಂಬಸ್ಥರ ಹಾಗೂ ಸ್ನೇಹಿತರ ಜೊತೆಗೆ ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಇವರ ಜನ್ಮದಿನದ ಸಂಭ್ರಮಕ್ಕೆ ಕನ್ನಡ ಸಿನಿಮಾರಂಗದ ತಾರೆಯರು ಹಾಗೂ ಅಭಿಮಾನಿ ಬಳಗದವರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರವನ್ನು ಹರಿಸಿದ್ದಾರೆ.

ಅದರಂತೆ ವಿಕ.ಲ ಚೇತನ ಮಹಿಳೆಯರು ದರ್ಶನ್ ಅವರೊಟ್ಟಿಗೆ ತೆಗೆದುಕೊಂಡಿದ್ದಂತಹ ಫೋಟೋವನ್ನು ಹಂಚಿಕೊಂಡು ಪ್ರೀತಿಯ ದಾಸನಿಗೆ ಶುಭಾಶಯವನ್ನು ಕೋರಿದ್ದು ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಹೌದು ಸ್ನೇಹಿತರೆ ತನ್ನ ಪ್ರೀತಿಯ ಸೆಲೆಬ್ರಿಟಿಸ್ ಗಳನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುವಂತಹ ದರ್ಶನ್ (Dashan) ಅವರಿಗೆ ತಮ್ಮ ಕುಟುಂಬಸ್ಥರು ಎಷ್ಟು ಮುಖ್ಯವೋ ಅಭಿಮಾನಿಗಳು ಅಷ್ಟೇ ಮುಖ್ಯ.

ಹೀಗಾಗಿ ತಮ್ಮ ವಿಶೇಷ ದಿನಗಳನ್ನು ಅಭಿಮಾನಿಗಳ ಜೊತೆಗೆ ಸಂಭ್ರಮಿಸುತ್ತಾ ದಾಸ ಸದಾ ಖುಷಿ ಪಡುತ್ತಿರುತ್ತಾರೆ. ಅಭಿಮಾನಿಗಳು ಇಚ್ಚಿಸುವಂತಹ ಬೇಡಿಕೆಯನ್ನು ಯಾವುದೇ ದೊಡ್ಡಸ್ತಿಕೆ ಹಾಗೂ ಅಹಂಕಾರವಿಲ್ಲದೆ ಈಡೇರಿಸುವಂತಹ ದರ್ಶನವರು ಇಬ್ಬರು ಅವಳಿ ಜವಳಿ ಅಭಿಮಾನಿಗಳು ಮನೆಗೆ ಬಂದಂತಹ ಸಮಯದಲ್ಲಿ ಅವರನ್ನು ಸತ್ಕರಿಸುವುದರ ಜೊತೆಗೆ ಅವರ ಜೊತೆ ಕುಳಿತು ಫೋಟೋ ತೆಗೆಸಿಕೊಂಡಿದ್ದು ದರ್ಶನ್ರವರ ಜನುಮದಿನದ ಅಂಗವಾಗಿ ಈ ಫೋಟೋವನ್ನು ಅಭಿಮಾನಿಗಳು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಅವರ ಪ್ರತಿ ಹುಟ್ಟುಹಬ್ಬ ಹಾಗೂ ಸಿನಿಮಾಗಳನ್ನು ಹಬ್ಬದಂತೆ ಆಚರಿಸುವಂತಹ ಅಭಿಮಾನಿಗಳು ಫೆಬ್ರವರಿ 16ನೇ ತಾರೀಕು ಮಧ್ಯರಾತ್ರಿ ಇಂದ ಎಲ್ಲೆಡೆ ಪಟಾಕಿಗಳನ್ನು ಸಿಡಿಸಿ ಕೇಕ್ ಕತ್ತರಿಸುವ ಮುಖಾಂತರ ಆಚರಣೆಯನ್ನು ಆರಂಭಿಸಿದ್ದರು. ದರ್ಶನ್ (Dashan) ಕೂಡ ಬಿಡುವು ಮಾಡಿಕೊಂಡು ತಮ್ಮ ಫ್ಯಾನ್ಸ್ಗಳ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ತಮ್ಮ ಮುಂದಿನ ಸಿನಿಮಾದ ಕುರಿತು ಮಾಹಿತಿಯನ್ನು ಅನಾವರಣಗೊಳಿಸಿದ್ದಾರೆ.

ಹೌದು ಗೆಳೆಯರೇ ದರ್ಶನ್ರವರ ಭರ್ಜರಿ ಬರ್ತಡೇ ದಿನವೇ ಅವರ 57ನೇ ಸಿನಿಮಾ ಡೆವಿಲ್ ಚಿತ್ರದ(Devil movie glimpse) ಗ್ಲಿಪ್ಸ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು ನಿರ್ದೇಶಕ ಪ್ರಕಾಶ್ ಅವರ ನಿರ್ದೇಶನದಲ್ಲಿ ಹಾಗೂ ಜೆ ಜಯಮ್ಮ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವಂತಹ ಸಿನಿಮಾದಲ್ಲಿ ದರ್ಶನ್ ಬಹಳ ರಾಯಲ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಮೇಲಿನ ನಿರೀಕ್ಷೆ ಅದಾಗಲೇ ಅಭಿಮಾನಿಗಳ ಮನಸ್ಸಿನಲ್ಲಿ ಹೆಚ್ಚಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!