Darshan: ಬರ್ತಡೆ ಪಾರ್ಟಿಲಿ ಖುಷಿಯಿಂದ ಕುಣಿದು ಕುಪ್ಪಳಿಸಿದ ಡಿ ಬಾಸ್ ವೈರಲ್ ಆಯ್ತು ವೀಡಿಯೊ

Darshan ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಆತ್ಮೀಯರಿಗಾಗಿ ಸಮಯ ನೀಡುವುದನ್ನು ಎಂದು ಮರೆಯುವುದಿಲ್ಲ. ಯಾವುದೇ ಸಹ ನಟರ ಸಿನಿಮಾಗಳ ಪ್ರಮೋಷನ್ ಕೆಲಸಗಳಿದ್ದರೂ ಬರ್ತಡೇ ಪಾರ್ಟಿಗಳಿದ್ದರೂ ತಪ್ಪದೆ ಹಾಜರಾಗಿ ಖುಷಿಯನ್ನು ದುಪ್ಪಟ್ಟು ಮಾಡುವಂತಹ ದರ್ಶನ್ನವರು ಇದೀಗ ನಟಿ ಪಲ್ಲವಿ ಗೌಡ(Pallavi Gowda) ಅವರ ಮಗಳು ಖುಷಿ ಗೌಡ(Kushi Gowda) ಅವರ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿ ಖುಷಿ ಅವರೊಂದಿಗೆ ಖುಷಿ ಖುಷಿಯಿಂದ ಕ್ರಾಂತಿ ಸಿನಿಮಾದ ಗೊಂಬೆ ಗೊಂಬೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪ್ರೀತಿಯ ದಾಸನಿಗೆ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯ ಮೂಲಕ ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ. ಹೌದು ಗೆಳೆಯರೇ ಸಿನಿಮಾದ ಚಿತ್ರೀಕರಣ ಕೆಲಸಗಳಲ್ಲಿ ತೊಡಗಿಕೊಂಡು ಸಿಕ್ಕಾಪಟ್ಟೆ ಬಿಜಿ ಇರುವಂತಹ ನಟ. ಇದರ ಜೊತೆಗೆ ಹುಲಿ ಉಗುರಿನ ಪ್ರಕ-ರಣ ಹಾಗೂ ದರ್ಶನ್(Darshan) ಅವರ ಮನೆಯ ನಾಯಿಯೊಂದು ಮಹಿಳೆಯೊಬ್ಬರಿಗೆ ಕಚ್ಚಿದಂತಹ ಪ್ರಕರಣದಲ್ಲಿಯೂ ಸಿಲುಕಿಕೊಂಡಿದಂತಹ ದರ್ಶನವರು ಎಲ್ಲವನ್ನು ಎದುರಿಸಿ ಇದೀಗ ಮತ್ತೆ ಕಮಲ್ ಶೂಟಿಂಗ್ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.

ಹೌದು ಗೆಳೆಯರೇ ದರ್ಶನವರ ಕಾಟೇರ ಸಿನಿಮಾ ಯಾವಾಗ ತೆರೆಗೆ ಬರುತ್ತದೆ ಎಂದು ಅಭಿಮಾನಿಗಳು ಎದುರು ನೋಡುತ್ತಿರುವಾಗ ದರ್ಶನ್ ತಮ್ಮ 57ನೇ ಸಿನಿಮಾ ಅನೌನ್ಸ್ ಮಾಡಿದ್ದು ಸಿನಿಮಾದ ಮುಹೂರ್ತದ ಕಾರ್ಯಕ್ರಮವನ್ನು ನವೆಂಬರ್ ಎರಡನೇ ತಾರೀಕು ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿಸಿದ್ದಾರೆ.

ಕಾಟೇರ ತೆರೆಗೆ ಬಂದ ನಂತರ ದರ್ಶನ್ ತಮ್ಮ ಮುಂದಿನ ಸಿನಿಮಾ ಡೆವಿಲ್ ನಲ್ಲಿ ತೊಡಗಿಕೊಳ್ಳಲಿದ್ದು ಈ ಎಲ್ಲದರ ನಡುವೆ ಛತ್ರಿಗಳು ಸಾರ್ ಛತ್ರಿಗಳು(Chatrigalu Sir Chatrigalu) ಸಿನಿಮಾ ಖ್ಯಾತಿಯ ನಟಿ ಪವಿತ್ರ ಗೌಡ ಅವರ ಮಗಳು ಖುಷಿ ಗೌಡ ಅವರ ಬರ್ತಡೇ ಪಾರ್ಟಿಯಲ್ಲಿ ದರ್ಶನ್ ಕಾಣಿಸಿಕೊಂಡು ಅವರೊಂದಿಗೆ ಕೇಕ್ ಕತ್ತರಿಸಿ ಶುಭಾಶಯವನ್ನು ಕೋರುವುದರ ಜೊತೆಗೆ ತಮ್ಮದೇ ಸಿನಿಮಾದ ಗೊಂಬೆ ಗೊಂಬೆ ನನ್ನ ಮುದ್ದು ಗೊಂಬೆ ಹಾಡನ್ನು ಹಾಕಿ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!