Dboss: ಡಿ ಬಾಸ್ ಕುಂತ್ರು ಸುದ್ದಿ ನಿಂತ್ರು ಸುದ್ದಿ! ದರ್ಶನ್ ಅವರ ಹೆಸರಿನಲ್ಲಿ ದಾಖಲಾಯಿತು ಮತ್ತೊಂದು ರೆಕಾರ್ಡ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆ ನೆನಪಿರಬಹುದು ಒಂದು ಸಂದರ್ಭದಲ್ಲಿ ನಾವು ನಿಂತ್ರು ಸುದ್ದಿ ಕುಂತ್ರು ಸುದ್ದಿನೇ, ಒಟ್ಟಾರೆ ಪ್ರಚಾರದಲ್ಲಿ ಇರಬೇಕು ಎನ್ನುವುದಾಗಿ ತಮ್ಮ ವಿರುದ್ಧ ಕೇಳಿ ಬರುತ್ತಿದ್ದಂತಹ ಅಪಪ್ರಚಾರಗಳ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಆ ಮಾತು ನೂರಕ್ಕೆ ನೂರರಷ್ಟು ನಿಜ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ದರ್ಶನ್(Darshan) ಅವರು ಯಾವುದೇ ವಿಚಾರದ ಕುರಿತಂತೆ ಮಾತನಾಡದಿದ್ದರೂ ಕೂಡ ಅವರ ಹೆಸರು ಪ್ರಚಾರದಲ್ಲಿ ಇರೋದಂತೂ ನಿಜ.

ಅದಕ್ಕೆ ಸಾಕ್ಷಿ ಅನ್ನುವಂತೆ ಈಗ ಕ್ರಾಂತಿ(Kranti) ಸಿನಿಮಾದ ಒಂದು ರೆಕಾರ್ಡ್ ಈಗ ಕೇಳಿ ಬರುತ್ತಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಆಶ್ಚರ್ಯ ಪಡುವಂತಿದೆ. ಒಂದು ಸಮಯದಲ್ಲಿ ಸಾಕಷ್ಟು ಅಪಪ್ರಚಾರಗಳ ನಡುವೆ ಕೂಡ ಜನವರಿ 26ರಂದು ಬಿಡುಗಡೆಯಾದಂತಹ ಕ್ರಾಂತಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದ ಕ್ರಾಂತಿಯನ್ನು ಸೃಷ್ಟಿಸಿತ್ತು. ಆದರೆ ಅದು ಬಿಡುಗಡೆಯಾಗಿ ಈಗಾಗಲೇ ಹಲವಾರು ತಿಂಗಳುಗಳ ಕಳೆದು ಹೋಗಿದ್ದರೂ ಕೂಡ ಇನ್ನೂ ಕ್ರಾಂತಿ ಸಿನಿಮಾ(Kranti Film) ಸುದ್ದಿಯಲ್ಲಿದೆ.

ಅದು ಕೇವಲ ಸುದ್ದಿಯಲ್ಲ ಹೊಸ ದಾಖಲೆಯನ್ನು ನಿರ್ಮಿಸಿರೋದು ಈ ಸುದ್ದಿ ದೊಡ್ಡ ಮಟ್ಟದಲ್ಲಿ ಹರಡುವಂತೆ ಮಾಡಿದೆ. ಹೌದು ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಒಟ್ಟಾರೆ ಟ್ರೈಲರ್ ಟೀಸರ್ ಹಾಗೂ ಎಲ್ಲಾ ಸಾಂಗುಗಳು ಸೇರಿ ಅವರ ಆಲ್ಬಮ್ 100 ಮಿಲಿಯನ್ ವೀಕ್ಷಣೆಯನ್ನು ಪೂರೈಸಿರುವಂತಹ ಸಾಧನೆಯನ್ನು ನಿರ್ಮಿಸಿದೆ. ಇದು ಕೂಡ ಬಿಡುಗಡೆಯಾದ ಹಲವಾರು ಸಮಯಗಳ ನಂತರ ಎನ್ನುವುದು ಮತ್ತೊಂದು ವಿಶೇಷ.

ಕೇವಲ ಇದೊಂದು ವಿಚಾರ ಸಾಕು ಕ್ರಾಂತಿ ಸಿನಿಮಾ ಯಾವ ಮಟ್ಟದಲ್ಲಿ ಯಶಸ್ಸನ್ನು ಪಡೆದಿತ್ತು ಎನ್ನುವುದು. ಎಲ್ಲಕ್ಕಿಂತ ಪ್ರಮುಖವಾಗಿ ಈ ರೀತಿಯ ಪ್ರತಿಯೊಂದು ಯಶಸ್ಸಿಗೂ ನಿಜವಾದ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಜನಪ್ರಿಯತೆ ಹಾಗೂ ಅವರಿಗಿರುವಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗ ಎನ್ನುವುದನ್ನು ಮಾತ್ರ ನಾವು ನೆನಪು ಬಿಡಬಾರದು.

Leave a Comment

error: Content is protected !!