Daali Dhananjay: ಡಿ ಬಾಸ್ ನಟನೆಯ ಯಜಮಾನ ಸಿನಿಮಾದಲ್ಲಿ ನಟಿಸಲು ಡಾಲಿ ಧನಂಜಯ್ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಯಜಮಾನ ಸಿನಿಮಾ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿ ಯಾವ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯನ್ನು ನಿರ್ಮಿಸಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನು ಈ ಸಿನಿಮಾದಲ್ಲಿ ಸಾಕಷ್ಟು ದೊಡ್ಡ ಮಟ್ಟದ ತಾರಾ ಗಣ ಕೂಡ ಇತ್ತು.

ಡಾಲಿ ಧನಂಜಯ್(Daali Dhananjay) ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಎದುರು ಖಳನಾಯಕನಾಗಿ ಯಜಮಾನ ಸಿನಿಮಾದಲ್ಲಿ(Yajamana Film) ಕಾಣಿಸಿಕೊಂಡಿದ್ದರು. ಇವರಿಬ್ಬರನ್ನು ಒಂದೇ ಪರದೆಯ ಮೇಲೆ ಎದುರುಬದು ನೋಡಲು ಪ್ರತಿಯೊಬ್ಬರೂ ಕೂಡ ಕಾತರರಾಗಿ ಕಾದು ಸಿನಿಮಾ ಥಿಯೇಟರ್ ಗಳಲ್ಲಿ ಚಿತ್ರವನ್ನು ವೀಕ್ಷಿಸಿ ಆನಂದಿಸಿದ್ದರು. ಸಿನಿಮಾದಲ್ಲಿ ರಶ್ಮಿಕ ಮಂದಣ್ಣ(Rashmika Mandanna) ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಮನರಂಜನೆಯ ಜೊತೆಗೆ ಕನ್ನಡ ಪ್ರೇಕ್ಷಕರಿಗೆ ಸಾಮಾಜಿಕ ಸಂದೇಶವನ್ನು ಕೂಡ ನೀಡಿತು. ಈ ಸಮಯದಲ್ಲಿ ಖಳನಾಯಕನಾಗಿ ನಟಿಸಲು ಈ ಸಿನಿಮಾಗೆ ಡಾಲಿ ಧನಂಜಯ್(Dhananjay) ಪಡೆದುಕೊಂಡ ಸಂಭಾವನೆ ಎಷ್ಟು ಕೋಟಿ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಅದಾಗಲೇ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿದ್ದ ಡಾಲಿ ಧನಂಜಯ್ ಡಿ ಬಾಸ್(Dboss) ರವರ ಸಿನಿಮಾ ಎನ್ನುವ ಕಾರಣಕ್ಕಾಗಿ ಯಜಮಾನ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾಗಾಗಿ ಭರ್ಜರಿ 1.5 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೂಡಿ ಬಂದಿರುವಂತಹ ಇವರಿಬ್ಬರ ಕಾಂಬಿನೇಷನ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!